ಮತದಾನ ಜಾಗೃತಿ
ಚನ್ನಮ್ಮನ ಕಿತ್ತೂರ-25 ಲೋಕಸಭಾ ಚುನಾವಣೆ ಹಿನ್ನೆಲೆ ಮೇ. 7 ರಂದು ನಡೆಯುವ ಮತದಾನದಲ್ಲಿ ಎಲ್ಲ ನರೇಗಾ ಕೂಲಿ ಕಾರ್ಮಿಕರು ತಪ್ಪದೇ ಮತ ಚಲಾಯಿಸಬೇಕೆಂದು ತಾಪಂ ಇಓ ಭೀಮಪ್ಪಾ ತಳವಾರ ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಪಂ-ತಾಪಂ, ತಾಲೂಕಾ ಸ್ವೀಪ್ ಸಮಿತಿ, ತಾಪಂ ಸಂಯುಕ್ತಾಶ್ರಯದಲ್ಲಿ ಲೋಕಸಭಾ ಚುನಾವಣೆ ಕುರಿತು ತಾಲೂಕಿನ ಉಗರಖೋಡ ಗ್ರಾಪಂ ವ್ಯಾಪ್ತಿಯ ದೇಮಟ್ಟಿ ಗ್ರಾಮದಲ್ಲಿ ಕೈಗೊಂಡ ನರೇಗಾ ಕಾಮಗಾರಿ ಸ್ಥಳದಲ್ಲಿ ಅಕ್ಷರ ಮಾಲೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿ ಮಾತನಾಡಿದವರು.
ಮತದಾನ ನಿಮ್ಮ ಹಕ್ಕು ನಿಮ್ಮ ಜವಾಬ್ದಾರಿಯು ಹೌದು. ನಿಮ್ಮ ಮತ ಅಮೂಲ್ಯ ತಾವೆಲ್ಲರೂ ತಪ್ಪದೇ ಮತ ಚಲಾಯಿಸಿ ಎಂದು ಅಕ್ಷರ ಮಾಲೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಈ ವೇಳೆ ನರೇಗಾ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ , ತಾಂತ್ರಿಕ ಸಂಯೋಜಕ ವಿನಾಯಕ ಪಾಟೀಲ. ಎಂಐಎಸ್ ಸಂಯೋಜಕ ಅವಿನಾಶ ಬೇಟಗಾರ, ತಾಂತ್ರಿಕ ಸಹಾಯಕ ಮಲ್ಲಮ್ಮ ರಗಟಿ, ಬಿಎಫ್ಟಿ ಬಸವರಾಜ ಹೊಸಮನಿ, ಮಂಜುನಾಥ ಅಗಸರ, ಸದ್ದಾಮ್ ಹುಸೇನ ದಾದೆಬಾಯ, ಸೇರಿದಂತೆ ಕಾರ್ಮಿಕರಿದ್ದರು.