ಅಡ್ಡಪಲ್ಲಕ್ಕಿ ಉತ್ಸವ
ಗುಳೇದಗುಡ್ಡ,ಏ.26: ಸ್ಥಳೀಯ ಅಕ್ಕಲಕೋಟ ಚಿಕ್ಕರೇವಣಸಿದ್ದೇಶ್ವರ ಶಿವಶರಣರಮಠದ ಜಾತ್ರಾಮಹೋತ್ಸವ ಅಂಗವಾಗಿ ಶ್ರೀಮಠದ ಅಡ್ಡಪಲ್ಲಕ್ಕಿ ಉತ್ಸವ ನಗರದಲ್ಲಿ ಸಂಭ್ರಮದಿಂದ ನಡೆಯಿತು.
ಶ್ರೀಮಠದಿಂದ ಹೊರಟ ಅಡ್ಡಪಲ್ಲಕ್ಕಿ ಉತ್ಸವ ಕಂಠಿ ಪೇಟೆ, ಗಚ್ಚಿನಕಟ್ಟಿ, ಶಿವಪ್ಪಯ್ಯನಮಠ, ಚೌಬಜಾರ, ಸರಾಫ್ ಬಜಾರ ಮೂಲಕ ಹಾಯ್ದು ಶ್ರೀಮಠ ತಲುಪಿತು. ಪಲ್ಲಕ್ಕಿ ಮೆರವಣಿಗೆಯಲ್ಲಿ ಕಳಸದಾರತಿಯೊಂದಿಗೆ ಸುಮಂಗಲೆಯರು, ಡೊಳ್ಳು, ಕರಡಿಮಜಲು ಮೇಳಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಡಿ.ಬಿ. ವಜ್ರಬಂಡಿ, ನಾರಾಯಣ ಚಿತ್ರಗಾರ, ಕೂಡ್ಲೆಪ್ಪ ಕಲ್ಯಾಣಿ, ರಾಜಗೋಪಾಲ ಕಲ್ಯಾಣಿ, ಮಹಾದೇವಪ್ಪ ಹುನಗುಂದ, ಶೇಖಣ್ಣ ಆರೂಟಗಿ, ಅಶೋಕ ದಿಂಡಿ ಸೇರಿದಂತೆ ಚಿಟಗುನಕೊಪ್ಪ, ಬೇವೂರ, ಹಳ್ಳೂರು, ಮಂಗಳಗುಡ್ಡ, ಲಕ್ಕಸಗೊಪ್ಪ, ಹುಲಸಗೇರಿ, ಕಾಟಾಪೂರ, ಯರಗೊಪ್ಪ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.