ಸ್ತಿçÃ ಸಮಾನತೆ ಸಾರಿದ ಬಸವಣ್ಣ
ಭಾಲ್ಕಿ:ಅ.೫:೧೨ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ತ್ರೀಯರಿಗೆ ಸಮಾನತೆ ಕಲ್ಪಿಸಿ ಸಮಾಜದಲ್ಲಿನ ಮೇಲು ಕೀಳು ಹೊಡೆದೊಡಿಸುವ ಪ್ರಯತ್ನ ಮಾಡಿದ್ದರು ಎಂದು ಸ್ತ್ರೀ ರೋಗ ತಜ್ಞೆ ಡಾ.ಶೈಲಜಾ ಅನಿಲ ತಳವಾಡೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಗುರುವಾರ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ್ದ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿಸಿ ಮಾನವ ಕೂಲ ಒಂದೇ ಎನ್ನುವುದನ್ನು ಎತ್ತಿಹಿಡಿದಿದ್ದರು.
ಮೇಲವರ್ಗದವರು ಅಂತರ್ಜಾತಿ ತಡೆಹಿಡಿಯುವ ಪ್ರಯತ್ನ ಮಾಡಿದರು. ಇದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಮಹಾನವಮಿ ಸಂದರ್ಭದಲ್ಲಿ ಶರಣರ ಹತ್ಯೆ ನಡೆಯಿತು.
ಆದರೂ ಕೂಡ ಬಸವಣ್ಣನವರು, ಬಸವಾದಿ ಶರಣರು ತಮ್ಮ ತತ್ವ, ಸಿದ್ಧಾಂತ ಎತ್ತಿಹಿಡಿದು ಮರಣವೇ ಮಹಾನವಮಿ ಎಂದು ಸಾರಿದರು. ಶರಣರು ಮರಣಕ್ಕಾಗಿ ಅಂಜಲಿಲ್ಲ, ಬದಲಾಗಿ ತತ್ವಕ್ಕಾಗಿ ಬದುಕಿದರು.
ಅಂತಹ ಬಸವಾದಿ ಶರಣರ ತತ್ವಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ರೂಪಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ ೧೨ನೇ ಶತಮಾನದಲ್ಲಿ ಬಸವಣ್ಣವರು ಮೂಢಾಚಾರ ಹಾಗೂ ಕಂದಾಚಾರವನ್ನು ಗಮನಿಸಿ ಅದರಿಂದ ಜನರನ್ನು ಹೊರತರಲು ಯತ್ನಿಸಿದರು ಎಂದರು
ಸುವರ್ಣ ಓಂಕಾರ ಬಲ್ಲೂರೆ ಬಸವ ಗುರುವಿನ ಪೂಜೆ ನೆರವೇರಿಸಿದರು. ಶಿಕ್ಷಕಿ ಶ್ರೀದೇವಿ ವಿಜಯಕುಮಾರ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು.
ಸೇವಾ ಸಮಿತಿ ಅಧ್ಯಕ್ಷೆ ಚಂದ್ರಕಲಾ ಪ್ರಭು ಡಿಗ್ಗೆ ಅಧ್ಯಕ್ಷತೆ ವಹಿಸಿದರು.
ವಿದ್ಯಾರ್ಥಿನಿ ಶ್ವೇತಾ ಚಂದ್ರಕಾAತ ಡೋಣಗಾಪೂರೆ ವಚನದ ಸಾರಂಶ ತಿಳಿಸಿ ಕೊಟ್ಟರು.
ಶ್ರೀದೇವಿ ವೈಜಿನಾಥ ಪಾಟೀಲ್ ಅವರು ಶರಣೆ ಧೂಪದ ಗೊಗ್ಗಾವೆ ವೇಷಭೂಷಣ ಧರಿಸಿ ಗಮನ ಸೆಳೆದರು. ಲಲಿತಾಬಾಯಿ ಶಿವರಾಜ ಪ್ರಭಾ ಧರ್ಮಗ್ರಂಥ ಪಠಣ ಮಾಡಿದರು. ಈ ಸಂದರ್ಭದಲ್ಲಿ ಡಾ.ಕೃತಿಕಾ ವಿಲಾಸ ಕನಸೆ, ವಿದ್ಯಾವತಿ ಕಡಗಂಚೆ ಸೇರಿದಂತೆ ಹಲವರು ಇದ್ದರು.
ಸನ್ಮಾನ :
ಇದೇ ವೇಳೆ ನಿರ್ಮಲಾ ಪ್ರಭುಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಲ್ಯಾಣಿ ನಗರದ ಮಹಾನಂದಾ ತಂಡದಿAದ ಕೋಲಾಟ, ಭಜನೆ ನಡೆಯಿತು. ಸುರೇಖಾ ಬಸವರಾಜ ಬೇಲೂರೆ ವಚನ ಗಾಯನ ನಡೆಸಿ ಕೊಟ್ಟರು. ರಾಜೇಶ್ವರಿ ಅಶೋಕ ರಾಗಾ ಸ್ವಾಗತಿಸಿದರು. ಸವಿತಾ ಭೂರೆ ನಿರೂಪಿಸಿದರು. ರಾಜೇಶ್ವರಿ ಕುಪೇಂದ್ರ ವಂಕೆ ವಂದಿಸಿದರು.