ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡರು

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೪ : ಹರಪನಹಳ್ಳಿ ತಾಲೂಕು ಹಳೇ ಓಬಳಾಪುರ ರೆಡ್ಡಿ ಕ್ಯಾಂಪ್ ಜಿ.ಅಶ್ವಥ್, ಜಿ.ಹರೀಶ್, ಉಮೇಶ್, ಸುರೇಶ್ ಅವರು ಕಾಂಗ್ರೆಸ್ ತೊರೆದು ಸಂಸದ ಜಿ.ಎಂ.ಸಿದ್ದೇಶ್ವರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಟಿ.ಕೊಟ್ರೇಶ್, ಜಿ.ಅಶೋಕ್, ಜಿ.ಹನುಮಂತಪ್ಪ, ಎಸ್.ಕೊಟ್ರೇಶ್, ಎ.ಕೆಂಚಪ್ಪ, ಎ.ಹನುಮಂತಪ್ಪ, ಎಸ್.ಮಂಜಪ್ಪ, ಎನ್.ಅಣ್ಣೇಶ್, ಎಚ್.ತಿಮ್ಮಪ್ಪ, ಎಸ್.ಎಂ.ಮಂಜಪ್ಪ, ಎಸ್.ಮಂಜಪ್ಪ, ಕೊಟ್ರಪ್ಪ, ಹನುಂತಪ್ಪ ಅವರು ಕಾಂಗ್ರೆಸ್ ತೊರೆದು ಸೇರ್ಪಡೆಗೊಂಡರು. ಸಂಸದ ಜಿ.ಎಂ.ಸಿದ್ಧೇಶ್ವರ್, ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಮಾಜಿ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಮುರುಗೇಶ್ ಆರಾಧ್ಯ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸ್ಕರಿಯಪ್ಪ, ಅನಿಲ್ ಕುಮಾರ್, ಶಿವಕುಮಾರ್, ದೇವರಮನೆ ಶಿವಕುಮಾರ್, ಪ್ರಸನ್ನ ಕುಮಾರ್, ಐರಣಿ ಅಣ್ಣೇಶ್,ಶಿವು ಇದ್ದರು.