ಚಿಂಚೋಳಿ: ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ
ಚಿಂಚೋಳಿ,ಏ.25- ತಾಲ್ಲೂಕಾಡಳಿತ, ತಾಲ್ಲೂಕಾ ಸ್ವೀಪ್ ಸಮಿತಿ, ಹಾಗೂ ತಾಲ್ಲೂಕಾ ಪಂಚಾಯತ ವತಿಯಿಂದ ಆಯೋಜಿಸಿದ್ದ 2024ನೆಯ ಲೋಕಸಭೆಯ ಚುನಾವಣೆಯ ಮತದಾನ ಜಾಗೃತಿ ಜಾಥಾ ಅಭಿಯಾನವನ್ನು ಕೈಗೊಳ್ಳಲಾಯಿತು.
ಈ ಜಾಥಾದ ನೆತೃತ್ವ ಸಹಾಯಕ ಚುನಾವಣಾಧಿಕಾರಿ ಸಂತೋಷ ಇನಾಂದಾರ ಹಾಗೂ ತಹಸೀಲ್ದಾರ್ ಮಲ್ಲಿಕಾರ್ಜುನ ಮತ್ತು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ್, ವಹಿಸಿದ್ದರು.
ಚಿಂಚೋಳಿ ತಾಲೂಕಿನ ಜನರು ತಪ್ಪದೆ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಿದರು ತಹಸೀಲ ಕಛೇರಿಯಿಂದ ಮಹಾತ್ಮಾ ಬಸವೇಶ್ವರ ವೃತ್ತ,ಕೇಂದ್ರ ಬಸ್ ನಿಲ್ದಾಣದಿಂದ ಡಾ.ಬಿ.ಆರ್. ಅಂಬೇಡ್ಕರ್, ವೃತ್ತದವರೆಗೆ ಜಾಥಾ ಮೆರವಣಿಗೆಯನ್ನು ಮಾಡಿದರು ಈ ಸಂದರ್ಭದಲ್ಲಿ ಮತದಾನ ರಾಲಿ ಉದ್ದೇಶಿಸಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ್, ಮಾತನಾಡಿ ಚಿಂಚೋಳಿ ತಾಲೂಕಿನ ಪ್ರತಿಯೊಬ್ಬರು ಮತದಾರರು ಮತದಾನ ಮಾಡಬೇಕು ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಕಬಹುದು ಮತದಾನ ನಮ್ಮ ಹಕ್ಕು,ನಮ್ಮ ಶಕ್ತಿ ಪ್ರಜಾಪ್ರಭುತ್ವ, ನಮ್ಮಿಂದ ಮತದಾನ ಹೆಮ್ಮೆಯಿಂದ ಮತದಾನಕ್ಕಿಂತ ಇನ್ನೊಂದಿಲ್ಲ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ವೆಂಕಟೇಶ್ ದುಗ್ಗನ್, ಚಿಂಚೋಳಿ ತಾಲೂಕಿನ ಪಿಡಿಒ ಸಂಘದ ಅಧ್ಯಕ್ಷರಾದ ಪವನ್ ಮೈತ್ರಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗೋವಿಂದರೆಡ್ಡಿ, ಮತ್ತು ಅನೇಕ ತಾಲೂಕ ಪಂಚಾಯತ್ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರ