ರಾಜರ ಋಣ ತೀರಿಸಲು ಮತದಾರರಿಗೆ ಅವಕಾಶ: ಪ್ರಶಾಂತಗೌಡ
ಸಂಜೆವಾಣಿ ನ್ಯೂಸ್
ಮೈಸೂರು:ಏ.25:- ಮೈಸೂರು ಮಹಾರಾಜರ ಋಣ ಜನತೆಯ ಮೇಲಿದ್ದು, ಅದನ್ನು ತೀರಿಸುವ ಪ್ರಯತ್ನ ಯದುವೀರ್ ಅವರನ್ನು ಗೆಲ್ಲಿಸುವ ಅವಕಾಶ ಮತದಾರಿಗೆ ಸಿಕ್ಕಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ತಿಳಿಸಿದರು.
ಮೈಸೂರು ನಗರದ ಚಾಮರಾಜ ಕ್ಷೇತ್ರದ ಮಹಾನಗರ ಪಾಲಿಕೆ 41ನೇ ವಾರ್ಡಿನ ಕೆ.ಟಿ. ಸ್ಟ್ರೀಟ್, ಸೊಪ್ಪಿನಕೇರಿ, ಒಕ್ಕಲಗೇರಿ ಭಾಗದಲ್ಲಿ ಭಾಜಪ ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಒಡೆಯರ್ ರವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರು, ಜಯಚಾಮರಾಜೇಂದ್ರ ಒಡೆಯರ ಅನೇಕ ಕೊಡುಗೆಗಳು ಇಂದಿಗೂ ಮೈಸೂರಿನ ಕಣ್ಣ ಮುಂದಿವೆ. ಅಂತಹ ಮತ್ತೊಂದು ಕೊಡುಗೆ ನೀಡಲು ಅವಕಾಶ ಕೇಳಿರುವ ಯಧುವೀರ ಅವರಿಗೆ ಜಾತ್ಯಾತೀತವಾಗಿ ಮತ ನೀಡುವ ಮೂಲಕ ಬಿಜೆಪಿ ಕೈ ಬಲ ಪಡಿಸೋಣ.ನಗರದ ಅಭಿವೃದ್ಧಿ ತಮ್ಮದೇ ಚಿಂತನೆ ಹೊಂದಿರುವರ ಅಭ್ಯರ್ಥಿ ಗೆಲ್ಲಿಸೋಣ ಎಂದು ಹೇಳಿದರು. ಮುಖಂಡರಾದ ಶಾಂತಿ, ಹರೀಶ್, ಗಣೇಶ್ , ಶಿವು, ದರ್ಶನ್, ದಿವಾಕರ್, ನಿತಿನ್ ಇನ್ನಿತರರು ಉಪಸ್ಥಿತರಿದ್ದರು.