ಪ್ರಭಮ್ಮ, ಲತಮ್ಮ ವೀಣಮ್ಮ ಸೇರಿದರೆ ಜಿಲ್ಲೆಯ ಇನ್ನಷ್ಟು ಅಭಿವೃದ್ಧಿ ಸಾಧ್ಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೬: ಲತಮ್ಮ, ವೀಣಮ್ಮ ಜತೆಗೆ ಪ್ರಭಮ್ಮ ಸೇರಿದರೆ ಅಭಿವೃದ್ಧಿ ಇನ್ನಷ್ಟು ಹೆಚ್ಚಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹೇಳಿದರು. ತೆಲಗಿ ಗ್ರಾಮದಲ್ಲಿ ಹರಪನಹಳ್ಳಿ ತಾಲ್ಲೂಕು ಹೊಬಾಳಿ ಮಟ್ಟದ ತೆಲಗಿ ಭಾಗದ ಕಾರ್ಯಕರ್ತರಿಂದ ಹಮ್ಮಿಕೊಂಡ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ ಪರ ಪ್ರಚಾರದ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಹರಪನಹಳ್ಳಿ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಕ್ಷೇತ್ರವಾಗಿದ್ದು ಈಗಾಗಲೇ ಎರಡು ಮೂರು ಬಾರಿ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎನ್ನುವುದು ತಿಳಿಸಿ ಮತ ಕೇಳುತ್ತಿದ್ದೇವೆ. ಈ ಹಿಂದೆ ವೈಮನಸ್ಸಿನಿಂದ ಬೇರೆ ಪಕ್ಷಕ್ಕೆ ಕ್ಷೇತ್ರದಲ್ಲಿ ಆಡಳಿತ ನಡೆಸಲು ನೀಡಿದ್ದಿರಿ.  ಈ ಬಾರಿ ಆ ತಪ್ಪನ್ನು ಮಾಡದೇ ಒಮ್ಮತ ಹಾಗೂ ಒಗ್ಗಟ್ಟಿನಿಂದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಆಶೀರ್ವಾದ ಮಾಡಿ, ಶಾಸಕಿ ಲತಾ ಮಲ್ಲಿಕಾರ್ಜುನ ಹಾಗೂ ಎನ್. ಕೊಟ್ರೇಶ್ 2023 ರಲ್ಲಿ ಪಡೆದ ಒಂದು ಲಕ್ಷ ಹತ್ತು ಸಾವಿರ ಮತಗಳು ಓನ್ ವೇ ಆಗಿ ಕಾಂಗ್ರೆಸ್ ಪಕ್ಷಕ್ಕೆ ಬೀಳಬೇಕು ಎಂದರು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 2018 ರಲ್ಲಿ ತರಳುಬಾಳು ಗುರುಗಳು ಬಳಿ 57 ಕೆರೆಗಳ ತುಂಬಿಸಲು 670 ಕೊಟಿ ಅನುದಾನ ಬೇಕು ಎಂದಿದ್ದೆವು. ಈಗ ಕಾಮಗಾಗಿ ಪೂರ್ಣವಾಗುತ್ತಿದೆ ಕಾಮಗಾರಿ ಪೂರ್ಣವಾದರೆ ಅನುಕೂಲ ಆಗುವುದು.  