ಭಾಲ್ಕಿ ಹಿರೇಮಠ ಸಂಸ್ಥಾನ ಕನ್ನಡದ ಮಠ: ಹಾಸಿಂಪೀರ
ವಿಜಯಪುರ, ಏ.25: ಬಸವ ತತ್ವಗಳನ್ನು ಪರಿಪಾಲನೆ ಮಾಡಿ ನಾಡಿನ ಶರಣ ಸಂಸ್ಕøತಿಯನ್ನು ಉಳಿಸಿ ಬೆಳೆಸಿದವರು ಭಾಲ್ಕಿಯ ಡಾ. ಚನ್ನಬಸವ ಪಟ್ಟದೇವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಚನ್ನಬಸವ ಪಟ್ಟದೇವರ ಜಯಂತುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡವು ಗಡಿ ನಾಡಾದ ಹೈದ್ರಾಬಾದ ಕರ್ನಾಟಕದ ಭಾಗದಲ್ಲಿ ಉರ್ದು ಬೋರ್ಡ ಹಾಕಿ ಕನ್ನಡವನ್ನು ಬೆಳಸಿದ ಕೀರ್ತಿ ಭಾಲ್ಕಿಯ ಸ್ವಾಮೀಜಿಯರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕಿ ಲತಾ ಗುಂಡಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಎಲ್ಲರನ್ನು ನಮ್ಮವರೆನ್ನುವ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಪಟ್ಟದೇವರು ಅಪ್ಪಟ ಬಸವ ತತ್ವ ಸಿದ್ಧಾಂತ ಪ್ರಚಾರಕರಾಗಿದ್ಡರು. ನಿಜಾಮರ ಕಾಲದಲ್ಲಿ 1936 ರಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಕನ್ನಡ ಪಟ್ಟದೇವರೆಂದು ಪ್ರಖ್ಯಾತರಾದರು. ಇಂದಿನ ಡಾ. ಬಸವಲಿಂಗ ಪಟ್ಟದೇವರು ಬಸವ ತತ್ವ ಪ್ರಚಾರದಲ್ಲಿ ತೊಡಗಿದ್ದು, ಅವರಿಂದ ಕನ್ನಡ ಸಾಹಿತ್ಯ ಬೆಳೆದಿದೆ ಎಂದರು
ಶಿಕ್ಷಕಿ ಮಹಾದೇವಿ ತೆಲಗಿ ಮಾತನಾಡಿ, ಕನ್ನಡ ಶಾಲೆಗಳಿಗೆ ಅವಕಾಶ ಇಲ್ಲದ ನಿಜಾಮರ ಆಡಳಿತದ ಸಂದರ್ಭದಲ್ಲಿ ಬಡವರಿಗೆ, ದೀನ, ದಲಿತರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದರಿಗೆ ಮಠದಲ್ಲಿ ಆಶ್ರಯ ನೀಡಿ ಕನ್ನಡ ಭಾμÉಯನ್ನು ಕಲಿಸುವ ಮೂಲಕ ಸಾವಿರಾರು ಕುಟುಂಬಗಳ ಉದ್ಧಾರ ಮಾಡಿದ ಏಕೈ ಭಾಲ್ಕಿಯ ಹಿರೇಮಠ ಸಂಸ್ಥಾನ ಎಂದರು.
ಶಿಕ್ಷಕಿ ಜಯಶ್ರೀ ತೆಲಗ ಹಾಗೂ ಸಾಹಿತಿ ಮಹೆತಾಬ ಕಾಗವಾಡ ವಚನ ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಎಸ್. ಬಳ್ಳೂರ, ಗಂಗಮ್ಮ ರೆಡ್ಡಿ, ಅಬ್ದುಲ್‍ರಜಾಕ ಮುಲ್ಲಾ, ಭಾಗೀರಥಿ ಸಿಂಧೆ, ಕಸ್ತೂರಿ ರಡ್ಡಿ, ರಾಜೇಂದ್ರ ಬಿರಾದಾರ, ರಾಜೇಸಾಬ ಶಿವನಗುತ್ತಿ, ಅಶೋಕ ಪಾಟೀಲ, ವಿಜಯಲಕ್ಷ್ಮೀ ಹಳಕಟ್ಟಿ, ನಿಂಗರಾಜ ಬಿರಾದಾರ, ಶಿವಾನಂದ ಡೋಣೂರ, ಆನಂದ ಕುಂಬಾರ, ಶೋಭಾ ಬಡಿಗೇರ, ಜಯಶ್ರೀ ತೆಲಗ ಮುಂತಾದವರು ಉಪಸ್ಥಿತರಿದ್ದರು.