ಸಾರ್ವಜನಿಕರು ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಪಡೆದುಕೊಳ್ಳಿ: ಡಾ. ಬಸವರಾಜ ಹುಬ್ಬಳ್ಳಿ
ವಿಜಯಪುರ, ಏ.25 :ಜಿಲ್ಲೆಯ ಸಿಂದಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಇನ್ನಿತರ ಶಸ್ತ್ರ ಚಿಕಿತ್ಸೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾಡಲಾಗುತಿದ್ದು. ಈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರು, ತಜ್ಞವೈದ್ಯರು ಲಭ್ಯವಿದ್ದಾರೆ.
ಸಿಂದಗಿ ತಾಲೂಕಿನ ಎಲ್ಲ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಂದಗಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯ ದಾಖಲಾತಿ, ಕಾರ್ಯ ವೈಖರಿಯನ್ನು ಪರಿಶೀಲಿಸಿ ವೈದ್ಯರೊಂದಿಗೆ ಸಭೆ ನಡೆಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳು ಹಾಗೂ ಸಿಂದಗಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಡಿ ಗುಂಡಬಾವಡಿ ಮಾತನಾಡಿ, ಈಗಾಗಲೇ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಎರಡು ಜನ ಗರ್ಭಿಣಿಯರಿಗೆ ಸಿಜರಿಯನ್, ಒಂದು ಹರ್ನಿಯಾ ಶಸ್ತ್ರಚಿಕಿತ್ಸೆ, ಎರಡು ಜನರಿಗೆ ಗಡ್ಡೆ ಶಸ್ತ್ರ ಚಿಕಿತ್ಸಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಎಲ್ಲರೂ ಆರೋಗ್ಯದಿಂದ ಇದ್ದಾರೆ. ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞವೈದ್ಯ ಹೆರಿಗೆ ಹಾಗೂ ಸ್ರೀರೋಗ ತಜ್ಞ ಡಾ.ನೂರೇಸ ಪಟೇಲ್, ಚಿಕ್ಕಮಕ್ಕಳ ತಜ್ಞ ಡಾ. ರಾಜಶೇಖರ ಸಿ.ಹೆಚ್., ಅರವಳಿಕೆ ತಜ್ಞ ಡಾ. ಸಾಯಬಣ್ಣ ಗುಣಕಿ., ಶಸ್ತ್ರ ಚಿಕಿತ್ಸಕರಾದ ಡಾ.ನಾಗರಾಜ, ಡಾ. ಶಂಕರರಾವ ದೇಶಮುಖ, ಡಾ.ರಮೇಶ ರಾಠೋಡ ಆರ್.ಎಮ್.ಓ, ವಿದ್ಯಾವತಿ ಹಿರೇಮo, ರಾಯಣ್ಣ ಸೊನ್ನಳ್ಳಿ, ಅಶ್ವಿನಿ ಮೋಟಗಿ, ಅಶ್ವಿನಿ ಸಾವಳಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.