ಜಿಲ್ಲೆಯಲ್ಲಿ ಪರಿವಾರವಾದ ರಾಜಕೀಯ ಅಂತ್ಯ ಕಾಣಬೇಕು: ಗೋಖಲೆ
ಸಂಜೆವಾಣಿ ವಾರ್ತೆ.
ಬೀದರ್:ಏ.25: ಜಿಲ್ಲೆಯಲ್ಲಿ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಪರಿವಾರವಾದ ರಾಜಕೀಯ ಜೋರು ಪಡೆದಿದ್ದು, ಅದನ್ನು ಅಂತ್ಯಗಾಣಿಸಲು ಜಿಲ್ಲೆಯ ಮತದಾರ ಬಾಂಧವರು ಮುಂದೆ ಬರಬೇಕೆಂದು ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಂಕುಶ ಗೋಖಲೆ ಹೇಳಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಬೀದರ್ ಜಿಲ್ಲೆಯಲ್ಲಿ ಪರಿವಾರವಾದ ಆಳವಾಗಿ ಬೇರೂರಿದೆ. ಭಾಲ್ಕಿಯಲ್ಲಿ ಖಂಡ್ರೆ ಪರಿವಾರ, ಹುಮನಾಬಾದ್‍ನಲ್ಲಿ ಪಾಟೀಲ ಪರಿವಾರ ಹಾಗೂ ಬೀದರ್‍ನಲ್ಲಿ ಖೂಬಾ ಮನೆತನ ಚುನಾವಣೆಯಲ್ಲಿ ಪದೆ ಪದೆ ಸ್ಪರ್ಧಿಸಿ ಪ್ರಜಾಪ್ರಭುತ್ವವನ್ನು ನಿರಂಕುಶ ಪ್ರಭುತ್ವಕ್ಕೆ ಕೊಂಡೊಯ್ಯುತ್ತಿವೇ. ಕಾಂಗ್ರೆಸ್ ವರಿಷ್ಟ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರು ಸಹ ಪರಿವಾರವಾದಕ್ಕೆ ಮಣೆ ಹಾಕುತ್ತಿದ್ದಾರೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಗಾದಿ ಈಗ ಖಂಡ್ರೆ ಮನೆತನಕ್ಕೆ ದೊರೆತರೆ, ಪಾಟೀಲ ಕುಡಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಂದೆ ಬಸವರಾಜ ಪಾಟೀಲ ಬೇರೊಬ್ಬರನ್ನು ಬೇಳಸದೆ, ತನ್ನ ಮಗನಿಗೆ ಬೆಳೆಸಿದರು. ಒಬ್ಬ ಮಗ ರಾಜಕೀಯವಾಗಿ ಪ್ರಭಾವಶಾಲಿಯಾಗಿ ಬೆಳೆದು ತನ್ನ ಇಬ್ಬರು ಸಹೋದರರನ್ನು ಎಮ್.ಎಲ್.ಸಿ ಮಾಡಿದ್ದರೆ. ಇತ್ತ ಡಾ.ಭೀಮಣ್ಣ ಖಂಡ್ರೆ ತನ್ನ ಮಕ್ಕಳಾದ ದಿ.ಡಾ.ವಿಜಯಕುಮಾರ ಖಂಡ್ರೆ ಹಾಗೂ ಈಶ್ವರ ಖಂಡ್ರೆ ಅವರಿಗೆ ಮಣೆ ಹಾಕಿದರು. ಮುಂದೆ ಈಶ್ವರ ಖಂಡ್ರೆ ತಮ್ಮ ಸುಪುತ್ರ ಸಾಗರ ಖಂಡ್ರೆಗೆ ಲೋಕಸಭೆ ಟಿಕೇಟ್ ಕೊಡಿಸಿ ಪರಿವಾರವಾದಕ್ಕೆ ದೊಡ್ಡ ನಿದರ್ಶನರಾಗಿರುವರು. ಇತ್ತಿಚೀಗೆ ಖರ್ಗೆ ಅವರ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಂಸದರಾದ ನರಸಿಂಗರಾವ ಸೂರ್ಯವಂಶಿ ಅವರಿಗೆ ಮೂರನೇ ಸಾಲಿಗೆ ಕುಳ್ಳರಿಸಿ ತಮ್ಮ ಮಕ್ಕಳಿಗೆ ಮುಂದಿನ ಸಾಲಿಗೆ ತಂದು ಅವಮಾನ ಮಾಡಿರುವರು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಸ್ಥಾನ ಸಹ ತಮಗೆ ಬೇಕಾದವರಿಗೆ ನೀಡಿ ಶಂಕರ ದೊಡ್ಡಿ ಅಂತಹ ಹಳೆ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಖಂಡ್ರೆ ಹಾಗೂ ಪಾಟಿಲ ಪರಿವಾರದ ವಿರೂದ್ಧ ಗಂಭೀರ ಆರೋಪ ಮಾಡಿದರು.
