ಸಂಗನಕಲ್ಲಿನಲ್ಲಿ  ಮನೆ ಮನೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡು ವಿತರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಇಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ಪಕ್ಷದ ಮುಖಂಡರು,  ಕಾರ್ಯಕರ್ತರು ಮನೆ ಮನೆಗೆ ತೆರಳಿ ವಿತರಿಸಿದರು.
ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಸಂಗನಕಲ್ ವಿಜಯಕುಮಾರ್ ಅವರು ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಲಿಖಿತವಾಗಿ ಸಹಿ ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಮನೆಮನೆಗೆ ತಲುಪಿಸುತ್ತಿದೆ.
ಈಗಾಗಲೇ ಮುಖ್ಯ ಮಂತ್ರಿ  ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ  ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಪಂಚ ಗ್ಯಾರಂಟಿಗಳನ್‌ಉ ಈಗಾಗಲೇ ಜಾರಿ‌ ಮಾಡಿದ್ದಾರೆ. ಈಗ ಲೋಕಸಭಾ ಚುನಾವಣೆ ಗ್ಯಾರಂಟಿ ಕಾರ್ಡುಗಳನ್ನು ಮನೆಗೆ ತಲುಪಿಸಿ ಅವುಗಳ ಯೋಜನೆಯನ್ನು ಮನಮುಟ್ಟುವಂತೆ ಮತದಾರರಿಗೆ ತಿಳಿಸಲಿದ್ದೇವೆಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರ ಸೂಚನೆಯಂತೆ ನಾವುಗಳು ಪ್ರತಿ ಬೂತ್ ನಲ್ಲಿ ಮನೆಮನೆಗೆ ಭೇಟಿ ನೀಡಿ ಕಾರ್ಡುಗಳನ್ನು ವಿತರಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ಕೋರಲಿದೆಂದರು.
ಈ ಸಂದರ್ಭದಲ್ಲಿ ಸಂಗನಕಲ್ಲು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಾದ ಕರಡಳ್ಳಿ ಈರಪ್ಪ, ಯು. ಕೃಷ್ಣಪ್ಪ, ಪರತಯ್ಯ, ಬಿ. ಹನುಮಂತ, ಸಣ್ಣ ಬೀಮಪ್ಪ, ರಂಜಾನ್ ಭಾಷಾ, ಜೋಗಿನ ಚಂದ್ರಪ್ಪ, ಜೋಗಿನ ವಿಜಯಕುಮಾರ್, ಲಕ್ಷ್ಮಿಪತಿ, ಎಸ್‌. ವಿ. ಕೃಷ್ಣ ಆಂದ್ರಾಲ್ ಚಂದ್ರಪ್ಪ, ಯು. ವೆಂಕಟೇಶ್, ಗಂಗಾಧರ, ಪುನೀತ್, ಕೃಷ್ಣ, ಲಿಂಗಪ್ಪ, ಲಿಂಗರಾಜು, ವಿ‌.ಗಣೇಶ, ಗುಂಡ, ಹೈದರಾಲಿ, ದಿವಾಕರ್, ಕುಮಾರಸ್ವಾಮಿ, ಕಿರ್ರ, ರಂಜಾನ್ ಬಾಷಾ, ಮಸ್ತಾನ್, ಆಟೋ ಮಸ್ತಾನ ವಲಿ, ಪಾಂಡುರಂಗ, ವಾಲ್ಮೀಕಿ ರಾಜ, ರಾಮುಡು ಇನ್ನು ಮುಂತಾದ  ಅಭಿಮಾನಿಗಳು ಉಪಸ್ಥಿತರಿದ್ದರು.