ಸಾಹಿತ್ಯ ಕೃಷಿಗಾಗಿ ಬೀದರನ ಸುಬ್ಬಣ್ಣ ಕರಕನಳ್ಳಿಗೆ ಡಾಕ್ಟರೇಟ್ ಪದವಿ
ಬೀದರ:ಏ.25: ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಕ್ರಾಂತಿಯ ಬೆಳಕು, ಸಂಘರ್ಷದ ಬೆಳಕು ಕೃತಿ ಬರೆದು ಪ್ರಕಟಣೆಯನ್ನು ಮಾಡಿರುತ್ತಾರೆ. ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಮೂಲಕ ಕಳೆದ ಆರು ವರ್ಷಗಳಿಂದ ನಾಡು ನುಡಿ ಸಾಹಿತ್ಯ ಸಂಸ್ಕøತಿ ಕುರಿತು ರಾಜ್ಯ ಮಟ್ಟದ ಕಾರ್ಯಕ್ರಮಗಳು, ವೀರ ಕನ್ನಡಿಗರ ಸೇನೆ ಮೂಲಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ಸೇವೆಯನ್ನು ಗುರುತಿಸಿ, ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಎಷಿಯಾ ಅಂತರಾಷ್ಟ್ರೀಯ ಸಂಶೋಧನ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಲಾಗಿದೆ 27ಶನಿವಾರ ದಕ್ಷಿಣ ಭಾರತದ ತಮಿಳುನಾಡನ ಹೋಸುರುನಲ್ಲಿ ನಡೆಯಲ್ಲಿರುವ ಸಮಾರಂಭದಲ್ಲಿ ಸುಬ್ಬಣ್ಣ ಕರಕನಳ್ಳಿಯವರಿಗೆ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುದೆಂದು ಮಾಸ್ಟರ್ ವಿ ಬಾಬು ವಿಜಯನ್ ತಿಳಿಸಿದ್ದಾರೆ.
ಡಾಕ್ಟರೇಟ್ ಪದವಿಗೆ ಆಯ್ಕೆಯಾದ ಸುಬ್ಬಣ್ಣ ಕರಕನಳ್ಳಿಯವರಿಗೆ ಕರ್ನಾಟಕ ಪರ ಸಂಘಷಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಸವೇಶ್ವರ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿ ಡಾ. ವಿಶ್ವನಾಥ ಜಿ. ಪಿ, ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ರಾಜ್ಯ ಉಪಾಧ್ಯಕ್ಷ ರವಿ ವಂಟಿ, ಶಿವಾಜಿ ಚೌವ್ಹಾಣ, ಕರ್ನಾಟಕ ಪ್ರಜಾಶಕ್ತಿ ಸಮಿತಿವಿಭಾಗಿ ಅಧ್ಯಕ್ಷ ಪ್ರೇಮಕುಮಾರ ಕಾಂಬಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮೋಳಕೇರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾ ನ್ಯಾ) ಜಿಲ್ಲಾಧ್ಯಕ್ಷ ಗೌತಮ ಭೋಸ್ಲೆ ಸತೀಶ ವಗ್ಗೆ ನಗರ ಸಭೆ ಸದಸ್ಯ ಸೂರ್ಯಕಾಂತ ಸಾಧುರೆ, ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್, ಕಾರ್ಯಧ್ಯಕ್ಷ ನಾಗೇಶ ಸೈನೆ, ತಾಲ್ಲೂಕ ಅಧ್ಯಕ್ಷರಾದ ರಾಹುಲ ಬೌದ್ಧೆ ಭಾಲ್ಕಿ ದೇವರಾಜ ಪಂತಗೆ ಹುಮನಾಬಾದ, ಮಹೇಂದ್ರ ಸಿಂಗ್ ಪಾಟೀಲ್ ಔರಾದ, ಧನರಾಜ ಬಸವಕಲ್ಯಾಣ, ಅಂಬಾದಾಸ ಸೈನೆ ಬೀದರ ದಕ್ಷಿಣ ಸಂದೀಪ್ ಚಾಂಬೋಳ ಬೀದರ ಉತ್ತರ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.