ವಿಜೃಂಭಣೆಯಿಂದ ನಡೆದ ಗಣಪತಿ ವಿಸರ್ಜನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.05-ಗಲಾಟೆ ಗಣಪ ಎಂದೇ ಪ್ರಸಿದ್ಧಿ ಪಡೆದಿರುವ ಚಾಮರಾಜನಗರದ ದೊಡ್ಡಗಣಪತಿಯ ವಿಸರ್ಜನಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಶಾಂತಿಯುತವಾಗಿ ನಡೆಯಿತು.
ನಗರದರಥದ ಬೀದಿಯಲ್ಲಿ ಹಿಂದೂಪರ ಸಂಘಟನೆಗಳು ಪ್ರತಿμÁ್ಠಪನೆ ಮಾಡಲಾಗಿದ್ದ ಅಯೋಧ್ಯೆಯ ಬಾಲರಾಮ ಹೋಲುವ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
ಕಳೆದ 61 ವರ್ಷಗಳಿಂದ ನಗರದ ಗುರುನಂಜಶೆಟ್ಟರ ಛತ್ರದ ಮುಂಭಾಗ ಪ್ರತಿಷ್ಠಾಪಿಸುತ್ತಾ ಬಂದಿರುವ ಶ್ರೀ ವಿದ್ಯಾಗಣಪತಿಯ ಪೂಜಾ ಮಹೋತ್ಸವವು ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಗಣಪತಿಗೆ ಪೂಜೆ ಸಲ್ಲಿಸಿದ ನಂತರ ವಿಸರ್ಜನಾ ಮಹೋತ್ಸವವು ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆ ಮುಖಂಡರ ನೇತೃತ್ವದಲ್ಲಿ ಪೋಲಿಸರ ಬಿಗಿ ಬಂದೋಬಸ್ತ್‍ನೊಂದಿಗೆ ರಥದ ಬೀದಿಯಲ್ಲಿ ಸಾಗಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಖಾಕಿ ಸರ್ಪಗಾವಲು ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ ನಿಬರ್ಂಧ ಹೇರಲಾಗಿತ್ತು. ಜಿಲ್ಲಾ ಕೇಂದ್ರದಲ್ಲಿ ಮೊನ್ನೆಯಿಂದಲೇ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು.
ಪೆÇಲೀಸ್ ಗಣಪತಿ ಎಂದೇ ಪ್ರಸಿದ್ಧ: ಮೆರವಣಿಗೆಯಲ್ಲಿ ಪೆÇಲೀಸರೇ ಹೆಚ್ಚಾಗಿ ಕಂಡು ಬರುವುದರಿಂದ ಇದು ಪೆÇಲೀಸ್ ಗಣಪತಿ ಎಂದೇ ಹೆಸರುವಾಸಿಯಾಗಿದೆ. ಆರ್‍ಎಸ್‍ಎಸ್ ಗಣಪತಿ, ದೊಡ್ಡ ಗಣಪತಿ ಅಂತಲೂ ಕರೆಯಲಾಗುತ್ತದೆ.
ಮೆರವಣಿಗೆಯಲ್ಲಿ ಪೆÇಲೀಸರಿಂದ ಭಧ್ರತೆ : ಈ ಬಾರಿ ಗಣಪತಿ ನಿಮಜ್ಜನ ಮೆರವಣಿಗೆಗೆ 6 ಡಿವೈಎಸ್‍ಪಿ, 28 ಪಿಐ, 48 ಮಂದಿ ಪಿಎ ಸೇರಿ 750 ಮಂದಿ ಪೆÇಲೀಸರು, 100 ಮಂದಿ ಹೋಂ ಗಾರ್ಡ್‍ಗಳು, 5 ಕೆಎಸ್‍ಆರ್‍ಪಿ, 6 ಡಿಆರ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಪೆÇಲೀಸ್ ವರಿμÁ್ಠಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದ್ದಾರೆ.
ಕಲಾತಂಡಗಳೊಂದಿಗೆ ಮೆರವಣಿಗೆ: ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿವೆ. ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷಧಾರಿಗಳು ಗಮನ ಸೆಳೆದವು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಜನಪದ ಕಲಾ ತಂಡಗಳಾದ ಮಂಗಳವಾದ್ಯ ಗೊರವನಕುಣಿತ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿ ಹಂದಿ, ಬ್ಯಾಂಡ್‍ಸೆಟ್, ಗಾರಡಿ ಗೊಂಬೆ, ಪೂಜಾಕುಣಿತ, ಮಹಿಳಾ ವೀರಗಾಸೆ, ನಾಸಿಕ್ ದೊಳ್ಳು, ಸೋಮನ ಕುಣಿತ, ಹುಲಿ ವೇಷ, ಮಂಗಳೂರು ಯಕ್ಷಗಾನ ಗೊಂಬೆ, ನಗಾರಿ, ತಮಟೆ ಹಾಗೂ ಇತರೆ ಕಲಾ ತಂಡಗಳೊಡನೆ ಶ್ರೀ ಗುರುನಂಜಶೆಟ್ಟರಛತ್ರದ ಮುಂಭಾಗದಿಂದ ಹೊರಟು ಖಡಕ್‍ಪುರ ಮೊಹಲ್ಲಾ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಅಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಶ್ರೀ ಕನ್ನಿಕಾ ಪರಮೇಶ್ವರಿದೇವಸ್ಥಾನದರಸ್ತೆ, ನಾಗಪ್ಪ ಶೆಟ್ಟರ ಚೌಕ, ದೊಡ್ಡಅಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಸಂತೇ ಮರಹಳ್ಳಿ ವೃತ್ತ, ವೀರ ಮದಕರಿ ನಾಯಕರ ಬೀದಿ, ಶ್ರೀ ಭಗೀರಥಉಪ್ಪಾರ ಬಡಾವಣೆ, ಶ್ರೀ ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭಮರಾಂಬ 2ನೇ ಕ್ರಾಸ್, ಭಮರಾಂಬ |ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾಕಛೇರಿರಸ್ತೆ, ಚಮಾಲ್ ಬೀದಿ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿ ಮುಖಾಂತರ ಹೊರಟು ಶ್ರೀ ದೊಡ್ಡರಸನ ಕೊಳದಲ್ಲಿ ಬಾಣ ಬಿರುಸುಗಳ ಕಾರ್ಯಕ್ರಮಗಳೊಂದಿಗೆ ಶ್ರೀ ವಿದ್ಯಾಗಣಪತಿಯನ್ನು ಮಧ್ಯರಾತ್ರಿ 12 ಗಂಟೆಗೆ ವಿಸರ್ಜಿಸಲಾಯಿತು.
ತೆರಳುವ ಎಲ್ಲಾ ಸ್ಥಳಗಳಲ್ಲೂ ಶ್ವಾನದಳ ಮತ್ತು ಬಾಂಬ್ ಶೋಧ ಪಡೆ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕೈಗೊಂಡಿದ್ದು ವೀಡಿಯೋ ಕ್ಯಾಮರಾ, ಡ್ರೋಣ್ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣಿಡಲಾಗಿತ್ತು.
ಗಣಪತಿ ಮಂಡಳಿ ಅಧ್ಯಕ್ಷ ಸುಂದರ್‍ರಾಜ್, ಹಿರಿಯ ಮುಖಂಡ ಗಣೇಶ ದೀಕ್ಷಿತ್, ಚೂಡಾ ಮಾಜಿ ಅಧ್ಯಕ್ಷ ಎಸ್ ಬಾಲಸುಬ್ರಹ್ಮಣ್ಯಂ. ನಗರಸಭೆ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಸುರೇಶ್ ನಾಯ್ಕ, ಸದಸ್ಯರಾದ ಸುದರ್ಶನಗೌಡ, ಸಿ.ಎಂ. ಮಂಜುನಾಥ್, ಮುಖಂಡರಾದ ಶ್ರೀಕಂಠಸ್ವಾಮಿ, ಮಧು, ರಾಧಾಕೃಷ್ಣ ಇತರರು ಇದ್ದರು.