ನೇಹಾ ಹತ್ಯೆ ಪ್ರಕರಣ ಖಂಡಿಸಿ ವೀರಶೈವ ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 25- ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ ಪ್ರಕರಣವನ್ನು ಖಂಡಿಸಿ ಹಾಗೂ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ನೊಂದ ಕುಟುಂಬಕ್ಕೆ ನ್ಯಾಯಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಸಾವಿರಾರು ಮಂದಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಹೊರಟು ಬಿ.ರಾಚಯ್ಯ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿದರು. ಜಿಲ್ಲಾಧಿಕರಿಗಳಿಗೆ ಮನವಿ ಸಲ್ಲಿಸಬೇಕೆಂದು ಕೆಲಕಾಲ ಪ್ರತಿಭಟನಾಕಾರರು ಪಟ್ಟು ಹಿಡಿದಕಾರಣ ಪೊಲೀಸರು ಹಾಗೂ ಪ್ರತಿಭಟನಾಕಾರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನೂಕಾಟ ನಡೆಯಿತು.
ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘ ರಾಜೇಂದ್ರಸ್ವಾಮೀಜಿ ಪ್ರತಿಭಟನಾಕಾರನ್ನು ಸಮಾಧಾನಪಡಿಸಿ, ಇದು ಚುನಾವಣಾ ಸಮಯವಾಗಿರುವುದರಿಂದ ಚುನಾವಣಾ ನೀತಿ ಸಂಹಿತೆಯಲ್ಲಿ ನಾವಿದ್ದೇವೆ. ಹೀಗಾಗಿ ಗೊಂದಲ ಮಾಡಿಕೊಳ್ಲುವುದು ಬೇಡ. ಈಗಾಗಲೇ ನಮ್ಮ ಮನವಿಯನ್ನು ಸ್ವೀಕರಿಸಲು ತಹಶೀಲ್ಧಾರ್ ಬಸವರಾಜು ಅವರು ಆಗಮಿಸಿದ್ದಾರೆ. ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸೋಣ. ನೇಹಾ ಕುಟುಂಬಕ್ಕೆ ನ್ಯಾಯದೊರೆಯದಿದ್ದರೆ ಚುನಾವಣೆ ಮುಗಿದ ನಂತರದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡೋಣ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಮನವಿಸಲ್ಲಿಸಿ, ಸಮಾಪ್ತಿಗೊಳಿಸಲಾಯಿತು.
ಇದಕ್ಕು ಮುನ್ನಾ ಮಾತನಾಡಿದ ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀ ಚೆನ್ನಬಸವಸ್ವಾಮೀಜಿ ಅವರುಗಳು, ವಿದ್ಯಾರ್ಥಿನಿ ನೇಹಾ ಬರ್ಬರ ಹತ್ಯೆ ಅತ್ಯಂತ ಕ್ರೂರವಾಗಿದ್ದು, ಮಾನವ ಸಮಾಜವೇ ತಲೆತಗ್ಗಿಸುವಂತಾಗಿದೆ. ಯಾವುದೇ ಸಮಾಜದ ವ್ಯಕ್ತಿ ಈ ರೀತಿ ಕೃತ್ಯದಲ್ಲಿ ಭಾಗಿಯಾಗಿದ್ದರೆ ಆತನನ್ನು ಗಲ್ಲಿಗೇರಿಸಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡದಂತೆಆಗುತ್ತದೆ. ಇದು ಕೇವಲ ಲಿಂಗಾಯತ ಸಮಾಜದ ನೇಹಾಳ ಕೊಲೆ ಪ್ರಕರಣವಲ್ಲ. ಇಡೀದೇಶಕ್ಕೆಒಂದುತಪ್ಪು ಸಂದೇಶವನ್ನು ನೀಡುವ ಪ್ರಕರಣವಾಗಿದೆಎಂದರು.
