ಮೊದಲ ಹಂತ ಮುಕ್ತಾಯ; ಮೋದಿ ಮಾತಿನ ಶೈಲಿ ಬದಲುಪ್ರಿಯಾಂಕ್‍ಖರ್ಗೆ ವಾಗ್ದಾಳಿ
ಕಲಬುರಗಿ,ಏ.24: ಲೋಕಸಭಾಚುನಾವಣೆಯ ಮೊದಲ ಹಂತದ ಮತದಾನದಲ್ಲಿ ನಿರೀಕ್ಷೆಗೆತಕ್ಕಂತೆ ಮತ ಬಂದಿಲ್ಲ ಎಂದು ಮನವರಿಕೆಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿ ಬದಲಾಗಿದ್ದು,ಈ ಕುರಿತುಚುನಾವಣಾಆಯೋಗಯಾವುದೇಕ್ರಮಜರುಗಿಸುತ್ತಿಲ್ಲಎಂದುಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್‍ಖರ್ಗೆ ಟೀಕಿಸಿದರು.
ಇಲ್ಲಿನಜಿಲ್ಲಾಕಾಂಗ್ರೆಸ್‍ಕಚೇರಿಯಲ್ಲಿಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಅವರು, ಕಳೆದ ಮೂರು ದಿನಗಳ ಹಿಂದೆರಾಜಸ್ತಾನದಲ್ಲಿಚುನಾವಣಾ ಭಾಷಣ ಮಾಡಿದಪ್ರಧಾನಿ ಮೋದಿ ಕಾಂಗ್ರೆಸ್‍ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಲಸೂತ್ರಕಿತ್ತು ಮುಸ್ಲಿಮರ ಕೈಗೆ ಕೊಡುತ್ತದೆಎಂದಿದ್ದಾರೆ.ಈ ಹೇಳಿಕೆ ಅವರಹತಾಶೆಯ ಸಂಕೇತ ಮಾತ್ರವಲ್ಲ; ಜೊತೆಗೆ ಪ್ರಧಾನಿ ಹುದ್ದೆಯಘನತೆಗೆಕುಂದುತರುವಂತಿದೆ ಎಂದರು.
ಪ್ರಧಾನಿ ಮೋದಿ ಈ ಹೇಳಿಕೆ ನೀಡಿಮೂರು ದಿನವಾಗಿದ್ದು, ಆ ಬಳಿಕಕನಿಷ್ಠ 20 ಸಾವಿರಜನರು ಸಹಿ ಹಾಕಿರುವದೂರನ್ನುಆಯೋಗಕ್ಕೆಸಲ್ಲಿಸಲಾಗಿದೆ.ಕಾಂಗ್ರೆಸ್ ನಾಯಕರ ಮೇಲೆ ತಕ್ಷಣಸ್ವಯಂ ಪ್ರೇರಿತದೂರು ದಾಖಲಿಸಿಕೊಳ್ಳುವ ಚುನಾವಣಾಆಯೋಗ ಈಗ ನಿದ್ದೆ ಮಾಡುತ್ತಿದೆಯಾ?ಅಥವಾ ಸತ್ತಿದೆಯಾ?ಸಂವಿಧಾನ ಬದ್ಧ ಸ್ವಾಯತ್ತ ಸಂಸ್ಥೆಯಾದಆಯೋಗ ಈ ವಿಚಾರದಲ್ಲಿ ಸುಮ್ಮನಿದೆ.ಒಂದುಕಣ್ಣಿಗೆ ಬೆಣ್ಣೆ ಮತ್ತೊಂದುಕಣ್ಣಿಗೆ ಸುಣ್ಣ ಹಚ್ಚುವಧೋರಣೆಅನುಸರಿಸುತ್ತಿರುವುದನ್ನು ನೋಡಿದರೆಆಯೋಗಕೂಡಬಿಜೆಪಿಯ ಮುಂಚೂಣಿಘಟಕದಂತೆಕಾಣುತ್ತಿದೆ.ಹಾಗಾಗಿ ಅದುತನ್ನ ಬೋರ್ಡ್ ಬದಲಿಸಬೇಕೆಂದುಆಕ್ರೋಶ ವ್ಯಕ್ತಪಡಿಸಿದರು.
