ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ
ಬೀದರ:ಅ.೫: ನಗರದ ಪ್ರಸಾದ ನಿಲಯದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವವು ೯ ದಿವಸದವರೆಗೆ ನಾಡೋಜ ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದೇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಉದ್ಛಾಟನಾ ಸಮಾರಂಭವು ಅ.೩ ರಂದು ಗುರುವಾರ ಹಿರೇಮಠ ಸಂಸ್ಥಾನದ ಪೂಜ್ಯರಾದ ಮಹಾಲಿಂಗ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು. ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ಲೀಲಾವತಿ ಚಕೋತೆಯವರು ಉದ್ಛಾಟಕರಾಗಿ ಆಗಮಿಸಿ, ಬಸವಜ್ಯೋತಿ ಪ್ರಜ್ವಲನೆ ಮಾಡಿ ಮಾತನಾಡುತ್ತ, ೧೨ನೇ ಶತಮಾನದ ಮೇರು ವ್ಯಕ್ತಿತ್ವದ ಅಧ್ಯಾತ್ಮಿಕ ಮಹಾತಾಯಿ ಅಕ್ಕಮಹಾದೇವಿ ರವರು ಚಿಕ್ಕ ವಯಸ್ಸಿನಲ್ಲಿ ಮನೆಯನ್ನು ತ್ಯಾಗ ಮಾಡಿ ಚನ್ನಮಲ್ಲಿಕಾರ್ಜುನನೇ ನನ್ನ ಆರಾಧ್ಯ ದೇವರು ಎಂದು ನಂಬಿ ಜೀವನದಲ್ಲಿ ಬಹುದೊಡ್ಡ ಸವಾಲು ಎದುರಿಸಿ ಮನವನ್ನು ಗಟ್ಟಿ ಮಾಡಿಕೊಂಡು ಆತ್ಮಸ್ಥೆöÊರ್ಯದಿಂದ ಅಂತರAಗದ ಮಹಾ ಬೆಳಕಿಗಾಗಿ ಲೌಕಿಕ ಜೀವನ ತ್ಯಜಿಸಿ ದಿಗಂಬರೆಯಾಗಿ ಕಲ್ಯಾಣದಡೆಗೆ ಬಸವ ಗುರುವಿನ ಮಹಾ ಮನೆಯಲ್ಲಿ ಜೀವನ ಪಯಣದ ಉದ್ದೇಶಗಳ ಚಿಂತನೆಗೈದು ಇಷ್ಟಲಿಂಗ ಶಿವಯೋಗದಲ್ಲಿ ತೊಡಗಿಸಿಕೊಂಡು ಅನೇಕ ಎಡರು ತೊಡರುಗಳಿಗೆ ಲೆಕ್ಕಿಸದೇ ಶಿವಯೋಗಗೈದು ವಚನಗಳ ಮುಖಾಂತರ ತನ್ನ ಅಧ್ಯಾತ್ಮಿಕ ಸಾಧನೆಯ ಮತ್ತು ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ವಚನಗಳ ಮುಖಾಂತರ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಮುಂದುವರೆದು ಮಾತನಾಡುತ್ತ, ಪಾಶ್ಚಿಮಾತ್ಯರ ಒಲವು ಬಸವತತ್ವದೆಡೆಗೆ ಒಲವು ತೋರಿಸುತ್ತಿರುವುದು ಪ್ರಶಂಸನಿಯವಾದದ್ದು, ಜರ್ಮಿನಿ ಮಹಿಳೆಯು ಅಕ್ಕನ ಇಂಗ್ಲೀಷ ಭಾಷೆಯಲ್ಲಿರುವ ೧೫೪ ವಚನಗಳನ್ನು ಅಧ್ಯಯನ ಮಾಡಿ ವಾಸ್ತವಿಕ ಸತ್ಯಾಂಶಗಳನ್ನ ಅರಿತುಕೊಂಡಿದ್ದು ಮತ್ತು ಬಸವಾದಿ ಶರಣರ ಸಂಸ್ಕೃತಿ, ಸಂಸ್ಕಾರ ಹಾಗೂ ಮೌಲಿಕ ವಿಚಾರಗಳೂ ಜಗತ್ತಿಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ನುಡಿದರು.
ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಕನ್ನಡ ಉಪನ್ಯಾಸಕಿ ಧನಲಕ್ಷಿö??Ã ಪಾಟೀಲ್ ರವರು ಅಕ್ಕನ ಕುರಿತು ಅನುಭಾವ ನುಡಿ ಮಂಡಿಸುತ್ತಾ, ಸ್ತಿçÃ ಶೋಷಣೆ ಸಂಕೋಲೆಯಿAದ ಹೊರಬರಲು ಬಸವಾದಿ ಶರಣರು ಸ್ತಿçÃ ಸಮಾನತೆಗಾಗಿ ೧೨ನೇ ಶತಮಾನದಲ್ಲಿ ಕ್ರಾಂತಿ ಮಾಡಿದ್ದಾರೆ. ಆಧ್ಯಾತ್ಮಿಕ ಜೀವಿಯಾದ ಅಕ್ಕ
ಹೇಳುವಂತೆ ‘ಸಾವಿಲ್ಲದ ರೂಹಿಲ್ಲದ, ಕೇಡಿಲ್ಲದ, ಚನ್ನಮಲ್ಲಿಕಾರ್ಜುನ ಚೆಲುವಂಗೆ ನಾನು ಒಲುವೆ’ ಎಂದು ಹೇಳುತ್ತಾರೆ. ಅವರ ವಚನಗಳಲ್ಲಿ ಜೀವನದ ಮೌಲ್ಯಗಳು ಮತ್ತು ಅದ್ಭುತ ಶಕ್ತಿ ಅಡಗಿವೆ ಎಂದು ವಿಷಯ ಪ್ರತಿಪಾದಿಸಿದರು.
