ರಾಷ್ಟ್ರ ರಾಜ್ಯ ಆಂಧ್ರ ಪ್ರದೇಶದ ಸಮಿತಿಗಳ ವೀರಶೈವ ಮಹಾಸಭಾ ಅಧ್ಯಕ್ಷರಿಗೆ ಆಯ್ಕೆಯ ಪ್ರಮಾಣ ಪತ್ರ
* ರಾಷ್ಟ್ರೀಯ ಅಧ್ಯಕ್ಷರಾಗಿ ಶ್ಯಾಮನೂರು ಶಿವಶಂಕ್ರಪ್ಪ ಪುನರ್ ಆಯ್ಕೆ.
* ರಾಜ್ಯ ಅಧ್ಯಕ್ಷರಾಗಿ ಶಂಕರ ಬಿದರಿ‌ ನೂತನ ಆಯ್ಕೆ
* ಆಂಧ್ರ ಪ್ರದೇಶದ ಅಧ್ಯಕ್ಷರಾಗಿ ದಂಡಿನ ಶಿವಾನಂದ ಪುನರ್ ಆಯ್ಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.21:  ಈಚೆಗೆ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ  ಮಹಾಸಭಾದ ಚುನಾವಣೆಯಲ್ಲಿ ಆಯ್ಕೆಯಾದ ರಾಷ್ಟ್ರೀಯ, ರಾಜ್ಯ, ಆಂಧ್ರಪ್ರದೇಶದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಿಗೆ ಆಯ್ಕೆಯ ಪ್ರಮಾಣ ಪತ್ರ ವಿತರಣಾ ಸಮಾರಂಭ ಮಹಾಸಭೆಯ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ನಿನ್ನೆ ನಡೆಯಿತು‌.
ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಪುನರ್ ಆಯ್ಕೆಯಾದ ಶ್ಯಾಮನೂರು ಶಿವಶಂಕ್ರಪ್ಪ, ರಾಜ್ಯ ಅಧ್ಯಕ್ಷರಾಗಿ  ಮೊದಲಬಾರಿಗೆ ಅವಿರೋಧವಾಗಿ ಆಯ್ಕೆಯಾದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ‌, ಅಂದ್ರಪ್ರದೇಶ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದ ದಂಡಿನ ಶಿವಾನಂದ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾದ ಸಚಿವ  ಈಶ್ವರ ಖಂಡ್ರೆ, ಸಂಸದ ಬಿ.ವೈ.ರಾಘವೇಂದ್ರ
ಬಳ್ಳಾರಿಯವರಾದ ಕೋರಿ ವಿರೂಪಾಕ್ಷಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ  ಬಳ್ಲಕಾರಿಯ ಅಂಗಡಿ ಶಂಕರಪ್ಪ, ಕರೀಗೌಡ ಮೊದಲಾದವರು ಆಯ್ಕೆಯ ಪ್ರಮಾಣ ಪತ್ರ ಪಡೆದು ಸನ್ಮಾನಿತಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಶಿವ ಶಂಕ್ರಪ್ಪ ಅವರು ತಮ್ಮನ್ನು ಮೂರನೇ ಬಾರಿಗೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿ, ವೀರಶೈವ ಲಿಂಗಾಯತ ಉಪಪಂಗಡಗಳ ಯುವಕ-ಯುವತಿಯರ ನಡುವೆ ವಿವಾಹ ಏರ್ಪಡಬೇಕು. ಉಪಪಂಗಡಗಳ ನಡುವೆ ಹೆಣ್ಣು- ಗಂಡನ್ನು ಕೊಟ್ಟು ತರುವ ಸಂಪ್ರದಾಯ ರೂಢಿ ಸಿಕೊಳ್ಳಬೇಕು. ಅದರಿಂದ ಉಪ ಪಂಗಡಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ಎಲ್ಲರೂ ಒಟ್ಟಾದಾಗ ನಮಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯ ಸಿಗುತ್ತವೆ ಎಂದರು.
ಮಹಾಸಭಾದ ಮಹಾಪ್ರಧಾನ ಕಾರ್ಯ ದರ್ಶಿ ಈಶ್ವರ್ ಖಂಡ್ರೆ ಸಹ ಮಾತನಾಡಿದರು.
ದಂಡಿನ ಶಿವಾನಂದ ಅವರು ಮಾತನಾಡಿ ಆಂದ್ರದ ವೀರಶೈವ ಸಮುದಾಯವನ್ನು ಸಂಘಟಿಸಲು ಸರ್ವ ಪ್ರಯತ್ನ ಮಾಡಲಿದೆಂದು ಹೇಳಿದರು.