ಇಂದಿರಾ ಗಾಂಧಿಯವರು ಪ್ರಧಾನ‌ ಮಂತ್ರಿಯಾಗಿದ್ದಾಗ  ಒಂದೊಂದು‌ ಕ್ಷೇತ್ರಕ್ಕು 300 ಕೋಟಿ ನೀಡಿದ್ದರು ಎಂದು ಸ್ಮರಿಸಿದ ಸಚಿವರು ಸಂಸದ ಜಿಎಂ ಸಿದ್ದೇಶ್ವರ ವಿರುದ್ದ ಕಿಡಿ ಕಾರಿದರು. ಕೊಂಡಜ್ಜೆ ಕೆರೆಯಲ್ಲಿ ನೀರಿಲ್ಲ ಕೊಂಡಜ್ಜಿ ಕೆರೆ ಎಲ್ಲಿದೆ ಅಂತಾರೆ. ಮಳೆ ಬಂದರೆ ಕೆರೆ ತುಂಬುತ್ತೆ ಅಂತಾರೆ ಇಂತಹ ಸಂಸದರು ಬೇಕೆ ಎಂದು ಪ್ರಶ್ನಿಸಿದ ಸಚಿವರು ಕೊಂಡಜ್ಜಿ ಕೆರೆ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರವಿದ್ದ 130 ಕೋಟಿ ಅನುದಾನ ತರಲಾಗಿತ್ತುಮ ಎಲ್ಲಿ ಕಾಂಗ್ರೆಸ್ ಹೆಸರು ಬರುವುದೆಂದು ಕೆರೆ ಅಭಿವೃದ್ದಿ ತಡೆಯಿಡಿಯಲಾಗಿದೆ ಎಂದು ದೂರಿದರು. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಕೊಂಡಜ್ಜಿ ಕೆರೆ ಸೇರಿದಂತೆ ಜಿಲ್ಲೆಯ ಎಲ್ಲಾ ಕೆರೆಗಳ ಅಭಿವೃದ್ಧಿ ಮಾಡಲು ಸಹಕರಿಸಿ, ಬಡವರಿಗೆ ಮೂಲಕ‌ಭೂತ ಸೌಲರ್ಯ ಒದಗಿಸುವ ಕೆಲಸ ಆಗಬೇಕಿದೆ. ಅನ್ನದ ಜತೆ ಸೂರು, ಆರೋಗ್ಯ, ವಿದ್ಯಾಭ್ಯಾಸ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ದಾವಣಗೆರೆಯಲ್ಲಿ ನಿರ್ಮಾಣವಾದ ಆಶ್ರಯ ಮನೆಗಳು ಪ್ರಸ್ತುತ ಜನಕ್ಕೆ ಉಪಯೋಗ ಆಗಿವೆ ಎಂದರು. ನಮ್ಮದು ಆದಾನಿ, ಅಂಭಾನಿಗೆ ಬೆಂಬಲಿಸುವ ಪಕ್ಷವಲ್ಲ ಬಡವರ ನಿರ್ಗತಿಕರ, ರೈತರು ಹಾಗೂ ಎಲ್ಲಾ ವರ್ಗಗಳಿಗೂ   ಮೂಲಭೂತ ಸೌಲಭ್ಯನ್ನು ಒದಗಿಸುವ ಪಕ್ಷವಾಗಿದೆ.  ಪ್ರಭಮ್ಮ, ಲತಮ್ಮ ವೀಣಮ್ಮ ಸೇರಿದರೆ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯ, ನಾವು ನಮ್ಮ ಕುಟುಂಬಕ್ಕೆ ಕಾಂಗ್ರೆಸ್ ಸೀಟು ಕೇಳಿಲ್ಲ ಹೈ‌ಕಮಾಂಡ್ ಸರ್ವೆ ಮಾಡಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಿದೆ ಎಂದರು. ಈವೇಳೆ ಕಾಂಗ್ರೆಸ್‌ ಪಕ್ಷದ ಮುಖಂಡ ಎನ್. ಕೊಟ್ರೇಶ್, ವಿಜಯನಗರ ಮಾಜಿ ಶಾಸಕ ಶಿರಾಜ್ ಶೇಕ್, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ವೀಣಾ ಮಹಾಂತೇಶ್, ಕೆಪಿಸಿಸಿ ಸದಸ್ಯರು ಚಂದ್ರಶೇಖರ್ ಭಟ್, ಪುರಸಭೆ ಅಧ್ಯಕ್ಷ ರಾಜಶೇಖರ್, ಹೆಚ್.ಬಿ ಪರುಶುರಾಮಪ್ಪ, ಡಾ. ಮಲ್ಲಿಕಪ್ಪ ಇತರರು ಉಪಸ್ಥಿತರಿದ್ದರು.