ಹಬೋಹಳ್ಳಿ :ಪುರಸಭೆ ಸಿಬ್ಬಂದಿ , ಪೌರಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.25 ಪಟ್ಟಣದ ಪುರಸಭೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರ ವತಿಯಿಂದ ಲೋಕಸಭಾ ಚುನಾವಣೆ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
 ಪುರಸಭೆಯ ಮುಖ್ಯಾಧಿಕಾರಿ ಪ್ರಭಾಕರ್ ಪಾಟಿಲ್, ಮಾತನಾಡಿದರು  ಮೇ ಏಳರಂದು ಜಿಲ್ಲೆಯಲ್ಲಿ ಜರುಗುವ ಲೋಕಸಭಾ ಸಾರ್ವಜನಿಕ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಜೊತೆಗೆ ನಿಮ್ಮವರಿಗೂ ತಪ್ಪದೆ ಮತದಾನ ಮಾಡಲು ತಿಳಿಸಬೇಕು  ಎಂದರು
  ರಾಮನಗರ ತೇರು ಬೀದಿ, ಅರಳಹಳ್ಳಿ,,ಕುರದಗಡ್ಡಿ, ಕೆಚಿನಬಂಡಿ, ನಾಣಿಕೇರಿ ಮಾರ್ಗವಾಗಿ ಸ್ವೀಪ್ ಜಾಥಾ ಸಂಚರಿಸಿ ಸಾರ್ವಜನಿಕರಲ್ಲಿ ಮತದಾನದ ಜಾಗೃತಿಯ ಕುರಿತು ಅರಿವು ಮೂಡಿಸಲಾಯಿತು.
 ಈ ಸಂದರ್ಭದಲ್ಲಿ ಪುರಸಭೆಯ ಸಿಬ್ಬಂದಿಗಳಾದ ವ್ಯವಸ್ಥಾಪಕ ಚಂದ್ರಶೇಖರ್, ನಿರೀಕ್ಷಕ ಮಾರೆಪ್ಪ ಇಂಜಿನಿಯರ್ ಹುಸೇನ್ ಸಾಬ್, ಎಫ್ ಡಿ ಎ ಮಂಜುನಾಥ್, ನಾಗರತ್ನ, ವೀರಣ್ಣ, ವೀರಭದ್ರಪ್ಪ, ಮಾರುತೇಶ್, ಚಂದ್ರು, ಇತರರಿದ್ದರು.