ಡಾ.ರಾಜಕುಮಾರ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ ಜಿಲ್ಲೆ) ಏ, 24: ವರನಟ ಡಾ.ರಾಜಕುಮಾರ ಜನ್ಮ ದಿನಾಚರಣೆಯನ್ನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏಪ್ರೀಲ್ 24ರಂದು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.
ನಗರದ ತಾಲೂಕು ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಪ್ರಥಮ ದರ್ಜೆ ಸಹಾಯಕರಾದ ಕೆ.ರಾಮಾಂಜನೇಯ, ಸಿಬ್ಬಂದಿ ಪಿ.ಕೃಷ್ಣ ಸ್ವಾಮಿ, ಹೊರಗುತ್ತಿಗೆ ನೌಕರರಾದ ಜಯಶ್ರೀ ತಳವಾರ, ತಾಯೇಶ ಜಿ., ಅಪ್ರೆಂಟಿಶಿಪ್ ತರಬೇತುದಾರರಾದ ಆಕಾಶ ಇದ್ದರು.