ಕಥೆಗಳಲ್ಲಿ ರೂಪಕಗಳನ್ನು ಸೃಜಿಸುವುದು ತುಂಬ ಕಷ್ಟ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ
ಕಲಬುರಗಿ,ಏ.25-ದೇವರ ಧರ್ಮ ಕಥಾಸಂಕಲನ ಮೇಲ್ನೋಟಕ್ಕೆ ರೂಪಕದಂತೆ ಕಂಡರೂ ಒಳಗಡೆ ವ್ಯಂಗ್ಯ ಪ್ರತೀತಿ ಭಾವ ಒಳಗೊಂಡಿದೆ ಎಂದು ಸಂಸ್ಕøತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪೆÇ್ರ. ಮಲ್ಲೇಪುರಂ ಜಿ. ವೆಂಕಟೇಶ ಅವರು ಹೇಳಿದರು.
ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಬುಧವಾರ ಗುಲಬುರ್ಗಾ ವಿಶ್ವವಿದ್ಯಾಲಯ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಪೆÇ್ರ. ಎಚ್.ಟಿ. ಫೆÇೀತೆ ಅವರ ದೇವರ ಧರ್ಮ
ಹಾಗೂ ಮಾದಾ ಕಾ ಸಂಘರ್ಷ ಔರ್ ಅನ್ಯ ಕಹಾನಿಯಾ (ಮೂಲ: ಪೆÇ್ರ ಎಚ್.ಟಿ.ಪೆÇೀತೆ ಹಿಂದಿ ಅನುವಾದ: ಡಾ.ಅಂಬುಜಾ ಮಳಖೇಡಕರ್) ಪುಸ್ತಕಗಳ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ವ್ಯಂಗ್ಯ ಪ್ರತೀತಿ ಭಾವವನ್ನು ಕಟ್ಟುತ್ತಾ ಒಂದು ಸಾಮಾಜಿಕ ಸಂಗತಿಯನ್ನು ತನ್ನ ಕಥೆ ನೆಯ್ಗೆಯಾಗಿ ಬಳಸಿಕೊಂಡಿರುವು ವಿಶೇಷವಾಗಿದೆ ಎಂದರು. ಮುಂದು ವರೆದು ಕಥೆಗಳಲ್ಲಿ ರೂಪಕಗಳನ್ನು ಸೃಜಿಸುವುದು ತುಂಬ ಕಷ್ಟ ಆದರೂ ಪೆÇೀತೆಯವರು ರೂಪಕಗಳನ್ನು ಸೃಜಿಸುವುದು ಮಾಡಿದ್ದಾರೆ. ಯಾವುದೇ ಕಥೆ, ಕವನಗಳನ್ನು ಬರೆಯಬೇಕಾದ ತಮ್ಮ ಅನುಭವಕ್ಕೆ ಬರದ ವಿಷಯ ವಸ್ತುಗಳು ಆಯ್ಕೆ ಮಾಡಿಕೊಳ್ಳಬಾರದು. ಕಥೆಗಾರನಾದವನು ಸಂಗತಿ ವಿಸಂಗತಿಗಳು, ಭಾಷೆ ಅಳವಡಿಸಿಕೊಂಡು ಒಂದು ಕ್ರಮವಾದ ಸಾಹಿತ್ಯ ರಚನೆಯಾಗಬೇಕು. ಒಳ್ಳೆಯ ಕಥೆ, ಸಂಗೀತ ಬರೆದಾಗ ಅದರ ಸಂವಾದ ನಡೆಯುತ್ತಿದ್ದರೆ ಅದು ಶ್ರೇಷ್ಟ ಕಥೆ, ಕವಿತೆಯಾಗಲು
ಸಾಧ್ಯವಿದೆ ಎಂದು ಹೇಳಿದರು.
ಎನ್.ವಿ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸೂರ್ಯಕಾಂತ ಸೂಜ್ಯಾತ,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಸಂದೀಪ ರಣಬೀರಕರ್, ಪುಸ್ತಕಗಳ ಪರಿಚಯ ಮಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ.ಅಬ್ದುಲ್ ರಬ್ ಉಸ್ತಾದ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ದೇವರ ಧರ್ಮ ಕೃತಿಯ ಲೇಖಕರಾದ ಪೆÇ್ರ.ಎಚ್.ಟಿ.ಪೆÇೀತೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಮಕೂರು ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕಿ ಅಣ್ಣಮ್ಮ, ಅತಿಥಿ ಪ್ರಾಧ್ಯಾಪಕರಾದ ಎಂ.ಬಿ. ಕಟ್ಟಿ, ಹಣಮಂತ ಮಲಕೇರಿ ಸ್ನಾತಕೋತ್ತರ ಹಾಗೂ ಸಂಶೋಧನ ವಿದ್ಯಾರ್ಥಿಗಳು ಸೇರಿ ಇತರರು ಭಾಗಿಯಾಗಿದ್ದರು. ನಿರೂಪಣೆ ಡಾ.ಕೋಡ್ಲಿ ಮಾಡಿದರು, ಡಾ.ಶುಲಾಬಾಯಿ ವಂದಿಸಿದರು.