ಪಾಲಕರಿಗೆ ಮತದಾನದಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಸಲಹೆ
ಬೀದರ್:ಏ.26:ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ಅರಿತುಕೊಂಡುತಮ್ಮ ಪಾಲಕರಿಗೆ ಮೇ 7 ರಂದು ನಡೆಯಲಿರುವ ಲೋಕಸಭಾಚುನಾವಣೆಯುಲ್ಲಿತಪ್ಪದೇ ಮತದಾನ ಮಾಡುವಂತೆಅರಿವು ಮೂಡಿಸಬೇಕು’ ಎಂದುಜಿಲ್ಲಾ ಸ್ವೀಪ್ ಸಮಿತಿಯಅಧ್ಯಕ್ಷರಾದಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಗಿರೀಶ್ ದಿಲೀಪ್ ಬದೋಲೆ ಸಲಹೆ ಮಾಡಿದರು.
ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿನಗರದ ಮಾಮನಕೇರದಲ್ಲಿರುವಜ್ಞಾನಸುಧಾ ವಿದ್ಯಾಲಯದಜ್ಞಾನರಂಗ ಸಭಾಂಗಣದಲ್ಲಿಗುರುವಾರ ಆಯೋಜಿಸಿದ ಮತದಾನಜಾಗೃತಿಕಾರ್ಯಕ್ರಮದಲ್ಲಿಅವರು ಮಾತನಾಡಿದರು.
‘ಮುಂದಿನ ಮೂರು-ನಾಲ್ಕು ವರ್ಷದಲ್ಲಿ ನೀವು 18 ವರ್ಷತುಂಬಿ ಮತದಾರರಾಗುತ್ತೀರಿ.ಹೀಗಾಗಿ ನೀವುಈಗಿನಿಂದಲೇಚುನಾವಣೆಯಲ್ಲಿಮತದಾನ ಮಾಡುವುದು ಎಷ್ಟು ಮಹತ್ವದ್ದುಎನ್ನುವುದರ ಬಗ್ಗೆ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.
‘ಪ್ರಜಾಪ್ರಭುತ್ವರಾಷ್ಟ್ರದಲ್ಲಿ ಸುಭದ್ರವಾದ ಸರ್ಕಾರರಚನೆ ಮಾಡುವಲ್ಲಿ ಮತದಾರರ ಪಾತ್ರ ಬಹಳ ಪ್ರಮುಖವಾಗಿದೆ.18 ವರ್ಷ ಮೇಲ್ಪಟ್ಟವರಿಗೆ ಸಂವಿಧಾನಬದ್ಧವಾಗಿ ನೀಡಲಾಗಿರುವ ಮತದಾನ ಹಕ್ಕು ಚಲಾಯಿಸುವ ಅವಕಾಶ ಪ್ರತಿಐದು ವರ್ಷಕ್ಕೊಮ್ಮೆ ಬರುತ್ತದೆ.ಮತದಾರರು ಈ ಅವಕಾಶವನ್ನು ಕಳೆದುಕೊಳ್ಳಬಾರದು.ದೇಶದಅಭಿವೃದ್ಧಿಯದೃಷ್ಟಿಯಿಂದ ಮತದಾನ ಮಾಡುವುದುಅತ್ಯಂತ ಮಹತ್ವದಕಾರ್ಯವಾಗಿದೆ.ವಿದ್ಯಾರ್ಥಿಗಳುಇದನ್ನುಅರಿತುಕೊಂಡುತಮ್ಮ ಸುತ್ತಮುತ್ತಇರುವ ಪ್ರತಿಯೊಬ್ಬ ಮತದಾರರಿಗೆತಪ್ಪದೇ ಮತಚಲಾಯಿಸುವಂತೆಉತ್ತೇಜನ ನೀಡಬೇಕು’ಎಂದು ಹೇಳೀದರು.
