ಸಿಯುಕೆಯಲ್ಲಿ ವಿಶ್ವ ಭೂ ದಿನ ಆಚರಣೆ
ಕಲಬುರಗಿ:ಏ.25:“ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ. ಹೋಗುವ ಮೊದಲು ಭೂಮಿಯನ್ನು ಇದ್ದ ಹಾಗೆಯೇ ಬಿಟ್ಟು ಹೋಗಬೇಕು” ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಮಾಜಿ ಉಪ ಮಹಾನಿರ್ದೇಶಕ ಡಾ.ಎಚ್.ಎಸ್.ಎಂ.ಪ್ರಕಾಶ್ ಹೇಳಿದರು.
ಇಂದು ಸಿಯುಕೆಯ ಭೂವಿಜ್ಞಾನ ನಿಕಾಯವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಭೂ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಕಳೆದ 30-40 ವರ್ಷಗಳಲ್ಲಿ ನಾವು ಭೂಮಿಯ ಸಂಪನ್ಮೂಲಗಳನ್ನು ಎತೆಚ್ಚವಾಗಿ ಬಳಸಿದ್ದೇವೆ ಮತ್ತು ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಅನೇಕ ದೊಡ್ಡ ನಗರಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಅತಿಯಾದ ಕೈಗಾರಿಕೀಕರಣ ಮತ್ತು ನಗರೀಕರಣವು ಸಂಪನ್ಮೂಲಗಳ ಅತಿಯಾದ ಬಳಕೆಗೆ ಕಾರಣವಾಗಿದೆ. ಪ್ರಪಂಚವು ವೇಗವಾಗಿ ಬದಲಾಗುತ್ತಿದೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ನಾವು ಹಿಮಗಡ್ಡೆಗಳ ಸಂಗ್ರಹ ಮತ್ತು ಅವುಗಳ ನಾಶವಾಗುವಿಕೆಯನ್ನು ಕಂಡಿದ್ದೇವೆ” ಎಂದು ಹೇಳಿದರು.
ಕೆಲವು ತಪ್ಪು ಕಲ್ಪನೆಗಳ ಕುರಿತು ಮಾತನಾಡಿದ ಅವರು “ನಾವು ತಾಪಮಾನದ ಹೆಚ್ಚಿಳಕ್ಕೆ ಅಔ2 ಅನ್ನು ದೂಷಿಸುತ್ತಿದ್ದೇವೆ. ಆದರೆ ಕಳೆದ 4.5 ಕೋಟಿ ವರ್ಷಗಳಲ್ಲಿ ಹವಾಮಾನ ಬದಲಾವಣೆ ಆಗುತ್ತಿದೆ. ಭೂವೈಜ್ಞಾನಿಕ ಬದಲಾವಣೆಗಳು ಸಾಮಾನ್ಯ ಮತ್ತು ನಿಯಮಿತವಾಗಿ ನಡೆಯುತ್ತಿರುತ್ತವೆ. 2020 ರ ವೇಳೆಗೆ ಸಮುದ್ರ ಮಟ್ಟ ಹೆಚ್ಚಾಗುವುದರಿಂದ ಅನೇಕ ಬಂದರು ನಗರಗಳು ನೀರಿನಲ್ಲಿ ಮುಳುಗುತ್ತವೆ ಎಂಬ ಭಯವಿತ್ತು. ಆದರೆ ಅಂತಹದ್ದೇನೂ ಆಗಲಿಲ್ಲ ಇದು ಮಿತಿಮಿರಿದ ಅಂದಾಜು ಆಗಿತ್ತು. ಸಸ್ಯಗಳು ಅಔ2 ನ್ನು ಬಳಸಿ ದ್ಯುತಿಸಂಶ್ಲೇಷಣೆಯ ಮೂಲಕ ತಮ್ಮ ಆಹಾರವನ್ನು ಪಡೆಯುತ್ತವೆ. ಇದು ಉತ್ತಮ ಕಾರ್ಬನ್ ಆಗಿದೆ. ಅಔ2 ಸುಣ್ಣದ ಕಲ್ಲಿನ ಹಾಸಿಗೆಗಳ ರಚನೆಗೆ ಸಹಾಯ ಮಾಡಿದ್ದು. ಇಂದು ನಾವು ಸಿಮೆಂಟನ್ನು ಇದರಿಂದ ಪಡೆಯುತ್ತಿದ್ದೇವೆ. ಹಸಿರುಮನೆ ಎಂಬುದು ಒಂದು ಸುಳ್ಳು ಪ್ರಚಾರ, ಈಗ ಜನರು ಅದನ್ನು ಅರ್ಥಮಾಡಿಕೊಂಡಿದ್ದಾರೆ” ಎಂದು ಹೇಳಿದರು.
