ವಿಜೃಂಭಣೆಯ ರಥೋತ್ಸವ
ಅಣ್ಣಿಗೇರಿ,ಏ25 : ನಗರದ ಶ್ರೀ ಕಂಬದ ಹನುಮಂತೇಶ್ವರ ದೇವಸ್ಥಾನದ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಹನುಮ ಮೂರ್ತಿಗೆ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿದವು. ಮೂರ್ತಿಗೆ ಬೆಳ್ಳಿಕವಚ ತೊಡಸಿ ಹೂವಿನ ಅಲಂಕಾರ ಮಾಡಲಾಗಿತ್ತು.
ಮಾತೆಯರಿಂದ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಜನೆ, ಸಂಕೀರ್ತನೆಯೊಂದಿಗೆ ತೂಗಲಾಯಿತು. ಬೆಳಿಗ್ಗೆ ದೇವಸ್ಥಾನದ ಆವರಣದಿಂದ ಘಳಗಿಯವರ ಮನೆಯವರಿಗೆ ರಥೋತ್ಸವ ಜರಗಿ ಸಂಜೆ 5 ಕ್ಕೆ ಮರಳಿ ದೇವಸ್ಥಾನದ ಆವರಣಕ್ಕೆ ತರಲಾಯಿತು. ರತೋತ್ಸವಕ್ಕೆ ಭಕ್ತರು ತಮ್ಮ ಇಷ್ಟಾರ್ಥಸಿದ್ದಿಗಾಗಿ ಬಾಳೆಹಣ್ಣು, ಉತ್ತತ್ತಿ ಎಸೆದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವೇದ ವ್ಯಾಸ ಕೌಲಗಿ ಸಂಜೀವರೆಡ್ಡಿ ಅಮಡ್ಲ, ಯಶವಂತ ನಾಗರಡ್ಡಿ, ಅರ್ಜುನ್ ಕಲಾಲ್, ಕುಮಾರ್ ಗೌಡ ಮುಲ್ಕಿ ಪಾಟೀಲ್, ಕುಮಾರ್ ಬಳೋಳ್ಳಿ, ರಾಜು ಶಾನಭೋಗರ್, ಗೋಪಾಲ್ ಘಳಗಿ, ಪಾಂಡಪ್ಪ ದೇವನೂರು, ಗಣ್ಯರು ಉಪಸ್ಥಿತರಿದ್ದರು.