ಸರ್ವಜ್ಞ ಪ್ರೌಢಶಾಲೆಯಲ್ಲಿ ಏ.28ಕ್ಕೆ ಅಡ್ಮಿಶನ್ ಟೆಸ್ಟ್
ಕಲಬುರಗಿ:ಏ.25: ಶಿಕ್ಷಣ ಸಂಸ್ಥೆಗಳೆಂದರೆ ಜೀವನದ ಸಾಮರಸ್ಯ ಕಲಿಸುವ ದೇಗುಲ, ಶಿಕ್ಷಣವೇ ಜೀವನ, ಜೀವನವೇ ಶಿಕ್ಷಣ ಎನ್ನುವಂತೆ ಮಕ್ಕಳ ಜೀವನ ರೂಪಿಸಲು ‘ಪ್ರೌಢಶಾಲೆ ಹಂತದಿಂದಲೇ’ ಸ್ಪರ್ಧಾತ್ಮಕ ಪರೀಕ್ಷೆಗೆ ಜ್ಞಾನದ ಅಡಿಪಾಯ ನೀಡುತ್ತಾ ಬಂದಿರುವ ಒಲಂಪಿಯಾಡ್ ಮತ್ತು ಬೋರ್ಡ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಶಿಸ್ತಿನ ಸಿಪಾಯಿ, ಮಾನವೀಯ ಮೌಲ್ಯ ಕಲಿಸುವ ಹೆಗ್ಗುರಿ, ಶಿಕ್ಷಣದ ಹೊಂಬೆಳಕು ಎಂದು ಪ್ರಸಿದ್ಧಿ ಪಡೆದಿರುವ ಪ್ರೊ. ಚನ್ನಾರಡ್ಡಿ ಪಾಟೀಲ ಸ್ಥಾಪಿತ ಸರ್ವಜ್ಞ ವಸತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಲಬುರಗಿಯಲ್ಲಿ ರವಿವಾರ ಏಪ್ರಿಲ್-28ಕ್ಕೆ 7ನೇ ತರಗತಿಯಿಂದ 10ನೇ ತರಗತಿ ಸೇರಬಯಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಆಯೋಜಿಸಲಾಗಿದೆ.
“ಪ್ರೌಢಶಾಲಾ ಹಂತದಲ್ಲಿಯೇ ಸರ್ವಜ್ಞ ಶಾಲೆ/ ಅಕಾಡೆಮಿಯಲ್ಲಿ ಉತ್ಕøಷ್ಠ ಬೋಧನೆ”
“ಪ್ರೌಢಶಾಲಾ ಹಂತದಿಂದ ಪಿಯು ಮುಗಿಸುವವರೆಗೂ ಮಕ್ಕಳ / ಪಾಲಕರ ಏಕೈಕ ಗುರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದು ಕನಸನ್ನು ಪೂರ್ಣಗೊಳಿಸಿಕೊಳ್ಳುವುದು. ಇಂತಹ ಮಕ್ಕಳ ಆಶೋತ್ತರಗಳನ್ನು ಪೂರೈಸಲೆಂದೇ ಸರ್ವಜ್ಞ ಸಂಸ್ಥೆಯು ಐಐಟಿ’ಉನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲರವರು ಮಕ್ಕಳ ಏಕಾಗ್ರತೆ ಕೇಂದ್ರೀಕರಿಸಲು ಗಣನೀಯ ಬದಲಾವಣೆಯನ್ನು ಮಕ್ಕಳಲ್ಲಿ ತರಲು ಐಚ್ಛಿಕ/ನಿರ್ಬಂಧವಲ್ಲದ ತರಬೇತಿ ರೂಪಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲ, ಗಣಿತ, ವಿಜ್ಞಾನ ವಿಷಯಗಳನ್ನು ನವೀನ ಕ್ರೀಯಾಶೀಲತೆಯಿಂದ ಮತ್ತು ವಿಜ್ಞಾನ ಆಧಾರಿತ ಪ್ರಯೋಗಗಳನ್ನು, ವಸ್ತುನಿಷ್ಠ ಪ್ರಶ್ನೆಗೆ ಉತ್ತರ ನೀಡುವ ವಿಧಾನ ಮತ್ತು ಸ್ಪೀಡ್ ಗಣಿತವನ್ನು ಕಲಿಸಲಾಗುವುದು.”
ಸರ್ವಜ್ಞ ಪ್ರೌಢಶಾಲೆಯಲ್ಲಿ ಈ ಬಾರಿ ಬಾಲಕರಿಗೆ ಪ್ರೌಢಶಾಲಾ ಹಂತದಿಂದಲೇ ವಸತಿ ಸಹಿತ ಪ್ರವೇಶ ನೀಡುತ್ತಿದೆ. ವಿದ್ಯಾರ್ಥಿಗಳು ಸರ್ವಜ್ಞ ಮಡಿಲಿನಲ್ಲಿ ಆಡಿ-ಬೆಳೆದು, ಜೀವನ ರೂಪಿಸಿಕೊಳ್ಳುವುದು ಖಚಿತ. ಮಕ್ಕಳ ದಾಖಲಾತಿ ಮಾಡಿದ ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿತವಾದಂತೆ ಎಂದು ಅವರು ನಿರಾಳರಾಗುತ್ತಾರೆ. ಈ ಭಾವನೆಗೆ ಪುಷ್ಠಿ ನೀಡುವಂತೆ ಸರ್ವಜ್ಞದಲ್ಲಿನ ವಾತಾವರಣ, ಬೋಧಕ ವರ್ಗ, ಆಡಳಿತ ಮಂಡಳಿ ಸದಾ ಸಿದ್ಧ.
ಈ ಸಂಸ್ಥೆ ಉತ್ತರೊತ್ತರ ಬೆಳೆಯಲು ಜನರೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳಿಗೆ ರಿಯಾಯಿತಿ, ಉಚಿತವಾಗಿಯೂ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಅಕ್ಷರಭ್ಯಾಸದ ಜೊತೆಗೆ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಮಹತ್ವ ತಿಳಿಸಲಾಗುತ್ತಿದೆ.”