ತ್ರಿವಳಿ ತಲಾಖ್‍ರದ್ದು, ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಂತರದ ಮುಸ್ಲಿಮರು ಸ್ವಾಭಿಮಾನಿಗಳಾಗಿ ಜೀವಿಸುವಂತೆ ಮಾಡಿರುವುದಾಗಿಮೋದಿ ಹೇಳಿದ್ದರು.ಆದರೆ, ಮೊದಲ ಹಂತದಚುನಾವಣೆಯ ನಂತರ ಮುಸ್ಲಿಮರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.ಎಸ್.ಸಿ ಹಾಗೂ ಎಸ್.ಟಿ ಮೀಸಲಾತಿಕಿತ್ತುಕೊಂಡು ಮುಸ್ಲಿಮರಿಗೆ ಹಂಚುವ ಪ್ರಯತ್ನ ನಡೆದಿತ್ತುಎಂದು ಹೇಳಿದ್ದಾರೆ.ಇದು ಮೋದಿಯವರ ಹತಾಶೆತೋರಿಸುತ್ತದೆಎಂದು ಹರಿಹಾಯ್ದರು.
“ರಾಜಸ್ತಾನದಲ್ಲಿರಾಮನ ಹೆಸರಿನಲ್ಲಿ ಮತ ಕೇಳುತ್ತಾರೆ.ಹನುಮಾನ್‍ಚಾಲೀಸ್ ಹೇಳಿದರೆ ಹಲ್ಲೆ ಮಾಡಲಾಗುತ್ತದೆ.ಎಂದು ಪ್ರಚಾರ ಭಾಷಣದಲ್ಲಿ ಹೇಳುತ್ತಾರೆ.ಸ್ವತಃ ಬಿಜೆಪಿಯ ಶಾಸಕ ಗರುಡಾಚಾರ್ ಈ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.ಜೊತೆಗೆ ಎಫ್.ಐ.ಆರ್.ನಲ್ಲಿಯೂ ಈ ಕುರಿತುಉಲ್ಲೇಖಿಸಿಲ್ಲ. ಆದರೂರಾಜ್ಯದ ಮರ್ಯಾದೆ ಹಾಳು ಮಾಡುವ ಹೇಳಿಕೆಯನ್ನು ಮೋದಿ ನೀಡಿದ್ದಾರೆ. ಇತ್ತೀಚಿಗೆ ನಾಗಪುರಕ್ಕೆ ಭೇಟಿ ನೀಡಿದ ನಂತರ ಮೋದಿ ವರಸೆ ಬದಲಾಗಿದೆ”ಎಂದುವ್ಯಂಗ್ಯವಾಡಿದರು.
ಮೀಸಲಾತಿಕುರಿತಂತೆಕಾಂಗ್ರೆಸ್‍ಜನವಿರೋಧಿ ನಿಲುವು ತಾಳಿಲ್ಲ. ಬದಲಿಗೆ ಮೀಸಲಾತಿ ವಿಚಾರದಲ್ಲಿ ಬಿಜೆಪಿಯವರುಚೆಲ್ಲಾಟ ನಡೆಸಿದ್ದಾರೆ ಎಂದುಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್, ಮೀಸಲಾತಿ ರದ್ದುಗೊಳಿಸುವಂತೆ ಅಂದಿನ ಬಿಜೆಪಿ ರಾಜ್ಯಸಭಾ ಸದಸ್ಯರಾಮಾಜೋಯಿಸ್ ಸುಪ್ರಿಂಕೋರ್ಟ್‍ನಲ್ಲಿಅರ್ಜಿ ಸಲ್ಲಿಸಿದ್ದರು.ಸದಾಶಿವ ಆಯೋಗದ ವರದಿ ವಿಚಾರದಲ್ಲಿಚೆಲ್ಲಾಟವಾಡಿದ್ದಾರೆ. ಮೀಸಲಾತಿಗೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪನವರ ಮನೆಯ ಮೇಲೆ ಕಲ್ಲುತೂರಾಟಕೂಡ ನಡೆದಿತ್ತು.ಈ ಬಗ್ಗೆ ಬಿಜೆಪಿಗರು ಮಾತನಾಡಬೇಕುಎಂದು ಸವಾಲು ಹಾಕಿದರು.
