ಶಾಸಕ ನರೇಂದ್ರರೋ ಮಂಜುನಾಥರೋ..!?
ಸಂಜೆವಾಣಿ ವಾರ್ತೆ
ಹನೂರು.ಅ.05:- ಹನೂರು ಕ್ಷೇತ್ರದ ಶಾಸಕ ಆರ್. ನರೇಂದ್ರರೋ ಅಥವಾ ಎಂ.ಆರ್.ಮಂಜುನಾಥೋ ಎಂಬ ಜಿಜ್ಞಾಸೆ ಕ್ಷೇತ್ರದ ಮತದಾರರನ್ನು ಕಾಡತೊಡಗಿದೆ.
ಯಾಕೆ ಈ ಪ್ರಶ್ನೆ ಅಂತೀರಾ..? ಅದಕ್ಕೆ ಉತ್ತರ ಇಲ್ಲಿದೆ ನೋಡಿ..ಪ್ರಸ್ತುತವೀಗ ಒಳ್ಳೆಯದು ಕೆಟ್ಟದು ಸೇರಿದಂತೆ ಯಾವುದೇ ವಿದ್ಯಾಮಾನಗಳಿರಲಿ ಕ್ಷಣ ಮಾತ್ರದಲ್ಲಿ ಸಾರ್ವಜನಿಕರನ್ನು ತಲುಪುವುದು ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣದಲ್ಲಿ ಹೀಗಿರುವಾಗ ಮಾಜಿ ಶಾಸಕ ಆರ್.ನರೇಂದ್ರ ಅವರು ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಬರೋಬ್ಬರಿ ಒಂದೂವರೆ ವರ್ಷವಾಗಿದ್ದರೂ, 4.9 ಕೆ ಪಾಲೋವರ್ಸ್ 30 ಪಾಲೋಸ್ ಹೊಂದಿರುವ ತಮ್ಮ ಪೇಸ್ ಬುಕ್ ಖಾತೆಯಲ್ಲಿ ತಾವು ಮಾಜಿ ಎಂಬುದನ್ನೂ ಮರೆತು ಇನ್ನೂ ಕೂಡ ಖ.ಓಚಿಡಿeಟಿಜಡಿಚಿ. ಒಐಂ ಊಚಿಟಿuಡಿ ಅoಟಿsಣiಣueಟಿಛಿಥಿ ( ಆರ್.ನರೇಂದ್ರ ಶಾಸಕರು ಹನೂರು ಕ್ಷೇತ್ರ ) ಎಂದು ಹಾಕಿಕೊಂಡಿರುವುದೇ ಸಾರ್ವತ್ರಿಕ ವಲಯದಲ್ಲಿ ಅಪಹಾಸ್ಯಕ್ಕೀಡಾಗಿದ್ದು ವ್ಯಾಪಕ ಗೊಂದಲಕ್ಕೆ ಕಾರಣವಾಗಿದೆ.
ಪ್ರಸ್ತುತ ಪೇಸ್ ಬುಕ್ ಜನಪ್ರಿಯ ಸಾಮಾಜಿಕ ಜಾಲತಾಣವಾಗಿದ್ದು ಹನೂರು ಕ್ಷೇತ್ರದ ಪ್ರಬುದ್ದರಿಗೆ ಮಾತ್ರ ನರೇಂದ್ರ ಮಾಜಿ ಎಂಬುದು ತಿಳಿದಿದ್ದು ಈ ಬೆಳವಣಿಗೆಯಿಂದಾಗಿ ಕ್ಷೇತ್ರದ ಬಹುತೇಕ ಸಾಮಾನ್ಯ ಜನತೆ ಹಾಗೂ ಹೊರಗಿನವರಿಗೆ ಹಾಲಿ ಶಾಸಕ ಎಂದೇ ಬಿಂಬಿಸುವಂತಾಗಿದ್ದು ಸಮಾಜಕ್ಕೆ ಇದು ತಪ್ಪು ಸಂದೇಶ ನೀಡಿದಂತಾಗುವುದಿಲ್ಲವೆ..? ಮೂರು ಬಾರಿ ಗೆದ್ದು ಶಾಸಕರಾಗಿದ್ದವರಿಗೆ ಈ ಬಗ್ಗೆ ಕನಿಷ್ಟ ಜ್ಞಾನ ಬೇಡವೆ..? ಅಥವಾ ಅವರದೇ ಪಕ್ಷ ಅಧಿಕಾರದಲ್ಲಿರುವುದರಿಂದ ಹಾಗೂ ಅದೇ ನೆಪದಲ್ಲಿ ವರ್ಗಾವಣೆ ಸೇರಿದಂತೆ ಅನೇಕ ತರದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮಾಜಿ ಶಾಸಕ ನರೇಂದ್ರರಿಗೆ ತಾವು ಹಾಲಿ ಹಾಗೂ ಅಧಿಕಾರದಲ್ಲೇ ಮುಂದುವರೆದಿರುವ ಭ್ರಮೆಯಲ್ಲಿದ್ದಾರಾ ಹೆಂಗೆ..? ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೂರು ಭಾರಿ ಗೆದ್ದು ಅಧಿಕಾರದಲ್ಲಿದ್ದಾಗ ಜನಹಿತ ಕಾರ್ಯಗಳನ್ನು ಮಾಡುವಲ್ಲಿ ಮೈಮರೆತು ಕನಿಷ್ಟ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಕ್ಷೇತ್ರದಾದ್ಯಂತದ ಡಾಂಬರ್ ರಸ್ತೆಗಳ ಅಭಿವೃದ್ದಿಗೂ ಆದ್ಯತೆ ನೋಡದೆ ಬಂಡಳ್ಳಿ, ಚಿಂಚಳ್ಳಿ.ರಾಮಾಪುರ, ಗಡಿಯಂಚಿನ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್ ರೋಡ್ ಸೇರಿದಂತೆ ಬಹುತೇಕ ಗ್ರಾಮಗಳ ರಸ್ತೆಗಳ ಸ್ಥಿತಿ ಅದೋಗತಿ ತಲುಪಿದ್ದು ಸರಣಿ ಅಪಘಾತಗಳಿಂದ ಸಾವು ನೋವುಗಳಿಗೊಳಗಾಗಿ ಜರ್ಝರಿತರಾಗಿರುವ ಜನ ಇಡಿ ಶಾಪ ಹಾಕುವುದನ್ನು ಬಿಟ್ಟರೆ ಅನ್ಯ ದಾರಿ ಕಾಣದೆ ಅನಿವಾರ್ಯವಾಗಿ ಸಂಕಷ್ಟಗಳಿಗೆ ಹೊಂದಿಕೊಂಡೇ ಹಾದಿ ಸವೆಸುವುದನ್ನು ಕರಗತ ಮಾಡಿಕೊಂಡಿದ್ದಾರೆ.. ಕ್ಷೇತ್ರದ ರೈತರ ಹಿತವನ್ನು ಕಡೆಗಣಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಆಜ್ಞಾಪಿಸಿ ಗುಂಡಾಲ್ ಜಲಾಶಯದ ಬಹುಪಾಲು ನೀರನ್ನು ತಮ್ಮ ಜಮೀನಿಗೆ ಬಿಟ್ಟುಕೊಂಡಿರುವುದೇ ಇವರ ಸಾಧನೆಯೆ..? ಇಷ್ಟೆಲ್ಲಾ ಅವಾಂತರಗಳನ್ನು ಬಗೆಹರಿಸಲಾರದೆ ಕ್ಷೇತ್ರದ ಮತದಾರರಿಂದ ಸಾರಾಸಗಟಾಗಿ ತಿರಸ್ಕೃತಗೊಂಡು ಮೂಲೆಗುಂಪಾಗಿರುವ ಮಾಜಿ ಶಾಸಕ ಆರ್.ನರೇಂದ್ರ ಇನ್ನೂ ಪೇಸ್ ಬುಕ್ ಖಾತೆಯಲ್ಲಿ ಹಾಲಿ ಶಾಸಕರಾಗಿಯೇ ಮುಂದುವರೆದಿರುವುದನ್ನು ಮಾಜಿಯಾಗಿ ಬದಲಾಯಿಸಿ ಸಾರ್ವಜನಿಕರ ಗೊಂದಲ ಪರಿಹರಿಸುವರೆ..?