ದೇಶದ ಅತಿಹೆಚ್ಚು ಐ ಐ ಟಿ ಗಳು ಗ್ರಾಮೀಣ ಭಾಗದಲ್ಲಿವೆ : ಗಾದಗೆ
ಭಾಲ್ಕಿ:ಅ.೫: ಗ್ರಾಮೀಣ ಭಾಗದ ವಿದ್ಯಾಭ್ಯಾಸ ತುಂಬಾ ಒಳ್ಳೆಯದು, ದೇಶದ ಅತಿ ದೊಡ್ಡ ವ್ಯಕ್ತಿಗಳಾದವರು ಗ್ರಾಮೀಣ ಭಾಗದಲ್ಲಿಯೇ ವಿದ್ಯಾಭ್ಯಾಸಮಾಡಿ ಮುಂದೆ ಬಂದಿದ್ದಾರೆ ಎಂದು ಕಲಬುರಗಿ ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ| ಬಸವರಾಜ ಗಾದಗೆ ಅಭಿಪ್ರಾಯಪಟ್ಟರು.
ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಶುಕ್ರವಾರ, ವಿಜಯೋತ್ಸವ ೨೦೨೪ರ ಅಂಗವಾಗಿ ನಡೆದ ಹೊಸಬರ ಸಮ್ಮಿಳನ (ಫ್ರೇಶರ್ ಮೀಟ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಲಿಂಗೈಕ್ಯ ಡಾ| ಚನ್ನಬಸವ ಪಟ್ಟದ್ದೇವರ ಆಶಿರ್ವಾದದಿಂದ, ಮಾಜಿ ಸಚಿವ ಭೀಮಣ್ಣಾ ಖಂಡ್ರೆಯವರು, ಈ ಭಾಗದ ಗ್ರಾಮೀಣ ಬಡ ಮಕ್ಕಳ ಉದ್ಧಾರಕ್ಕಾಗಿ ೧೯೮೨ ರಲ್ಲಿ ಗ್ರಾಮೀಣ ಇಂಜಿನಿಯರಿAಗ್ ಕಾಲೇಜು ಸ್ಥಾಪಿಸಿದರು. ಬೆಂಗಳೂರು ಸೇರಿದಂತ ಪ್ರತಿಷ್ಠಿತ ಎಲ್ಲಾ ಕಾಲೇಜುಗಳಲ್ಲಿ ಸಿಗುವ ಹೆಚ್ಚಿನ ಸೌಲಭ್ಯಗಳು ಈ ಕಾಲೇಜಿನಲ್ಲಿ ಒದಗಿಸಲಾಯಿತು. ಹೀಗಾಗಿ ಇದನ್ನು ಮುಂದೆ ಬಿಕೆಐಟಿ ಕಾಲೇಜು ಎಂದು ಮರು ನಾಮಕರ ಹೊಂದಿ, ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಲಿದೆ. ಜಗತ್ತಿನ ಎಲ್ಲಾ ರಾಜ ಮಹಾರಾಜರು, ವಿದ್ವಾಂಸರು ಗುರುಕುಲ ಎನ್ನುವ ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸಮಾಡಿಯೇ ಬೆಳೆದಿದ್ದಾರೆ. ಆದರೆ ಇಂದು ನಮ್ಮ ಯುವಕರು ಬೆಂಗಳೂರ ಸೇರಿದಂತೆ ನಗರ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಓದುವ ವಿದ್ಯಾರ್ಥಿಗಳು ನಿಸರ್ಗದ ಆಶಿರ್ವಾದದಲ್ಲಿರುವರು. ಭಾರತೀಯರ ಜ್ಞಾನ ಪಡೆದು ವಿಶ್ವದ ವಿಶ್ವವಿದ್ಯಾಲಯಗಳು ಬೆಳೆಯುತ್ತಿವೆ. ಆದರೆ ನಮ್ಮ ದೇಶದ ವಿಶ್ವವಿದ್ಯಾಲಯಗಳು ಬೆಳೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ| ಅಂಕುಶ ಢೋಲೆ, ವಿದ್ಯಾರ್ಥಿಗಳು ರಟ್ಟು ಹುಡಿದು ಪರೀಕ್ಷೆಗಾಗಿ ಓದದೇ, ವಿದ್ಯಾಭ್ಯಾಸ ಮಾಡಿದ ವಿಷಯವನ್ನು ನೆನಪಿನಲ್ಲಿಟ್ಟುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯಮಾಡಬೇಕು ಎಂದು ಹೇಳಿದರು.
ಇದೇವೇಳೆ ಪ್ರತಿಶತ ಅಂಕ ಪಡೆದು ಉತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಥಮೇಶ, ಶೇಖ್ ಮಜಹರ ಅಹಮದ ಮತ್ತು ರಕ್ಷಿತಾ ರವರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.
ಪ್ರಾಂಶುಪಾಲ ಡಾ| ಉದಯಕುಮಾರ ಕಲ್ಯಾಣ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ| ಅಶೋಕ ಕೋಟಿ, ಡಾ| ಬಿ.ಸೂರ್ಯಕಾಂತ, ಡಾ| ಸಂಗಮೇಶ ಕಲ್ಯಾಣೆ, ಡಾ| ಪ್ರಶಾಂತ ಸಂಗೋಳಗಿ, ಡಾ| ಮಲ್ಲಿಕಾರ್ಜುನ ದೇವಣಿ, ಡಾ| ಶಿವಕುಮಾರ ಅಣದುರೆ, ಡಾ| ವಿಜಯಕುಮಾರ ದುರ್ಗ, ಡಾ| ಸಂಗಶೆಟ್ಟಿ ಕಲ್ಯಾಣೆ, ಪ್ರೊ| ಬಿ.ಎಮ್.ಪಾಟೀಲ, ಪ್ರೊ| ಮಲ್ಲಿಕಾರ್ಜುನ ಹೊನ್ನಾ, ಸುಮಿತ ಕುಮಾರ, ಅಭಿಶೇಕ ಮೋರೆ, ಪವನ, ಸಂತೋಶ ತಪಸಾಳೆ, ಪ್ರೊ| ಪ್ರಹ್ಲಾದ.ಎಸ್, ಪ್ರೋ| ಯೋಗೇಶ, ಡಾ| ರಾಜಶೇಖರ ಮಠಪತಿ, ಪ್ರೊ| ಗೀತಾ ಪಾಟೀಲ, ಶಾಮಕುಮಾರ ಶಟಕಾರ ಉಪಸ್ಥಿತರಿದ್ದರು. ಸ್ನೇಹಾ, ಗೀತಾ ಮತ್ತು ಸಂಗಡಿಗರಿAದ ಪ್ರಾರ್ಥನಾ ಗೀತೆ ಹಾಡಲಾಯಿತು. ಡಾ| ಪ್ರಶಾಂತ.ಎಸ್ ವಂದಿಸಿದರು.
ಬಿಕೆಐಟಿ ಒಂದು ದೊಡ್ಡ ವಿಶ್ವವಿದ್ಯಾಲಯ ಆಗುವ ಕಾಲ ದೂರವಿಲ್ಲ ಅದಕ್ಕೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಶ್ರಮ ಬೇಕಾಗಿದೆ. – ಡಾ| ಬಸವರಾಜ ಗಾದಗೆ, ಪ್ರಾದೇಶಿಕ ನಿದೇರ್ಶಕರು, ವಿಟಿಯು ಕಲಬುರಗಿ.