ದಾವಣಗೆರೆ, ಬಳ್ಳಾರಿ ನೂತನ ಬಸ್ ಮಾರ್ಗಗಳಿಗೆ ಚಾಲನೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಸೆ.21 : ದಾವಣಗೆರೆ ಮತ್ತು ಬಳ್ಳಾರಿ ನೂತನ ಬಸ್ ಮಾರ್ಗಗಳಿಗೆ ಶಾಸಕ ಕೃಷ್ಣನಾಯ್ಕ ತಾಲೂಕಿನ ನಂದಿಹಳ್ಳಿಯಲ್ಲಿ ಚಾಲನೆ ನೀಡಿದರು.
ಈ ಭಾಗದ ಜನರ ಬೇಡಿಕೆಯಂತೆ ದಾವಣಗೆರೆ ಹಾಗೂ ಬಳ್ಳಾರಿ ನಗರಗಳಿಗೆ ನೂತನ ಬಸ್ ಮಾರ್ಗಗಳನ್ನು ಪ್ರಾರಂಭಿಸಿದ್ದೇವೆ. ಪ್ರಯಾಣಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಶಾಸಕರು ತಿಳಿಸಿದರು.
ಘಟಕ ವ್ಯವಸ್ಥಾಪಕ ವೆಂಕಟಾಚಲಪತಿ ಮಾತನಾಡಿ, ಹೂವಿನಹಡಗಲಿ-ದಾವಣಗೆರೆ ಬಸ್ ಬಾವಿಹಳ್ಳಿ, ಹೊಳಗುಂದಿ, ನಂದಿಹಳ್ಳಿ, ಹರಪನಹಳ್ಳಿ, ಕಂಚಿಕೇರಿ, ಬೆಂಡಿಗೇರಿ ಮಾರ್ಗವಾಗಿ ತೆರಳಲಿದ್ದು, ಅದೇ ಮಾರ್ಗದಲ್ಲಿ ಹಿಂತಿರುಗಲಿದೆ. ಹೂವಿನಹಡಗಲಿ-ಬಳ್ಳಾರಿ ಬಸ್ ಹಡಗಲಿ, ಹೊಳಗುಂದಿ, ಹ.ಬೊ.ಹಳ್ಳಿ, ಹೊಸಪೇಟೆ ಮಾರ್ಗವಾಗಿ ತೆರಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂಠಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಬಿ. ಕರಿಬಸಪ್ಪ, ಮುಖಂಡರಾದ ವಿ.ಬಿ.ಶಿವಾನಂದ, ಬಾಷಾ, ಹನುಮಂತಪ್ಪ ಇತರರು ಇದ್ದರು.