ನೇಹಾ ಹತ್ಯೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ : ಸಂಪತ್ತಕುಮಾರ್ ಶೆಟ್ಟಿ
ಅಥಣಿ:ಏ.25: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಟೀಮ್ ಮೋದಿ ಸಂಘಟಿಕರು ತೀವ್ರವಾಗಿ ಖಂಡಿಸಿದ್ದಾರೆ.
ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಕೊಲೆ ಕೃತ್ಯ ಎಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ರಾಜ್ಯ ಸರ್ಕಾರ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಟೀಮ್ ಮೋದಿ ಮುಖಂಡ
ಸಂಪತ್ತಕುಮಾರ್ ಶೆಟ್ಟಿ ಸರ್ಕಾರವನ್ನ ಆಗ್ರಹಿಸಿದರು.
ಈ ವೇಳೆ ವಿದ್ಯಾರ್ಥಿನಿ ನೇಹಾ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸಿ ಮೌನಾಚರಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಡಾ. ರವಿ ಸಂಕ, ಗೀತಾ ತೋರಿ, ಸುರೇಖಾ ರುದ್ರಗೌಡರ. ವಿನಯ ಪಾಟೀಲ, ಮಹಾಂತೇಶ ಮಾಳಿ, ಮಹಾಂತೇಶ ಇರಳೆ, ಸ್ವಾಗತ ತೋರಿ, ನಾರಾಯಣ್ ಭೋಸಲೆ, ಅಮೃತ ಮಹಾಜನ, ರವಿ ಹಿರೇಮಠ, ಅಭಯ ಸಗರೆ, ಜಯದೇವ ಯಲ್ಲಟ್ಟಿ, ಚಂದ್ರು ನಾಯಿಕ, ಸತೀಶ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.