2019ರ ಬೀದರ್ ಲೋಕಸಭಾಚುನಾವಣೆಯಲ್ಲಿಕೇವಲ ಶೇ.64 ರಷ್ಟು ಮತದಾರರು ಮಾತ್ರತಮ್ಮ ಹಕ್ಕು ಚಲಾಯಿಸಿದರು.ಉಳಿದ ಶೇ 36 ರಷ್ಟುಜನಮತದಾನದಿಂದದೂರ ಉಳಿದಿದ್ದರು.ಇದೇ ಮೇ 7 ರಂದು ನಡೆಯಲಿರುವಬೀದರ್ ಲೋಕಸಭಾಚುನಾವಣೆಯಲ್ಲಿ ಕನಿಷ್ಠ ಶೇ 80ರಷ್ಟು ಮತದಾನ ಆಗಬೇಕು ಎಂಬ ಗುರಿಜಿಲ್ಲಾ ಸ್ವೀಪ್ ಸಮಿತಿ ಹೊಂದಿದೆ. ಹೀಗಾಗಿ ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ತಮ್ಮ ಪಾಲಕರಿಗೆ ತಿಳಿ ಹೇಳಿ ಮತದಾನ ಮಾಡುವಂತೆ ಪ್ರೇರೇಪಿಸಿ.ಈ ಮೂಲಕಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸಹಕರಿಸಬೇಕುಎಂದು ಮನವಿ ಮಾಡಿದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದಡಾ. ಪೂರ್ಣಿಮಾ ಜಿ. ಅವರು ಮಾತನಾಡಿ, ‘ಪ್ರಜಾಪ್ರಭುತ್ವದ ಹಿತಕ್ಕಾಗಿ ಮತಚಲಾಯಿಸುವುದು ಪ್ರತಿಯೊಬ್ಬ ಮತದಾರರಜವಾಬ್ದಾರಿಯಾಗಿದೆ.ಇಂತಹ ಪಕ್ಷಕ್ಕೆ ಮತ ಹಾಕಿ ಎಂದು ಹೇಳದೆ ಕೇವಲ ಮತದಾನದಲ್ಲಿತಮ್ಮ ಹಕ್ಕು ಚಲಾಯಿಸಿ ಎಂದುತಮ್ಮತಮ್ಮ ಮನೆಯಲ್ಲಿಇರುವ ಮತದಾರರಿಗೆ ತಿಳಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕು’ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮೇ 7 ರಂದು ನಡೆಯಲಿರುವಮತದಾನದಂದುರಜೆಇರುತ್ತದೆ ಎಂಬ ಭಾವಿಸಿ ಪಾಲಕರೊಂದಿಗೆ ಬೇರೆಊರಿಗೆ ಹೋಗದೆತಮ್ಮ ಪಾಲಕರಿಗೆತಮ್ಮ ಮತ ಹಕ್ಕು ಚಲಾಯಿಸುವಂತೆ ತಿಳಿಸಬೇಕು ಎಂದುಜಿಲ್ಲಾ ನೋಡಲ್‍ಅಧಿಕಾರಿಡಾ.ಗೌತಮ ಅರಳಿ ತಿಳಿಸಿದರು.
‘ಮತದಾನ ಪ್ರಜಾಪ್ರಭುತ್ವದ ಹಬ್ಬವಾಗಿದೆ.ಬಹಳಷ್ಟು ಜನ ಮತದಾನ ಮಾಡುವುದರಿಂದ ಏನು ಪ್ರಯೋಜನವಿದೆಎಂದು ಭಾವಿಸಿ ತಮ್ಮ ಹಕ್ಕು ಚಲಾಯಿಸದೆದೂರ ಉಳಿಯುತ್ತಾರೆ.ಇನ್ನೂ ಕೇಲವರು ಸೂಕ್ತ ಅಭ್ಯರ್ಥಿಇಲ್ಲಎಂದುದೂರ ಉಳಿಯುತ್ತಾರೆ.ಅಂತಹ ಸಮಯುದಲ್ಲಿ ನೋಟಾ ಹಾಕಬಹುದು.ಒಟ್ಟನಲ್ಲಿ ವಿದ್ಯಾರ್ಥಿಗಳು ತಮ್ಮ ಪಾಲಕರು ಮತದಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು’ಎಂದುಜ್ಞಾನಸುಧಾ ವಿದ್ಯಾಲಯದ ನಿರ್ದೇಶಕರಾದಡಾ.ಮುನೇಶ್ವರ ಲಾಖಾ ತಿಳಿಸಿದರು.ಜ್ಞಾನಸುಧಾ ವಿದ್ಯಾಲಯದ ಪ್ರಾಚಾರ್ಯರಾದ ಸುನೀತಾ ಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿಜ್ಞಾನಸುಧಾ ವಿದ್ಯಾಲಯ, ಜ್ಞಾನಸುಧಾ ಪದವಿಪೂರ್ವಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು ಭಾಗವಹಿಸಿದ್ದರು.