ಬಿಜೆಪಿ ಅಧಿಕಾರದಿಂದ ದೂರ ಉಳಿಸಲು ರೈತರ ಪಣ.
ಸಂಜೆವಾಣಿ ವಾರ್ತೆ
ಹೊಸಪೇಟೆ ಏ25: ದೇಶದ 3ಕೋಟಿ ರೈತ ಕುಟುಂಬಗಳ ಹಿತರಕ್ಷಣೆಗೆ ಬದ್ಧವಾಗದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ, ರೈತ ಸಮುದಾಯ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಹೇಳಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತ ಪರವಾಗಿ ನಿಲ್ಲುವುದಾಗಿ ತಿಳಿಸಿದ್ದು ಅಧಿಕಾರ ಪಡೆದು ಐದು ತಿಂಗಳಲ್ಲಿ ತಮ್ಮ ರೈತ ವಿರೋಧಿ ನಿಲುವ ಪ್ರದರ್ಶಿಸುವ ಮೂಲಕ ದೇಶದ ರೈತರಿಗೆ ದ್ರೋಹ ಮಾಡಿದೆ, ರೈತ ವಿರೋಧಿ ಮೂರು ಕೃಷಿ ಕಾಯ್ದೆಯನ್ನು ಚಾರಿಗೆ ತಂದು ರೈತರು ಕೃಷಿಯಿಂದ ಹೊರಹೋಗುವಂತೆ ಮಾಡಿದೆ, ಎಪಿಎಂಸಿ ಕಾಯ್ದಿಯನ್ಮು ತಿದ್ದುಪಡಿ ಮಾಡಿ ಖಾಸಗಿ ಕಂಪನಿಯನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಎಂಎಸ್ಪಿ, ಚಾರಿಗೆ ತರದಿರುವ, ಹೊಸ ವಿದ್ಯುತ್ ಕಾಯ್ದೆ ಜಾರಿ, ಸಾಲ ಮನ್ನಾ ರದ್ದು ಸೇರಿದಂತೆ ಅನೇಕ ರೈತ ವಿರೋಧಿ ನಿಲುವುಗಳ ಹಿನ್ನೆಲೆಯಲ್ಲಿ  ಬಿಜೆಪಿ ಹಾಗೂ ಮಿತ್ರಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ತಿರ್ಮಾನಿಸಿದೆ ಎಂದರು.
ಪ್ರತಿಭಟನೆ:
ಏಕಾ ಏಕಿ ಈರುಳ್ಳಿ ದರ ಕುಸಿತವನ್ನು ಖಂಡಿಸಿ ಡಾ.ಪುನೀತರಾಜಕುಮಾರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಈರುಳ್ಳಿ ರಸ್ತೆಗೆ ಸುರುವಿ ಉಚಿತವಾಗಿ ಹಂಚುವ ಮೂಲಕ ಪ್ರತಿಭಟನೆ ನಡೆಸಿದ ಘಟನೆಯು ಸಹ ನಡೆಯಿತು. ಮುಖಂಡ ವೀರಸಂಗಯ್ಯ ಹಾಗೂ ಗೋಣಿ ಬಸಪ್ಪ ಮಾತನಾಡಿ ಬೀಜ, ಗೊಬ್ಬರ ಕೂಲಿ ಬರೋದು ಇರಲಿ ಆರಿಸಿದ ಕೂಲಿಯೂ ಬಾರದಿರುವ ದರ ಬೇಡ ಎಂದು ಉಚಿತವಾಗಿ ಹಂಚಿದರು.
ರೈತ ಸಂಘದ ಮುಖಂಡರಾದ ಗೋಣಿ ಬಸಪ್ಪ, ಘಂಟಿ  ಸೋಮಶೇಖರ್, ದಮ್ಮೂರು ಮಹೇಶ,  ನಾಯ್ಡು,  ಯಶೋದಾ ಎಸ್.ಎಸ್.ಭಾಷಾ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.