ಅಭಿವೃದ್ಧಿ ಬದ್ಧತೆ ನಮಗೆ ಇದೆ: ಎಸ್ಸೆಸ್

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೫; ಅಭಿವೃದ್ಧಿ ಬಗ್ಗೆ ನಮಗೆ ಬದ್ದತೆ ಇದೆ. ನಾವು ಯಾವುದೇ ಸರ್ಕಾರ ಇದ್ದರೂ ಸಹ ದಾವಣಗೆರೆ ಅಭಿವೃದ್ಧಿಗೆ ಬದ್ದರಿದ್ದೇವೆ. ನೀವು ಸಹ ನಮ್ಮನ್ನು ಬೆಂಬಲಿಸುವ ಮೂಲಕ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಬೇಕೆಂದು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಕರೆ ನೀಡಿದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 6ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.ನಾನಾಗಲೀ, ಮಲ್ಲಿಕಾರ್ಜುನ್ ಆಗಲೀ ದಾವಣಗೆರೆ ಅಭಿವೃದ್ಧಿ ಕಂಕಣಬದ್ದರಾಗಿ ಕೆಲಸ ಮಾಡಿದ್ದೇವೆ. ಸರ್ವ ಜನಾಂಗಕ್ಕೂ ಒಳಿತನ್ನು ಬಯಸುವ ಪಕ್ಷ ಕಾಂಗ್ರೆಸ್ ಪಕ್ಷ ಆ ಪಕ್ಷ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೇಮಿಸಿದ್ದು, ಬರುವ ತಿಂಗಳು 7ರಂದು ನಡೆಯುವ ಮತದಾನದ ವೇಳೆ ಅತಿಹೆಚ್ಚು ಮತದಾನ ಮಾಡುವ ಮೂಲಕ ದೆಹಲಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ ಈ ದೇಶದ ಪ್ರಧಾನಿ ಸೋಲಿನ ಭಯದಿಂದ ಹತಾಶೆರಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ಸುಳ್ಳಿನ ಸರ್ಕಾರ ನಡೆಸಿದ ಬಿಜೆಪಿಗೆ ಸೋಲಿನ ಹತಾಶೆ ಕಾಡುತ್ತಿದ್ದು, ಇದರಿಂದಾಗಿಯೇ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.