ಪ್ರತಿಭಾ ಕಾರಂಜಿ ಕಲೋತ್ಸವ
ನವಲಗುಂದ,ಸೆ.21: ಪಟ್ಟಣದ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನವಲಗುಂದ 1 ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಬಿ ಮಲ್ಲಾಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೊ ಅಷ್ಟೇ ಪಠ್ಯತರ ಚಟುವಟಿಕೆಯು ಬಹಳ ಮುಖ್ಯವಾಗಿದ್ದು ಸರ್ಕಾರ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿದೆ ಎಂದರು.
ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ವಿದ್ಯಾರ್ಥಿಗಳು ಕೇವಲ ಪಠ್ಯೇಕ್ಕಷ್ಟೇ ಸೀಮಿತರಾಗಬಾರದು. ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶ, ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಹಾಗೆ ಸರ್ಕಾರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಕಾರದ ಪ್ರತಿಭೆಯನ್ನು ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ವೇದಿಕೆ ಮೇಲಿದ್ದ ಅತಿಥಿಗಳಿಗೆ ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯವರು ಸನ್ಮಾನಿಸಿದರು,
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಬಿಲ್ಲಶಿವಣ್ಣವರ, ಶಿಕ್ಷಕರಾದ ಎಸ್. ಎಫ್ ನೀರಲಗಿ, ಎನ್.ವಾಯ್ ಕಳಸಾಪುರ, ಎಂ.ಎನ್ ವಗ್ಗರ, ಗಣೇಶ ಹೊಳೆಯಣ್ಣವರ, ಎನ್.ಎಸ್ ತಾಳಿಕೋಟಿಮಠ, ಎಂ.ಎಚ್ ಚಿಕನಾಳ, ಬಿ.ಎಂ ಯಲಿಗಾರ, ಎಸ್.ಎಫ್ ಈರಡ್ಡಿ, ಎಚ್.ಎಂ ಗುರಾಣಿ, ಭರತೇಶ್ ಕುರುಬರ, ವಾಯ್.ಎಲ್. ಸುಣಗಾರ, ವಿದ್ಯಾಜ್ಯೋತಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕಿ ನೀಲಾ ಕುರುಬರ, ನಿವೃತ್ತ ಶಿಕ್ಷಕರಾದ ಎನ್. ಎನ್. ಹಾಲಿಗೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.