ಮತದಾರರನ್ನು ಸೆಳೆಯಲು ಹಲವು ವಿಶೇಷ ಮತಗಟ್ಟೆಗಳು ನಿರ್ಮಾಣ!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.25- ಮತಗಟ್ಟೆಗಳತ್ತ ಮತದಾರರನ್ನು ಸೆಳೆಯಲು ಈ ಬಾರಿ ಹಲವು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳೆಯರನ್ನು ಮತಗಟ್ಟೆಗಳತ್ತ ಸೆಳೆಯಲು ಒಟ್ಟು 16 ಸಖಿ ಸೌರಭ ಮತಗಟ್ಟೆಗಳಿವೆ. ಬುಡಕಟ್ಟು ಮತದಾರರಿಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ 2 ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ, ವಿಶೇಷ ಮತದಾರರಿಗಾಗಿ ಸಂಜ್ಞಾ ಭಾμÁ ಅನುವಾದ ಕರಿರುವ ಒಟ್ಟು 4 ಮತಗಟ್ಟೆಗಳು, ಯುವ ಮತದಾರರು ಅತಿ ಹೆಚ್ಚು ಇರುವ ಕಡೆ ಒಟ್ಟು 8 ಮತಗಟ್ಟೆಗಳು, ಜಿಲ್ಲೆಯ ಸಾಂಸ್ಕøತಿಕ ಕಲೆಗಳ ಬಗ್ಗೆ ತಿಳಿಸುವ 2 ಎಥ್ನಿಕ್ ಮತಗಟ್ಟೆಗಳು, ರೈತರ ಮಹತ್ವ ಸಾರುವ 8 ಅನ್ನದಾತ ಮತಗಟ್ಟೆಗಳು, ಅರಣ್ಯದ ಮಹತ್ವ ಸಾರುವ 6 ಹಸಿರು ಮತಗಟ್ಟೆಗಳು ಈ ಬಾರಿ ಇರಲಿವೆ.
ಜಿಲ್ಲಾ ವ್ಯಾಪ್ತಿಯಲ್ಲಿ 197 ಕ್ರಿಟಿಕಲ್ ಮತಗಟ್ಟೆ: ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ 983 ಮತಗಟ್ಟೆಗಳಲ್ಲಿ 197 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮೊಬೈಲ್ ನೆಟ್ ವರ್ಕ್ ಲಭ್ಯವಿಲ್ಲದ ಒಟ್ಟು 17 ಮತಗಟ್ಟೆಗಳು ಗುರುತಿಸಲಾಗಿದೆ.
1667 ಆರಕ್ಷಕ ಸಿಬ್ಬಂದಿ- ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ 4 ಡಿವೈಎಸ್ಪಿ, 13 ಮಂದಿ ಪಿಐ, 41 ಪಿಎಸ್‍ಐ, 67 ಎಎಸ್‍ಐ, 936 ಕಾನ್ಸ್‍ಟೇಬಲ್, 600 ಹೋಂ ಗಾರ್ಡ್, 6 ಮೀಸಲು ಪಡೆ, ಗುಜರಾತ್‍ನ 2 ಮೀಸಲು ಪಡೆ ಈ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
37 ಲಕ್ಷ ಹಣ, 2.7 ಕೆಜಿಚಿನ್ನ ವಶ: ಅಧಿಸೂಚನೆ ಪ್ರಕಟಗೊಂಡ ಬಳಿಕ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಇಲ್ಲದ 37,59,790 ರೂ. ಹಣ ವಶಪಡಿಸಿಕೊಳ್ಳಲಾಗಿದೆ. 106.60 ಕೋಟಿ ಮೌಲ್ಯದ 1.25 ಕೋಟಿ ಲೀಟರ್ ಮದ್ಯ, 4.44 ಕೆಜಿ ಗಾಂಜಾ, 2.17 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.