ಜನರ ಸಮಸ್ಯೆಗೆ ಧ್ವನಿ ಎತ್ತುವ ಕಾಂಗ್ರೆಸ್ ಗೆಲ್ಲಿಸಿ
ಸಂಜೆವಾಣಿ ನ್ಯೂಸ್
ಮೈಸೂರು:ಏ.25:- ಪ್ರಜಾಪ್ರಭುತ್ವದಲ್ಲಿ ರಾಜವಂಶಸ್ಥರು ಅಥವಾ ಜನಪ್ರತಿನಿಧಿಯನ್ನು ಸಂಸತ್ತಿಗೆ ಆಯ್ಕೆ ಮಾಡಬೇಕೇ ಎಂಬುದನ್ನು ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ನಿರ್ಧರಿಸಬೇಕಾಗಿದೆ. ಹೀಗಾಗಿ ತಮ್ಮ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಸಂಸತ್‍ನಲ್ಲಿ ಧ್ವನಿಯೆತ್ತುವ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ?ಮಣ್ ಅವರನ್ನು ಬೆಂಬಲಿಸಬೇಕು ಎಂದು ಮಾಜಿ ಸಂಸದರು ಮತ್ತು ಈಚೆಗೆ ಕಾಂಗ್ರೆಸ್ ಸೇರ್ಪಡೆಯಾದ ತೇಜಸ್ವಿನಿ ಗೌಡ ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ನಗರ ಕಾಂಗ್ರೆಸ್ ವತಿಯಿಂದ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದೇ ವೇಳೆ ಬಿಜೆಪಿ ಕೇವಲ ಬಾಯಿ ಮಾತಲ್ಲಿ ಹಿಂದುತ್ವ ಎನ್ನುತ್ತಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ವೇಳೆ ಸಿ ವರ್ಗದ ದೇವಾಲಯಗಳ ಅರ್ಚಕ ತಸ್ತೀಕ್ ಹೆಚ್ಚಳ ಮಾಡಲಿಲ್ಲ. ಕಾಶಿ ಕಾರಿಡಾರ್ ಮಾಡಿದರು, ಶೃಂಗೇರಿ ಕಾರಿಡಾರ್ ಏಕೆ ಮಾಡಲಿಲ್ಲ ಎಂದು ಕೇಳಿದರು. ಇನ್ನು, ಮೈಸೂರನ್ನು ಸ್ಮಾರ್ಟ್ ಸಿಟಿ ಮಾಡುತ್ತೇವೆಂದರು. ಆ ಹಣ ಎಲ್ಲಿ ಹೋಯಿತು, ಪಾರಂಪರಿಕ ನಗರ ಮಾಡುವುದಾಗಿ ತಿಳಿಸಿ ಹಣ ಪಡೆದು ಕೇವಲ ಗೋಡೆಗಳಿಗೆ ತೇಪೆ ಹಾಕಿದರು.
ಬಿಜೆಪಿಯವರಿಗೆ ರಾಜ ಮನೆತನದ ಬಗ್ಗೆ ಗೌರವ ಇದ್ದಿದ್ದಲ್ಲಿ ಯದುವೀರ್ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಬದಲಾಗಿ ಬೀದಿಗೆ ತಂದಿದ್ದಾರೆ. ಕುಮಾರಸ್ವಾಮಿಯವರು ಉಂಡು ಹೋದ, ಕೊಂಡು ಹೋದ ಅನ್ನುವ ವ್ಯಕ್ತಿ. ಪಕ್ಷಗಳಿಂದ, ಪಕ್ಷಕ್ಕೆ ಅಧಿಕಾರ ಅರಸಿ ಹೋಗುವ ಅವರಿಂದ ಸಮುದಾಯ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವಕಾಶ ದೊರೆತಾಗಲೆಲ್ಲಾ ಬಿಜೆಪಿ ಒಕ್ಕಲಿಗ ವಿರೋಧಿತನ ತೋರಿದೆ. ಸಿ.ಟಿ.ರವಿ, ಪ್ರತಾಪಸಿಂಹಗೆ ಏಕೆ ಟಿಕೆಟ್ ನೀಡಲಿಲ್ಲ. ಕಾಂಗ್ರೆಸ್ ನಿಂದ ಮಾತ್ರ ಒಕ್ಕಲಿಗರಿಗೆ ಅವಕಾಶ ದೊರೆಯುವುದು ಎಂದು ಹೇಳಿದರು.
ನಿಜಕ್ಕೂ ಬಿಜೆಪಿಯಲ್ಲಿ ಒಕ್ಕಲಿಗರಿಗೆ ಮಾನ್ಯತೆ ಇಲ್ಲ. ಬಿ.ಎಸ್. ವೈ ಅವರನ್ನು ಕೆಳಗಿಳಿಸಿದಾಗ ಅಶೋಕ್ ಅವರನ್ನು ಸಿಎಂ ಮಾಡಬಹುದಾಗಿತ್ತು. ಈಶ್ವರಪ್ಪ ಅವರನ್ನು ಸಿದ್ದರಾಮಯ್ಯ ಅವರಿಗೆ ಸಮಾನವಾಗಿ ಬೆಳೆಸಲಿಲ್ಲ. ಮೇಕೆದಾಟು ವಿರೋಧಿಸುವ ಅಣ್ಣಾಮಲೈ ಅವರನ್ನು ಕಳೆದ ಚುನಾವಣೆ ವೇಳೆ ರಾಜ್ಯದ ಉಸ್ತುವಾರಿಯನ್ನಾಗಿಸಿದರು. ಈ ರೀತಿ ಬ್ರಿಟಿಷರಿಗಿಂತ ಹೆಚ್ಚಾಗಿ ಒಡೆದು ಆಳುವ ನೀತಿ ಬಿಜೆಪಿ ಅನುಸರಿಸುತ್ತಿದ್ದಾರೆ. ಆದ್ದರಿಂದ ಎಲ್ಲರನ್ನೂ ಬೆಳೆಸುವ ಕಾಂಗ್ರೆಸ್ ಹಾಗೂ ಎಂ. ಲಕ್ಷ?ಮಣ್ ಅವರನ್ನು ಚುನಾಯಿಸಬೇಕೆಂದು ಕೋರಿದರು. ಕೆಪಿಸಿಸಿ ಮಹಿಳಾ ಅಧ್ಯಕ್ಷರಾದ ಡಾ. ಪುಷ್ಪಾ ಅಮರ್‍ನಾಥ್, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಶೋಭಾ ಮೋಹನ್, ಮೋಹನ, ಮೋದಾಮಣಿ ಇನ್ನಿತರ ಹಾಜರಿದ್ದರು.