ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮನುಗೆ ೬೪ ನೇ ಸ್ಥಾನ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೨೬; 2023 -24 ನೇ ಸಾಲಿನ ಜೆ ಇ ಇ ಮೇನ್ಸ್ ಪರೀಕ್ಷೆಯಲ್ಲಿ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮನು ಎಲ್ ಜೆ ಅದ್ವಿತೀಯ ಸಾಧನೆ ಮಾಡಿ ಅಖಿಲ ಭಾರತ ಮಟ್ಟದ64ನೇ ರ್‍ಯಾಂಕನ್ನು ಪಡೆದಿರುತ್ತಾನೆ . ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿಸೋಜಾ ಅಭಿನಂದಿಸಿದರು. ಕಾಲೇಜಿನ ನಿರ್ದೇಶಕರಾದ ಡಾಕ್ಟರ್ ಜಯಂತ್, ಅಧ್ಯಕ್ಷರಾದ ಪ್ರಶಾಂತ್  ಡಿ.ಎಸ್  ಕಾರ್ಯದರ್ಶಿಗಳಾದ ಹೇಮಂತ್ ಡಿ.ಎಸ್, ಹಾಗೂ ಕಾಲೇಜು ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಈ ಸಾಧನೆಯನ್ನು ಕೊಂಡಾಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.