ಕಮಲಕ್ಕೆ ಜೈಕಾರ ದೇಶಕ್ಕೆ‌ಹಿತಕರ….ಬಿಜೆಪಿ‌ ಅಭ್ಯರ್ಥಿ ಪರ‌ ಜನರ ಘೋಷಣೆ
ಸಂಜೆವಾಣಿ ವಾರ್ತೆ
ದಾವಣಗೆರೆ. ಏ.೨೫; ದೇಶದಲ್ಲಿ‌ ೬೫ ವರ್ಷ ಕಾಂಗ್ರೆಸ್ ನವರು ಮಾಡದಿರುವ ಹಲವಾರು‌ ಯೋಜನೆಗಳನ್ನು ಕೇವಲ‌ಹತ್ತು ವರ್ಷದಲ್ಲಿ ಮೋದೀಜಿಯವರು ನೀಡಿದ್ದಾರೆ ಅಂತಹ‌ ಸಮರ್ಥ ನಾಯಕರು‌ ನರೇಂದ್ರ ಮೋದಿಜಿ‌ ಎಂದು‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬಿಜೆಪಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು.ಹೊನ್ನಾಳಿ ತಾಲ್ಲೂಕಿನಲ್ಲಿ ‌ಮನೆಮನೆಗೆ ತೆರಳಿ ಮತಯಾಚನೆ‌ಮಾಡಿ ಜನರೊಂದಿಗೆ ಮಾತನಾಡಿದ ಅವರು‌ ಪ್ರತಿ ಜನಸಾಮಾನ್ಯರಿಗೂ ಕೇಂದ್ರ ಯೋಜನೆಗಳು‌ ತಲುಪಿದೆ ಹಾಗೂ ಸಂಸದರು ಕೇಂದ್ರದ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಮಂತ್ರಿಗಳಿಗೆ ದಾವಣಗೆರೆ ನಗರ ಬಿಟ್ಟರೆ ಯಾವ ಕ್ಷೇತ್ರವೂ ಕಂಡು ಬರುತ್ತಿಲ್ಲ.ಕೇವಲ‌ ದಾವಣಗೆರೆಗೆ‌ ಮಾತ್ರ‌ ಸೀಮಿತರಾಗಿದ್ದಾರೆಂದರು.ಸಂಸದ ಜಿ.ಎಂ ಸಿದ್ದೇಶ್ವರ್ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಭೇಟಿ‌ನೀಡಿದ್ದಾರೆ.ಜನರ ಕಷ್ಟ ಸುಖ ಆಲಿಸಿದ್ದಾರೆ.ಜನರ ಒಂದು ಮತ ಸುಭದ್ರ ದೇಶ ನಿರ್ಮಾಣಕ್ಕೆ ಕಾರಣ ಎಂದರು.ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಸ್ಮಾರ್ಟ್ ಸಿಟಿ ಮಾಡಿ ದಾವಣಗೆರೆಯನ್ನು ಅಭಿವೃದ್ಧಿ ಪಡಿಸಿದ್ದಾರೆ ಅನೇಕ ಜನಪರ ಕಾರ್ಯಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ‌  ನಡೆದಿದೆ ಮತದಾರರು ಕೂಡ ದೇಶದ ಹಿತಕ್ಕಾಗಿ ಬಿಜೆಪಿ ಗೆಲ್ಲಿಸಬೇಕೆಂದರು.ಮಾಜಿ ಸಚಿವ ಎಂ.ಪಿ‌.ರೇಣುಕಾಚಾರ್ಯ ಮಾತನಾಡಿ ನೇಹಾ ಪ್ರಕರಣ,ಜಿಲ್ಲೆಯ ನಲ್ಲೂರಿನ ಘಟನೆ,ರಾಮೇಶ್ವರಂ ಕೆಫೆ ಘಟನೆ ನೋಡಿದರೆ ರಾಜ್ಯ ಎತ್ತ ಸಾಗುತ್ತಿದೆ ಎಂದೆನಿಸುತ್ತದೆ. ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿವೆ.ಇದೆಲ್ಲವನ್ನೂ ಮಟ್ಟಹಾಕಲು ದೇಶಕ್ಕೆ ಮೋದಿ ಅವಶ್ಯಕತೆ ಇದೆ.ದೇಶದ ಭವಿಷ್ಯದ ಚುನಾವಣೆ ಇದಾಗಿದೆ ಅದಕ್ಕಾಗಿ ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ್ ಗೆಲ್ಲಿಸಿ ಮೋದಿಜಿ ಬೆಂಬಲಿಸಬೇಕು ಎಂದರು.ಈ ವೇಳೆ ಜೆ ಕೆ ಸುರೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಸಂತೋಷ ಕುಮಾರ್, ಎಲ್ ಕೆ ಮಂಜಪ್ಪ. ,ಬರ್ಮಣ್ಣ , ನರಶಿಮಪ್ಪ ಪ್ರಭು , ರವಿ , ಹೊನ್ನಪ್ಪ , ರಾಮಣ್ಣ ಅರಗನಹಳ್ಳಿ  ,ಸೋಮಲಿಂಗಪ್ಪ , ನಾಗರಾಜ್,ಶಾಂತ್ ರಾಜ್ ಪಾಟೀಲ್  ಉಪಸ್ಥಿತರಿದ್ದರು .