“ಬಿಜೆಪಿ 400 ಸೀಟು ಎಂದುಕನವರಿಸುತ್ತಿದೆ.ಸದÀ್ಯ ಮೇಲ್ಮನೆಯಲ್ಲಿಅವರಿಗೆ ಬಹುಮತಇಲ್ಲ. ಒಂದು ವೇಳೆ 400 ಸೀಟು ಗೆದ್ದರೆಅವರಿಗೆ ಮೇಲ್ಮನೆಯಲ್ಲೂ ಬಹುಮತ ಸಿಗಲಿದೆ.ಆಗ ಸಂವಿಧಾನ ಬದಲಾಯಿಸಬಹುದು ಎಂಬ ಹುನ್ನಾರ ನಡೆದಿದೆ.ಇದಕ್ಕೆ ಪುಷ್ಠಿ ನೀಡುವಂತೆ ಸಂಸದಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.ಮೋದಿಯಾಗಲಿ ಅಥವಾ ಬಿಜೆಪಿಯಯಾವ ನಾಯಕರಾಗಲೀಅಧಿಕೃತವಾಗಿ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಈ ಬಾರಿ”ಅಬ್ ಕೀ ಬಾರ್‍ಚಾರ್ ಸೌ ಪಾರ್‍ಆಗಲ್ಲ”ಎಂದರು.
ಕಾಂಗ್ರೆಸ್‍ಅಧಿಕಾರಕ್ಕೆ ಬಂದರೆಎಲ್ಲರ ಆಸ್ತಿ ಆತಂಕವಾದಿಗಳು ಹಾಗೂ ಹೆಚ್ಚು ಮಕ್ಕಳು ಇದ್ದವರಿಗೆ ಹಂಚುತ್ತಾರೆಎಂದು ಹೇಳುತ್ತಾರೆ.ಬಿಜೆಪಿಯವರಿಗೆನಿಜಕ್ಕೂಅರಿವಿದ್ದರೆ, ಸಂವಿಧಾನದಲ್ಲಿಇದು ಸಾಧ್ಯವೇ?ಎಂಬುದನ್ನು ಅವಲೋಕಿಸಲಿ ಎಂದರಲ್ಲದೆ, ಬಿಜೆಪಿಯವರಿಗೆ ಭಾಷಣ ಮಾಡಲು ವಿಷಯಗಳೇ ಇಲ್ಲ. ಭಯೋತ್ಪಾದನೆ, ಮೊಘಲ್, ರಾಮಮಂದಿರ, ಹನುಮಾನಚಾಲೀಸ್, ರಾಹುಲ್‍ಗಾಂಧಿ ಹಾಗೂ ಖರ್ಗೆ ಬಿಟ್ಟರೇ ಬೇರೆ ವಿಚಾರಗಳೇ ಇಲ್ಲಎಂದುಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆಕೊಲೆಯಾದ ನೇಹಾ ಹಿರೇಮಠಅವರ ಮನೆಗೆ ಬಿಜೆಪಿ ರಾಷ್ಟ್ರೀಯಅಧ್ಯಕ್ಷಜೆ.ಪಿ.ನಡ್ಡಾ ಭೇಟಿ ನೀಡಿದ ವಿಚಾರಕ್ಕೆಪ್ರತಿಕ್ರಿಯಿಸಿದ ಪ್ರಿಯಾಂಕ್‍ಖರ್ಗೆ, ಪೂಜ್ಯಅಪ್ಪಾಜಿಯವರ ಮೇಲೆಯೂಕೂಡಒಂದುಕೇಸ್‍ದಾಖಲಾಗಿದೆ.ಅಲ್ಲಿಗೆಯಾಕೆ ಭೇಟಿ ನೀಡಿಲ್ಲಎಂದು ಮಾರುತ್ತರ ನೀಡಿದರು.
ಲೋಕಸಭೆಚುನಾವಣೆಯ ನಂತರಆರ್.ಅಶೋಕ್ ಹಾಗೂ ವಿಜಯೇಂದ್ರ ಸ್ಥಾನ ಕಳೆದುಕೊಳ್ಳುತ್ತಾರೆ ಎಂದ ಸಚಿವರು, ಜೆಡಿಎಸ್ ಪಕ್ಷಕೂಡ ಅಸ್ತಿತ್ವದಲ್ಲಿ ಉಳಿಯಲ್ಲ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಖರ್ಗೆ, ಯತ್ನಾಳ ಅವರ ಮಾತಿಗೆಯಾಕೆಕಿಮ್ಮತ್ತುಕೊಡಬೇಕು?ಅವರುತಮ್ಮ ಪಕ್ಷದ ಹಾಗೂ ವೀರ ಸಾವರ್ಕರ್‍ಇತಿಹಾಸ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್‍ಜಿಲ್ಲಾಧ್ಯಕ್ಷಜಗದೇವಗುತ್ತೇದಾರ್, ಶಾಸಕ ಅಲ್ಲಮಪ್ರಭು ಪಾಟೀಲ್, ರಾಜಗೋಪಾಲರೆಡ್ಡಿ, ಡಾ.ಕಿರಣ್‍ದೇಶಮುಖ, ಪ್ರವೀಣ್ ಹರವಾಳ, ಶಿವಕುಮಾರ ಹೊನಗುಂಟಿ, ಈರಣ್ಣ ಝಳಕಿ ಸೇರಿದಂತೆಇತರರಿದ್ದರು.