ಪ್ರಪಂಚದಾದ್ಯಂತ ಸಂಭವಿಸುತ್ತಿರುವ ಭೂಮಿಯಲ್ಲಿನ ಪ್ರಮುಖ ಬದಲಾವಣೆಯ ಬಗ್ಗೆ ಮಾತನಾಡುತ್ತಾ ಅವರು “ಈಗ ಆಫ್ರಿಕನ್ ಖಂಡವು ಎರಡು ಭಾಗಗಳಾಗಿ ಚಲಿಸುತ್ತಿದೆ. ನೈಜೀರಿಯಾ ಪ್ರತ್ಯೇಕ ಖಂಡವಾಗಬಹುದು. ಅದೇ ರೀತಿ 20 ದಿನಗಳ ಹಿಂದμÉ್ಟೀ ರಾಜಸ್ಥಾನದ ಬಿಕಾನೇರ್‍ನಲ್ಲಿ ಭೂಮಿ ಬೆರ್ಪಡಲಾರಂಭಿಸಿದೆ. ಇದು ಹೀಗೆ ಮುಂದುವರೆದರೆ ಭಾರತವನ್ನು ಭೌಗೋಳಿಕವಾಗಿ ಎರಡು ಭಾಗಗಳಾಗಿ ವಿಭಜಿಸಲು ಕಾರಣವಾಗಬಹುದು” ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಖನಿಜ ನಿಕ್ಷೇಪಗಳ ಕುರಿತು ಮಾತನಾಡಿದ ಅವರು, “ಲಿಂಗಸೂಗೂರು ಸಮೀಪದ ಮಿಂಚಗೇರಿ ಗ್ರಾಮದಲ್ಲಿ ಅಪರೂಪದ ಭೂಮಿಯ ಖನಿಜಗಳ ದೊಡ್ಡ ನಿಕ್ಷೇಪಗಳಿವೆ. ನಾವು ಅದನ್ನು 1992-93 ರಲ್ಲಿ ಕಂಡುಕೊಂಡಿದ್ದೇವೆ. ಈಗ ಈ ಕುರಿತು ಹೆಚ್ಚಿನ ಕೆಲಸ ನಡೆಯುತ್ತಿದೆ. ಅದೇ ರೀತಿ ರಾಯಚೂರು ಸಮೀಪದ ಮಾಚನೂರು ಪ್ರದೇಶದಲ್ಲಿ ತಾಮ್ರದ ನಿಕ್ಷೇಪಗಳಿವೆ. ಇಲ್ಲಿ ನಮ್ಮ ಪೂರ್ವಜರು ತಾಮ್ರದ ಗಣಿಗಾರಿಕೆ ಮಾಡಿದ್ದಾರೆ. ಆದ್ದರಿಂದ ಈ ಪ್ರದೇಶವು ಅನೇಕ ಖನಿಜ ನಿಕ್ಷೇಪಗಳನ್ನು ಹೊಂದಿದೆ” ಎಂದು ಹೇಳಿದರು.
ಮುಖ್ಯ ಅತಿಥಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಕಲಬುರಗಿ ವಿಭಾಗದ ಅಧ್ಯಕ್ಷ ಪೆÇ್ರ.ಎಂ.ಎಸ್.ಜೋಗದ್ ಅವರು ಮಾತನಾಡಿ, “ಈ ವರ್ಷದ ಭೂ ದಿನದ ಥೀಮ್ ‘ಭೂಮಿ ಮತ್ತು ಪ್ಲಾಸ್ಟಿಕ್’. ಪ್ಲಾಸ್ಟಿಕ್ ಬಳಕೆ ಹೆಚ್ಚಾಗಲು ನಾವೆಲ್ಲರೂ ಕಾರಣ ಎಂಬುದು ಎಲ್ಲರಿಗೂ ಗೊತ್ತು. ನಾವು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಅನ್ನು ನೋಡುತ್ತಿದ್ದೇವೆ ಅದು ತುಂಬಾ ಅಪಾಯಕಾರಿ ಪ್ರವೃತ್ತಿಯಾಗಿದೆ. ಮಾನವನ ರಕ್ತನಾಳದಲ್ಲಿ ನ್ಯಾನೋ ಗಾತ್ರದ ಪ್ಲಾಸ್ಟಿಕ್ ಕಣಗಳು ಕಂಡು ಬರುತ್ತಿದ್ದು, ಹೃದಯಾಘಾತದ ಭೀತಿ ಎದುರಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವುದು ಹೇಗೆ ಎಂಬುದು ಪ್ರಶ್ನೆ? ನಾವೆಲ್ಲರೂ ನಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು ಮತ್ತು ಸರ್ಕಾರವು ಹೊಣೆಗಾರಿಕೆಯನ್ನು ಇತರರಿಗೆ ವರ್ಗಾಯಿಸುವ ಬದಲು ಸೂಕ್ತ ನೀತಿಗಳನ್ನು ಹೊರತರಬೇಕು. 1970 ರಿಂದ ಪ್ಲಾಸ್ಟಿಕ್ ಬಳಕೆ ಪ್ರಾರಂಭವಾಯಿತು. ಇದಕ್ಕೂ ಮೊದಲು ನಾವು ತಲೆಮಾರುಗಳವರೆಗೆ ಪ್ಲಾಸ್ಟಿಕ್ ಇಲ್ಲದೆ ಬದುಕುತ್ತಿದ್ದೇವು. ಈಗ ನಾವು ಹಾಗೆ ಮಾಡಬಹುದು. ಆದರೆ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯ ವಸ್ತುಗಳನ್ನು ಬಳಸಲು ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪ್ಲಾಸ್ಟಿಕ್ ಜೈವಿಕ ವಿಘಟನೀಯವಾಗಿಸುವ ಬಗ್ಗೆ ಸಂಶೋಧನೆ ಮಾಡಲು ವಿದ್ಯಾರ್ಥಿಗಳು ಮುಂದೆ ಬರಬೇಕು. ನಾವು ಅಂತಹ ಸಂಶೋಧನಾ ಕಾರ್ಯಗಳಿಗೆ ಹಣವನ್ನು ನೀಡುತ್ತೇವೆ” ಎಂದು ಹೇಳಿದರು.
ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನಮ್ಮ ತಾಯಿ ಮತ್ತು ಭೂಮಿ ತಾಯಿಯನ್ನು ನಾವು ಯಾವಾಗಲೂ ಗೌರವಿಸುತ್ತೇವೆ. ಪ್ಲಾಸ್ಟಿಕ್ ಮಾನವ ನಿರ್ಮಿತ ಸಮಸ್ಯೆ. ಮೊದಲು ನಾವು ಬಟ್ಟೆಯಿಂದ ಮಾಡಿದ ಚೀಲಗಳೊಂದಿಗೆ ಶಾಪಿಂಗ್ ಮಾಡಲು ಹೋಗುತ್ತಿದ್ದೆವು, ಆದರೆ ಈಗ ಜನರು ಅದನ್ನು ನಾಚಿಕೆಗೇಡು ಎಂದು ಭಾವಿಸುತ್ತಾರೆ ಮತ್ತು ಖಾಲಿ ಕೈಯಲ್ಲಿ ಹೋಗಿ ಎಲ್ಲವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ತರುತ್ತಾರೆ. ಈ ಸಂಸ್ಕøತಿ ಮತ್ತು ಆಚರಣೆ ನಿಲ್ಲಬೇಕು. ಇಂದು ನಮ್ಮ ನಗರಗಳು, ಸರೋವರಗಳು, ನದಿಗಳು ಮತ್ತು ಕಡಲತೀರಗಳು ಪ್ಲಾಸ್ಟಿಕ್‍ನಿಂದ ತುಂಬಿವೆ. ಭೂಮಿಯ ಮೇಲಿನ ಪ್ರಾಣಿಗಳು ಮಾತ್ರವಲ್ಲದೆ ಜಲಚರಗಳು ಸಹ ಅಪಾಯವನ್ನು ಎದುರಿಸುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಭೂಮಿಗೆ ಮತ್ತು ಮನುಷ್ಯನಿಗೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆ. ಸಂಪನ್ಮೂಲಗಳ ಬಳಕೆಯಲ್ಲಿ ನಾವು ಜಾಗರೂಕರಾಗಿರಬೇಕು. 1000 ಅಡಿ ಅಗೆದರೂ ನೀರು ಸಿಗುತ್ತಿಲ್ಲ ಅಂತರ್ಜಲ ಮಟ್ಟ ಕುಸಿಯುತ್ತಿದೆ. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸುವುದರಿಂದ ನಾವು ಕೃಷಿ ಭೂಮಿಯನ್ನೂ ಕಲುಷಿತಗೊಳಿಸಿದ್ದೇವೆ. ನಾವು ಇದನ್ನು ನಿಲ್ಲಿಸಬೇಕು ಮತ್ತು ಸಾವಯವ ಕೃಷಿಯ ಕಡೆಗೆ ಹೋಗಬೇಕು” ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಂಚಾಲಕಿ ಡಾ.ಅರ್ಚನಾ ಕುಜೂರು ಸ್ವಾಗತಿಸಿದರು, ಶುಭಶ್ರೀ ಪ್ರಿಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು, ಡಾ.ತೇಜಸ್ವಿ ಲಕ್ಕುಂಡಿ ವಂದಿಸಿದರು. ಈ ಸಂದರ್ಭದಲ್ಲಿ ಭೂ ವಿಜ್ಞಾನ ವಿಭಾಗದ ಡೀನ್ ಪೆÇ್ರ.ಎಂ.ಎ.ಅಸ್ಲಂ, ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಂ.ಲಿಂಗದೇವರು, ಪೆÇ್ರ.ಪ್ರಶಾಂತ್, ಡಾ.ಚನ್ನಬಸಪ್ಪ, ಡಾ.ಅಲೀಂ ಪಾμÁ, ಡಾ.ಬಿ.ಮಹಾಲಿಂಗಂ, ಡಾ.ಎನ್.ಬಾಬು, ಡಾ.ಸಂಜಿತ್ ಸರ್ಕಾರ್, ಡಾ. ಸ್ವಾಗತ ಘೋμï, ಡಾ. ವಿಶ್ವನಾಥ್ ಬಿ ಸಿ, ಇತರ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.