ಸರ್ಕಾರಕೂಡಲೇ ಈ ಪ್ರಕರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿ, ನೇಹಾ ಕುಟುಂಬಕ್ಕೆ ನ್ಯಾಯಕೊಡಿಸಲು ಪ್ರಯತ್ನ ಮಾಡಬಹುದಾಗಿತ್ತು. ಅದರೆ, ಕೇವಲ ಕಣ್ಣೊರಿಸುವತಂತ್ರವನ್ನು ಹಾಗೂ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯಿತು. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ವೈಯಕ್ತಿಕಎಂದು ಹೇಳುವ ಮೂಲಕ ಇಡೀ ವೀರಶೈವ- ಲಿಂಗಾಯತ ಸಮಾಜಕ್ಕೆದ್ರೋಹ ಬಗೆದಿದ್ದಾರೆ. ಇಂಥ ಹೇಳಿಕೆಯಿಂದ ಸಮಾಜಕ್ಕೆತುಂಬಾ ನೋವಾಗಿದೆ. ಮೃತ ಪಟ್ಟ ನೇಹಾ ಹಾಗೂ ಅವರಕುಟುಂಬಕ್ಕು ಕಳಂಕವನ್ನು ತರುವ ಪ್ರಯತ್ನ ನಡೆದಿದೆ. ಇವೆಲ್ಲವುಕೊನೆಯಾಗಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ಲವ್ ಜಿಹಾದ್ ಮಾದರಿಯಲ್ಲಿ ನಡೆದಿರುವಘಟನೆಯ ಹಿಂದೆಯಾವದುಷ್ಟ ಶಕ್ತಿಗಳು ಕೈಜೋಡಿಸಿವೆ ಎಂಬುದನ್ನು ಪತ್ತೆ ಹಚ್ಚಬೇಕು. ಇದರ ಹಿಂದೆ ಮತ್ತಷ್ಟುಜನರುಇದ್ದು, ಅವರನ್ನು ಬಂಧಿಸಿ, ಪ್ರಕರಣವನ್ನು ಶೀಘ್ರ ಇತ್ಯರ್ಥ ಪಡಿಸಿ, ಆರೋಪಿ ಫಯಾಜ್‍ನನ್ನು ನೇಣಿಗೇರಿಸಬೇಕುಎಂದು ಪ್ರತಿಭಟನಾಕಾರರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನಕಾರ್ಯದರ್ಶಿ ಕುರುಬರಹುಂಡಿಕೆ.ಆರ್. ಲೋಕೇಶ್, ಹೊನ್ನಹಳ್ಳಿ ಪಿ. ವೃಷಬೇಂದ್ರಪ್ಪ, ತಾಲೂಕುಅಧ್ಯಕ್ಷ ಹೊಸೂರು ನಟೇಶ್, ಕದಳಿ ಮಹಿಳಾ ವೇದಿಕೆಯಅಧ್ಯಕ್ಷ ವಸಂತಮ್ಮ, ಚಾಮುಲ್‍ಅಧ್ಯಕ್ಷ ನಾಗೇಂದ್ರ, ಗುಂಡ್ಲುಪೇಟೆ ಪ್ರಣಯ್, ಮುಖಂಡರಾದನಿಜಗುಣರಾಜು, ಪುಟ್ಟಮಲ್ಲಪ್ಪ, ಪುರುಷೋತ್ತಮ್, ಡಿ.ಎಂ. ಪರಶಿವಮೂರ್ತಿ, ಪುಟ್ಟಣ್ಣ, ರತ್ನಮ್ಮ, ಪ್ರಭುಸ್ವಾಮಿ, ಬಸವರಾಜು, ಸುಜೇಂದ್ರ, ಬಸವಣ್ಣ, ಮುರುಡೇಶ್ವರಸ್ವಮಿ, ಮಧು, ಪ್ರಮೋದ್, ಬಸವರಾಜು, ಸೇರಿದಂತೆಚಾ.ನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರುತಾಲೂಕಿನ ಮಹಾಸಭಾದ ಪದಾಧಿಕಾರಿಗಳೂ, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.