ಪ್ರಜಾಪ್ರಭುತ್ವದ ಮಹತ್ವವನ್ನು ಅರಿತಿರುವರು ಕಡ್ಡಾಯವಾಗಿ ಮತ ಚಲಾಯಿಸಬೇಕು: ಉಪ್ಪಿನ
ಬೀದರ:ಏ.25:ಮಾಧ್ಯಮ ರಂಗವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವಾಗಿದೆ. ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ಏಜೆಂಟರುಗಳು ವಿತರಕರುಗಳು ಹಾಗೂ ಮಾರಾಟಗಾರರು ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಹೊಂದಿದವರಾಗಿರುವುದರಿಂದ ಮತದಾನದ ಬಗ್ಗೆ ಜಾಗೃತರಾಗಿದ್ದು, ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕೆಂದು
ಅಭಾವಿವಿ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ರವರು ನುಡಿದರು. ಅವರು ಇಂದು ಬೆಳ್ಳಂಬೆಳಿಗ್ಗೆ ಬೀದರ್ ನ ಅಂಬೇಡ್ಕರ್ ವೃತ್ತದಲ್ಲಿರುವ ಪತ್ರಿಕೆಗಳ ವಿಂಗಡಣೆ ಹಾಗೂ ರವಾನೆ ಕೇಂದ್ರದಲ್ಲಿ, ಬೀದರಿನಲ್ಲಿ ಹಂಚಿಕೆಯಾಗುವ ಸಮಸ್ತ ಪತ್ರಿಕೆಗಳ ಏಜೆಂಟರು, ವಿತರಕರು ಹಾಗೂ ಮಾರಾಟಗಾರರಿಗೆ ಮತದಾನ ಜಾಗೃತಿಯನ್ನು ಬೋಧಿಸಿ ಮಾತನಾಡುತ್ತಿದ್ದರು. ನಮ್ಮ ಇಚ್ಛೆಯ ಯಾವುದೇ ರಾಜಕೀಯ ಪಕ್ಷ ಯಾವುದೇ ವ್ಯಕ್ತಿಗಳಿಗೆ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಅವರು ಅಭಿಪ್ರಾಯ ಪಟ್ಟರು. ಹಿರಿಯ ನ್ಯಾಯವಾದಿಗಳಾದ ಗಂಗಪ್ಪ ಸೌಳೆಯವರು ಮಾತನಾಡಿ, ನಾವು ಕೇವಲ ಘೋಷಣೆಗಳನ್ನು ಕೂಗಿದರೆ ಸಾಲದು. ಯಾವುದೇ ಮಹಿಳೆಯರಾಗಲಿ ಪುರುಷರಾಗಲಿ ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತವನ್ನು ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲರೂ “ತಪ್ಪದೇ ಮತದಾನ ಮಾಡುವ ಸಂಕಲ್ಪ” ಕೈಗೊಂಡರು. ಈ ಸಂದರ್ಭದಲ್ಲಿ ಚಂದ್ರಕಾಂತ್, ರಾಮಚಂದ್ರ, ಬಾಗೇಶ್, ಸೋಮನಾಥ್, ಸಂತೋಷ್ ಬಿರಾದಾರ್, ಮನೋಜ್ ಕುಮಾರ್, ರಿಯಾಜ್ ಪಾಶಾ ಕೊಲ್ಲೂರು, ಸಚಿನ್, ಜಾವಿದ, ಶಿವರಾಜ, ಜಮಾದಾರ, ದೇವದಾಸ, ಬಸಣ್ಣ, ರಾಮಚಂದ್ರ, ಸೋಮನಾಥ, ಸಂತೋಷ, ಬಿರಾದಾರ, ಹಾಗೂ ಇತರರು ಹಾಜರಿದ್ದರು.