ಐಬಿಎಂ ಮತ್ತು ಶರಣಬಸವ ವಿವಿ ಜ್ಞಾನೋತ್ಸವದಂಗವಾಗಿ ಎರಡು ದಿನಗಳ ತಾಂತ್ರಿಕ ಸ್ಪರ್ಧೆ
ಕಲಬುರಗಿ;ಏ.25: ಸಾಫ್ಟ್‍ವೇರ್ ದಿಗ್ಗಜ ಐಬಿಎಂ ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ ಮತ್ತು ಶರಣಬಸವ ವಿಶ್ವವಿದ್ಯಾಲಯವು ಜಂಟಿಯಾಗಿ ವಿದ್ಯಾರ್ಥಿಗಳಿಗೆ ಏಪ್ರಿಲ್ 27 ರಿಂದ ಎರಡು ದಿನಗಳ ಕಾಲ, ಇಂಟರ್ನೆಟ್ ಆಫ್ ಥಿಂಗ್ಸ್ , ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲನಿರ್ಂಗ್ (AI and ML)ಕುರಿತಾಗಿ ತಾಂತ್ರಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಆಯೋಜಿಸಿದೆ. ಇದು ತಂತ್ರಜ್ಞಾನ ಮತ್ತು ವ್ಯವಹಾರದ ಕ್ಷೇತ್ರದಲ್ಲಿ ಅತ್ಯಾಧುನಿಕ ಪ್ರವೃತ್ತಿಗಳು ಮತ್ತು ಸವಾಲುಗಳನ್ನು ಪ್ರತಿಬಿಂಬಿಸುವ ಸೈಬರ್ ಸೆಕ್ಯುರಿಟಿ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಬಗ್ಗೆ ಮಾಹಿತಿ ಒದಗಿಸುತ್ತದೆ.
ಕಲಬುರಗಿ ನಗರದಲ್ಲಿ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಮಾತನಾಡಿ, IoT, AI ಸೇರಿದಂತೆ ಪ್ರಮುಖ ವಿಷಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿಟಿಯು ಮತ್ತು ಇತರ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸಂಯೋಜಿತವಾಗಿರುವ ಎಲ್ಲಾ ತಾಂತ್ರಿಕ ಸಂಸ್ಥೆಗಳಿಂದ ಪ್ರವೇಶಗಳನ್ನು ಆಹ್ವಾನಿಸಲಾಗಿದೆ. ಮತ್ತು ಂI, ಸೈಬರ್ ಸೆಕ್ಯುರಿಟಿ ಮತ್ತು ಬಿಸಿನೆಸ್ ಅನಾಲಿಟಿಕ್ಸ್ ಸ್ಪರ್ಧೆಗಳಲ್ಲಿ ಪೇಪರ್ ಪ್ರೆಜೆಂಟೇಶನ್, ಪೆÇೀಸ್ಟರ್ ಪ್ರೆಜೆಂಟೇಶನ್, ಟೆಕ್ನಿಕಲ್ ಕ್ವಿಜ್ ಮತ್ತು ಕೋಡಿಂಗ್ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ನಾಲ್ಕು ಸ್ಪರ್ಧೆಗಳ ವಿಜೇತರಿಗೆ ಈವೆಂಟ್‍ನ ಮುಕ್ತಾಯದ ದಿನದಂದು IBM ಸೂಕ್ತವಾಗಿ ಬಹುಮಾನ ನೀಡಲಿದೆ ಎಂದು ಡಾ. ಮಾಕಾ ಹೇಳಿದರು. IBM ಇನ್ನೋವೇಶನ್ ಸೆಂಟರ್ ಫಾರ್ ಎಜುಕೇಶನ್ (ICE) ಈವೆಂಟ್ ICE ದಿನವಾಗಿ ಆಚರಿಸುತ್ತಿದೆ ಮತ್ತು ಈವೆಂಟ್‍ನ ಮುಖ್ಯ ಉದ್ದೇಶವು ಶೈಕ್ಷಣಿಕ ಸಮುದಾಯದಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ಚಟುವಟಿಕೆಗಳನ್ನು ಉತ್ತೇಜಿಸುವುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ. ಮಾಕಾ ತಿಳಿಸಿದ್ದಾರೆ.
ನೋಂದಣಿಗಾಗಿ ಲಿಂಕ್; https://forms.gle/XpPjDEjtariq1RH17. ಹೆಚ್ಚಿನ ವಿವರಗಳಿಗಾಗಿ 9036953183/9164267711 ಅನ್ನು ಸಂಪರ್ಕಿಸಬಹುದಾಗಿದೆ.