ಸಂವಿಧಾನದ ಆಶಯ ಉಳಿಸಿ ಬೆಳೆಸುವುದು ಬಿಎಸ್‌ಪಿ
ಬೆಂಗಳೂರು, ಏ. ೨೫- ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಮೀಸಲು ಕ್ಷೇತ್ರಗಳು ಒಳಗೊಂಡತೆ ಎಲ್ಲಾ ಕ್ಷೇತ್ರಗಳಲ್ಲಿ ಬಿಎಸ್ ಪಿ ಅಭ್ಯರ್ಥಿಗಳು ಕಣದಲ್ಲಿದ್ದು, ತಮ್ಮ ಪಕ್ಷದ ಧ್ಯೇಯ ಕುರಿತು ಬಿಎಸ್ ಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಸಂದರ್ಶನ ನೀಡಿದ್ದಾರೆ
ಉತ್ತರ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಭಿನ್ನವೆಂದು ತಿಳಿದಿರುವುದೇ ತಪ್ಪು. ಈ ಪಕ್ಷಗಳ ಆಡಳಿತದಲ್ಲಿ ಕಂಡುಬಂದಿರುವ ಭಿನ್ನತೆಯಾದರೂ ಏನಿದೆ? ಇಂದಿನಂತೆಯೇ ಅಂದು ಕಾಂಗ್ರೆಸ್ ಆಳ್ವಿಕೆಯಲ್ಲಿಯೂ ಬಡತನ, ನಿರುದ್ಯೋಗ, ದೌರ್ಜನ್ಯ, ದಬ್ಬಾಳಿಕೆ, ಕೋಮು ಗಲಭೆ, ಮೀಸಲಾತಿ ವಿರೋಧಿ ನೀತಿ, ಮಹಿಳಾ ದೌರ್ಜನ್ಯ, ರೈತರ ಶೋಷಣೆ ಮುಂತಾದವೆಲ್ಲವೂ ಇತ್ತು!
ಇದೇ ದುರಾಡಳಿತವನ್ನು ಇಂದು ಕರ್ನಾಟಕದಲ್ಲೂ ನೋಡುತ್ತಿದ್ದೇವೆ.