ಕಾಡವಾಡನಲ್ಲಿ :ಮತದಾನ ಜಾಗ್ರತಿ
ಬೀದರ್:ಏ.25: ತಾಲೂಕಿನ ಕಾಡವಾದ ಗಾಮದಲ್ಲಿ ಮೇ 7 ರಂದು ಎಲ್ಲರೂ ತಪ್ಪದೇ ಮತ ಚಲಾಯಿಸಿ’ ಎಂದು ಬೀದರ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕಿ ಲಕ್ಷ್ಮೀ ಬಿರಾದಾರ ಮನವಿ ಮಾಡಿದರು.
ಕಾಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿರ್ಜಾಪುರದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ನರೇಗಾ ಕುಲಿ ಕಾರ್ಮಿಕರಿಗೆ ತಿಳಿಸಿದರು.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಮತದಾನವಾಗಬೆಕಾದರೆ ಎಲ್ಲರೂ ಮತದಾನ ಮಾಡಬೇಕು ಅಂದಾಗ ಮಾತ್ರ ಮತದಾನ ಪ್ರಮಾನ ಹೆಚ್ಚಿಸಲು ಸಾಧ್ಯ ಹಾಗೂ ಮತದಾನ ಮಾಡುವುದು ಅದು ನಮ್ಮೆಲ್ಲರ ಸಂವಿಧಾನಿಕ ಹಕ್ಕು.
ಎಂದು ಹೇಳಿದರು.
ಕಾರ್ಮಿಕರಿಗೆ ಮತದಾನ ಪ್ರತಿಜ್ಞಾವಿಧಿ ಭೋಧಿಸಿದರು
ಈ ಸಂದರ್ಭದಲ್ಲಿ ಕಾಡವಾಡ ಅಭಿವೃದ್ಧಿ ಅಧಿಕಾರಿಗಳಾದ ಜ್ಞಾನೇಂದ್ರ ಹೊಳ್ಳಕರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೆಶಿಕಲಾ ದತ್ತಾತ್ರಿ, ಪಂಚಾಯತಿ ಸಿಬ್ಬಂದಿಗಳಾದ ಸಂಗಮೇಶ್, ರಾಜು ಮೇಟ್ಟಿ, ಐಇಸಿ ಸಂಯೋಜಕರು ಸತ್ಯಜೀತ ನೀಡೋದಿಕರ,ಡಿಇಒ , ಹಾಗೂ ಕೂಲಿ ಕಾರ್ಮಿಕರು ಇದ್ದರು.