ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮ
ಲಕ್ಷ್ಮೇಶ್ವರ,ಏ25: “ಗತ ಇತಿಹಾಸವನ್ನು ಉತ್ಸವಗಳ ಮೂಲಕ ಮೆಲುಕು ಹಾಕಬೇಕು. ಆ ಮೂಲಕ ನಮ್ಮ ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದಂತಾಗುತ್ತದೆ” ಎಂದು ಮಾಜಿ ತಾಲೂಕಾ ಪಂಚಾಯತ ಸದಸ್ಯ ಹಾಗೂ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಖಜಾಂಚಿ ಸಿ.ಎಸ್. ಜಗಲಿ ಅಭಿಪ್ರಾಯ ಪಟ್ಟರು. ಅವರು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಹಮ್ಮಿಕೊಂಡ ಪುಲಿಗೆರೆ ಪೌರ್ಣಮೆ ಕಾರ್ಯಕ್ರಮ ಮಾಲಿಕೆಯ 29ನೇ ಸಂಚಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಶೇಷವಾಗಿ ಈ ಸಂಚಿಕೆಯನ್ನು ಪುಲಿಗೆರೆ ಉತ್ಸವ ಯಶಸ್ವಿಗೆ ಕಾರಣಿಕರ್ತರಾದ ಪ್ರಮುಖ ಸೇವಾರ್ಥಿಗಳಿಗೆ ಸನ್ಮಾನಿಸುವುದಕ್ಕಾಗಿ ಹಮ್ಮಿಕೊಳ್ಳಲಾಗಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿ ಶ್ರೀಮತಿ ನಾಗಲಕ್ಷ್ಮಿ ಕೆ ರಾವ್ ಮಾತನಾಡಿ ಭಾರತೀಯ ವಿದ್ಯಾ ಭವನವು ಈ ಕಾರ್ಯಕ್ರಮವನ್ನು ಅತ್ಯಂತ ಅಭಿಮಾನದಿಂದ ಕಳೆದ ಏಳು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ. ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಜನರ ಸಹಕಾರವನ್ನು ನಾವು ಹೃದಯಪೂರ್ವಕವಾಗಿ ನೆನೆಯುತ್ತೇವೆ” ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ “ಐತಿಹಾಸಿಕ ಪರಂಪರೆಯನ್ನು ಮರು ಸೃಷ್ಟಿಸುವ ಪುಲಿಗೆರೆ ಉತ್ಸವ ಕಾರ್ಯಕ್ರಮವನ್ನು ಸಮರ್ಪಿಸುತ್ತಿರುವ ಇನ್ಫೋಸಿಸ್ ಪ್ರತಿಷ್ಠಾನ ಹಾಗೂ ಅದನ್ನು ಆಯೋಜಿಸುತ್ತಿರುವ ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಈ ಶ್ರೇಷ್ಠ ಕಾರ್ಯವನ್ನು ಈ ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ” ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಜಂಟಿ ನಿರ್ದೇಶಕಿ ಶ್ರೀಮತಿ ನಾಗಲಕ್ಷ್ಮಿ ಕೆ. ರಾವ್ ಹಾಗೂ ಲೆಕ್ಕಪತ್ರ ಸಹಾಯಕ ಗೋವಿಂದ ಕುಲಕರ್ಣಿ,ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಳಸಾಪುರ, ಪತ್ರಕರ್ತ ಶಿವಲಿಂಗಪ್ಪ ಹೊತ್ತಗಿಮಠ, ಅರ್ಚಕರಾದ ಸೋಮಣ್ಣ ಪೂಜಾರ, ಸೇವಾ ಕರ್ತರಾದ ಮಲ್ಲೇಶಪ್ಪ ಕಣವಿ, ನೀಲಪ್ಪ ಕನವಳ್ಳಿ ಹಾಗೂ ಮುಂತಾದವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳಾದ ಸುರೇಶ ರಾಚನಾಯ್ಕರ, ಶ್ರೀಮತಿ ಗೀತಾದೇವಿ ಮಾನ್ವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೀಲಪ್ಪಣ್ಣ ಕರ್ಜಕಣ್ಣವರ, ದೇವಣ್ಣ ಬಳಿಗಾರ, ಪಿ.ಬಿಕರಾಟೆ, ಸಿ.ಜಿ. ಹಿರೇಮಠ, ಎಂ.ಕೆ.ಕಳ್ಳಿಮಠ, ವಿರುಪಾಕ್ಷಪ್ಪ ಆದಿ, ಬಸವರಾಜ ಮೆಣಸಿನಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಶ್ರೀಮತಿ ಮಾಲಾದೇವಿ ದಂಧರಗಿ, ರಾಘವೇಂದ್ರ ಪೂಜಾರ, ಶ್ರೀಮತಿ ಕಲಿವಾಳಮಠ, ಶ್ರೀಮತಿ ಪಾರ್ವತಿ ಕಳ್ಳಿಮಠ, ಡಾ. ಹೂವಿನ, ಎನ್.ಆರ್. ಸಾತಪುತೆ ಮುಂತಾದವರು ಇದ್ದರು. ಕಲಾವಿದ ಪ್ರವೀಣ ಗಾಯಕರ ತಾವೇ ಚಿತ್ರಿಸಿದ ತೈಲ ಚಿತ್ರವನ್ನು ಅರ್ಪಿಸಿದರು.
ರಾಕೇಶ್ ಆದಿ ಪ್ರಾರ್ಥಿಸಿದರು. ಸೋಮಶೇಖರ್ ಕೆರಿಮನಿ ನಿರೂಪಿಸಿದರು, ಟ್ರಸ್ಟ್ ಕಮಿಟಿಯ ಸಂಚಾಲಕ ಜಿ.ಎಸ್. ಗುಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಚಂದ್ರು ನೇಕಾರ ವಂದಿಸಿದರು.