ಕಾವ್ಯ ಕುಂಚದಲ್ಲಿ ಅರಳಿದ ಮತದಾನ ಜಾಗೃತಿ:ಪ್ರತಿಶತ ಮತದಾನ ಮಾಡಲು ಸಿ.ಇ.ಓ ಭಂವರ್ ಸಿಂಗ್ ಮೀನಾ ಕರೆ
ಕಲಬುರಗಿ,ಏ.25: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕಲಬುರಗಿ ನಗರದ ಕನ್ನಡ ಭವನದ ಆವರಣದ ಸಾಹಿತ್ಯ ಮಂಟಪದಲ್ಲಿ ಬುಧವಾರ ನಡೆದ ಮನಸಾಕ್ಷಿಯ ಮತ ದೇಶಕ್ಕೆ ಹಿತ ಎನ್ನುವ ಮತ ಕಾವ್ಯ ಎಂಬ ಜನಜಾಗೃತಿಯ ಕವಿಗೋಷ್ಠಿ ನಡೆಯಿತು.
ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ, ಜಾತಿ, ಮತ, ಧರ್ಮಗಳ ಜಾಡಿಗೆ ಒಳಗಾಗದೇ ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಚುನಾಯಿಸಬೇಕೆಂಬ ಸಂದೇಶ ಸಾರುವ ಕವಿಗಳಾದ ನರಸಿಂಗರಾವ ಹೇಮನೂರ, ಶಾಂತಾ ಪಸ್ತಾಪೂರ, ಕಲ್ಲಯ್ಯಾ ಸ್ಥಾವರಮಠ, ಶಕುಂತಲಾ ಪಾಟೀಲ, ಪ್ರಭು ನಿಷ್ಠಿ ನಿಡಗುಂದಾ, ಡಾ. ಪರ್ವಿನ್ ಸುಲ್ತಾನಾ, ರೇಣುಕಾ ಡಾಂಗೆ, ರಾಜೇಂದ್ರ ಝಳಕಿ, ಗಂಗಮ್ಮಾ ನಾಲವಾರ, ಸಂತೋಷ ಕರಹರಿ, ಸಿದ್ಧರಾಮ ರಾಜಮಾನೆ, ರವೀಂದ್ರ ಬಿ.ಕೆ., ಸುರೇಖಾ ಜೇವರ್ಗಿ, ಪ್ರಭುಲಿಂಗ ಮೂಲಗೆ, ದತ್ತರಾಜ ಕುಲಕರ್ಣಿ, ರಮೇಶ ಬಡಿಗೇರ, ಸೋಮಶೇಖರ ಹಂಚನಾಳ ಅವರು ವಾಚಿಸಿದ ಕವಿತೆಗಳು ಮತದಾನ ಜಾಗೃತಿಗೆ ಕನ್ನಡಿಯಂತಿದ್ದಲ್ಲದೆ ನೆರೆದ ಸಭಿಕರ ಗಮನ ಸೆಳೆದವು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮಾತನಾಡಿ, ಮತದಾನ ನಮ್ಮ ಸಂವಿಧಾನಿಕ ಹಕ್ಕು. ಅದನ್ನು ಯಾವುದೇ ಆಸೆ-ಆಮಿಷೆಗಳಿಗೆ ಬಲಿಯಾಗದೇ ಪವಿತ್ರವಾದ ಹಕ್ಕನ್ನು ಚಲಾಯಿಸಬೇಕು. ದೇಶದ ಅಬಿವೃದ್ಧಿಗೆ ಪ್ರತಿ ಮತವು ಮಹತ್ವದಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರತಿಶತ ಮತದಾನದ ಗುರಿ ಮುಟ್ಟಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಂವಿಧಾನ ನಿರ್ಮಾತೃಗಳಾದ ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತೀಯ ಪ್ರಜೆಗೆ ನೀಡಿದ ಏಕಮತಾಧಿಕಾರ ಅತ್ಯಂತ ಅಮೂಲ್ಯವಾದುದು. ಇದರ ಮಹತ್ವ ಅರಿತು ಪ್ರಜೆಗಳು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂಬುದನ್ನು ಮತದಾರಲ್ಲಿ ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಮತದಾನದ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕವನಗಳನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಎಂದರು.
ಜನರಲ್ಲಿ ಅರಿವು ಮೂಡಿಸುವ ಶಕ್ತಿ ಕಾವ್ಯದಲ್ಲಿದ್ದು, ಸಾಮಾಜಿಕ ಬದಲಾವಣೆ ಮಾಡಲು ಸಾಹಿತ್ಯದ ಪ್ರಭಾವ ಹೆಚ್ಚಿದೆ. ಅಂಥ ಹರಿತ ಬರಹಗಳಿಂದ ಮತದಾನ ಜಾಗೃತಿ ಮೂಡಿಸುವ ಜವಬ್ದಾರಿ ಕಾವ್ಯಕ್ಕಿದೆ. ಈ ದಿಸೆಯಲ್ಲಿ ಮತ ಕಾವ್ಯದೊಂದಿಗೆ ಜನರಲ್ಲಿ ಮತದಾನದ ಅರಿವಿಗಾಗಿ ಪರಿಷತ್ತು ಶ್ರಮಿಸುತ್ತಿದೆ ಎಂದು ವಿಜಯಕುಮಾರ ತೇಗಲತಿಪ್ಪ ಹೇಳಿದರು.
ಹಿರಿಯ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಪಾಟೀಲ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್. ಅಂಡಗಿ, ಧರ್ಮಣ್ಣ ಎಚ್.ಧನ್ನಿ ವೇದಿಕೆ ಮೇಲಿದ್ದರು.
ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಸಂತೋಷ ಕುಡಳ್ಳಿ, ಸಿದ್ಧಲಿಂಗ ಜಿ. ಬಾಳಿ, ಶರಣಬಸಪ್ಪ ಕೋಬಾಳ, ಎಂ.ಎನ್. ಸುಗಂಧಿ, ಚಂದ್ರಕಾಂತ ಸೂರನ್, ಡಾ. ಬಸವರಾಜ ಕುಮ್ನೂರ್, ಹಣಮಂತ ಪ್ರಭು, ಡಾ. ನಾಗವೇಣಿ ಪಾಟೀಲ, ಗಂಗಮ್ಮಾ ಹಿರೇಮಠ, ಗಣೇಶ ಚಿನ್ನಾಕಾರ, ಪ್ರಿಯಾಂಕಾ ಪಾಟೀಲ, ಪದ್ಮಾವತಿ ಮಾಲಿಪಾಟೀಲ, ಶಿವಾನಂದ ಮಠಪತಿ, ಸೋಮಶೇಖರ ನಂದಿಧ್ವಜ, ಜ್ಯೋತಿ ಕೋಟನೂರ, ಬಸವರಾಜ ಉಪ್ಪಿನ್, ಸೈಯದ್ ನಜೀರುದ್ದೀನ್, ನವಾಬ್ ಖಾನ್, ಕಲ್ಯಾಣಕುಮಾರ ಶೀಲವಂತ, ಮಲ್ಲಿಕಾರ್ಜುನ ಕುಮಸಿ, ಡಾ. ರೆಹಮಾನ್ ಪಟೇಲ್, ವಿನೋದಕುಮಾರ ಜೇನವೇರಿ, ಎಚ್.ಎಸ್.ಬರಗಾಲಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪದ್ಮಾವತಿ ನಾಯಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.