ಕೇಂದ್ರ ಸಚಿವರು ಹಾಗೂ ಬಿಜೆಪಿ ಲೋಕಸಭೆ ಅಭ್ಯರ್ಥಿ ಭಗವಂತ ಖೂಬಾ ಓರ್ವ ಗರ್ವದ ರಾಜಕಾರಣಿ. ಮಾಜಿ ಸಂಸದ ದಿ.ರಾಮಚಂದ್ರ ವೀರಪ್ಪ ಅವರ ಪರಿವಾರಕ್ಕೆ ಬಿಜೆಪಿ ಮೂಲೆಗುಂಪು ಮಾಡಿದೆ. ನರೇಂದ್ರ ಮೋದಿ ಓರ್ವ ಹಿಟ್ಲರ್ ಇದ್ದಂತೆ. ಈ ಎರಡು ಪಕ್ಷಗಳು ಜಿಲ್ಲೆಯಲ್ಲಿ ದಲಿತರನ್ನು ಚನ್ನಾಗಿ ತುಳಿಯುತ್ತಿವೆ. ಆದ್ದರಿಂದ ನಮ್ಮ ಸಮಾಜದ ಯುವಕರು ಎಚ್ಚೆತ್ತು ಸಂಪೂರ್ಣ ಗುಲಾಮಗಿರಿಯಿಂದ ಮುಕ್ತಿ ಹೊಂದಬೇಕಾದರೆ ಈ ಎರಡು ಪಕ್ಷದವರಿಗೆ ತಕ್ಕ ಪಾಠ ಕಲಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಮಾಜಕ್ಕೆ ಪರಿಚಯಿಸಿದ ಮರಠಾ ಸಮಾಜದ ಸಾಹೂ ಮಹಾರಾಜ ಹಾಗೂ ಸಯ್ಯಾಜಿರಾವ ಗಾಯಕವಾಡ ಅವರ ರುಣ ತೀರಿಸಲು ಮರಠಾ ಸಮುದಾಯದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಡಾ.ದಿನಕರ್ ಮೋರೆ ಅವರನ್ನು ಎಲ್ಲ ಸಮಾಜಗಳು ಬೆಂಬಲಿಸಬೇಕು ಹಾಗೂ ಜಿಲ್ಲೆಯಲ್ಲಿ ಪರಿವಾರವಾದಕ್ಕೆ ಇತಿಶ್ರೀ ಹಾಡಬೇಕೆಂದು ಗೋಖಲೆ ಮನವಿ ಮಾಡಿದರು.
ಜನರ ಧ್ವನಿ ಸಂಘಟನೆಯ ಜಿಲ್ಲಾದ್ಯಕ್ಷ ರಾಜಕುಮಾರ ಶಿಂಧೆ, ಸಂಘಟನೆಯ ಮುಖಂಡರಾದ ತಿಪ್ಪನ್ಣ ವಾಲಿ, ಮಾರೂತಿ ಕಾಂಬಳೆ, ಲಕ್ಷ್ಮಣ ಹೊಚಕನಳ್ಳಿ, ರವಿ ಕೋಟೇರ್, ದತ್ತು ವರವಟ್ಟೆ ಪತ್ರಿಕಾ ಗೋಷ್ಟಿಯಲ್ಲಿದ್ದರು.