ಸಾನ್ನಿಧ್ಯ ವಹಿಸಿರುವ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಮರಣವೇ ಮಹಾನವಮಿಯು ಬಸವಾದಿ ಶರಣರು ಮಾನವ ಕಲ್ಯಾಣಕ್ಕಾಗಿ, ಸಕಲ ಜೀವಿಗಳ ಅಂತರAಗದಲ್ಲಿ ದೇವರನ್ನು ಕಂಡAತಹ ದಿಶೆಯಲ್ಲಿ ಮಾನವಿಯ ಪ್ರೇಮ, ಜಾತಿ ರಹಿತ, ವರ್ಗ ರಹಿತ ಸಮಾನತೆಗಾಗಿ ಪ್ರಾಣ ತ್ಯಾಗ ಮಾಡಿದ ದಿವಸ ಇದಾಗಿದೆ ಮತ್ತು ಹರಳಯ್ಯ ಮದುವಯ್ಯ ಮತ್ತು ಶರಣರಿಗೆ ಎಳೆಹೂಟೆ ಶಿಕ್ಷೆ ನೀಡಿದ ಈ ದಿವಸವೇ ಆಗಿದೆ. ಈ ಸಂದರ್ಭದಲ್ಲಿ ಈ ಒಂಬತ್ತು ದಿವಸ ಶರಣಿಯರ ಜೀವನ ಸಾಧನೆ ಕುರಿತು ಚಿಂತನೆ ಮಾಡಲಾಗುವುದು ಮತ್ತು ಕಲ್ಯಾಣ ಕ್ರಾಂತಿಯ ವಿಜಯೋತ್ಸವು ಆಗಿದೆ ಎಂದು ನುಡಿದರು.
ನಿರ್ಮಲಾ ಸಿದ್ದಯ್ಯಾ ಕೌಡಿಮಠ ಅಧ್ಯಕ್ಷತೆಯನ್ನು ವಹಿಸಿದರೆ, ಭಾಗೀರಥಿ ಮಡಿವಾಳಪ್ಪಾ, ಶಕುಂತಲಾ ಉಮಾಕಾಂತ ಮೀಸೆ ಮತ್ತು ಪ್ರೊ. ವಜ್ರಾ ಪಾಟೀಲ್ ರವರು ಮುಖ್ಯ ಅತಿಥಿಗಳ ಸ್ವರೂಪದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಜ್ಯೋತಿ ಸಂತೋಷ ಸುಂದಾಳೆ ಧರ್ಮಗ್ರಂಥ ಪಠಣ ಮಾಡಿದರು. ಶಕುಂತಲಾ ಮಲ್ಕಾಪೂರ ವಚನ ಗಾಯನ ನಡೆಸಿಕೊಟ್ಟರು. ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ, ಅಕ್ಕಮಹಾದೇವಿ ತಾಯಿಯವರ ವೇಷ-ಭೂಷಣದ ಪಾತ್ರ ವಹಿಸಿರುವ ಮಾಲಾಶ್ರೀ ಗುರುನಾಥ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮೀನಾಕ್ಷಿ ಅಶೋಕ ಪಾಟೀಲ್ ಸ್ವಾಗತ ಕೋರಿದರೆ, ವಿಜಯಲಕ್ಷಿö??Ã ಶಿವಾನಂದ ಹುಗ್ಗೆಳ್ಳಿ ನಿರೂಪಿಸಿದರೆ, ಮಂಜುಳಾ ಸುರೇಶ ವಂದಿಸಿದರು. ಪ್ರೇಮಾ ಮುಚಳಂಬೆ ಪೂಜೆ ನೆರವೇರಿಸಿದರು. ಪ್ರಮುಖರಾದ ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಗುರುನಾಥ ಬಿರಾದಾರ, ಉಮಾಕಾಂತ ಮೀಸೆ, ಸುರ್ವಣಾ ಶರಣಪ್ಪಾ ಚಿಮಕೋಡೆ, ತೀರ್ಥಮ್ಮ, ಪ್ರಸಾದ ನಿಲಯದ ಮತ್ತು ಅನುಭವ ಮಂಟಪ ಸಾಂಸ್ಕೃತಿಕ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಶರಣ-ಶರಣೀಯರು ಭಾಗವಹಿಸಿದ್ದರು.