ಚೊಂಬು ಪ್ರದರ್ಶಿಸಿ ಜಾಧವ್‍ಗೆ ಟಾಂಗ್
ಕಲಬುರಗಿ ಸಂಸದರಾದ ಬಳಿಕ ಡಾ.ಉಮೇಶ್‍ಜಾಧವ್ ಈ ಭಾಗಕ್ಕೆ ಕೇವಲ ಚೊಂಬು ನೀಡಿದ್ದಾರೆಎಂದುಎರಡು ಖಾಲಿ ಚೊಂಬುಗಳನ್ನು ಪ್ರದರ್ಶಿಸುವ ಮೂಲಕ ಸಚಿವ ಪ್ರಿಯಾಂಕ್‍ಖರ್ಗೆ ವಾಗ್ದಾಳಿ ನಡೆಸಿದರು.
ಸಂಸದಜಾಧವ್‍ತಮನ್ನು ಸ್ಪೆಷಲ್ ಬೇಬಿ ಎಂದುಕರೆಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್‍ಖರ್ಗೆ, “ಹೌದು ನಾನು ಸ್ಪೆಷಲ್ ಬೇಬಿನೆ. ಏನೀಗ?ಅವರಿಗೆ ಏನು ಸಮಸ್ಯೆ.ನಾನು ಎನ್.ಎಸ್.ಯು.ಐಹಂತದಿಂದ ಬಂದವನು.ಅಲ್ಲಿಂದಲೇ ಹೋರಾಟ ಮಾಡಿಕೊಂಡುರಾಜಕೀಯಕ್ಕೆ ಬಂದವನು.ಕಲಬುರಗಿಯಲ್ಲಿಉದ್ಯೋಗಖಾತ್ರಿಯೋಜನೆಕೈಬಿಟ್ಟಾಗ ನಾನು ಹೋರಾಟ ಮಾಡಿದ್ದೇನೆ. ಜಾಧವ್‍ಅಂತಹಯಾವುದಾದರೂ ಹೋರಾಟ ಮಾಡಿರಾಜಕೀಯಕ್ಕೆ ಬಂದಿದ್ದಾರಾ?ಅವರೇನಿದ್ದರೂ ನೇರವಾಗಿಟಿಕೆಟ್‍ತೆಗೆದುಕೊಂಡುಚುನಾವಣೆ ಎದುರಿಸಿದ್ದಾರೆ ಎಂದು ಕಿಚಾಯಿಸಿದರು.
ಬರ ಪರಿಹಾರ ಬೇಡಿಕೆ ಪ್ರಸ್ತಾವನೆತಡವಾಗಿ ಸಲ್ಲಿಸಲಾಗಿದೆಎಂದು ಗೃಹ ಸಚಿವಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದರು.ಆದರೆ ಸುಪ್ರಿಂಕೋರ್ಟ್‍ನಲ್ಲಿರಾಜ್ಯಸರಕಾರಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂದಾಗಅಟಾರ್ನಿಜನರಲ್ ಈ ಬಗ್ಗೆ ಸುಪ್ರಿಂಕೋರ್ಟ್‍ನಲ್ಲಿ ಹೇಳಿಲ್ಲವಲ್ಲ?ರಾಜ್ಯಸರಕಾರಪ್ರಸ್ತಾವನೆ ಸಲ್ಲಿಸಿದ ನಂತರಅಮಿತ್ ಶಾ ಉನ್ನತ ಮಟ್ಟದ ಸಮಿತಿ ಸಭೆಏಕೆ ಮಾಡಿಲ್ಲ? ಇದುಕೇಂದ್ರ ಸರಕಾರಒಕ್ಕೂಟವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆಎಂದುವ್ಯಾಖ್ಯಾನಿಸಿದರು.
ಮಂಗಲಸೂತ್ರ ಕಳೆದುಕೊಂಡ ಸೋನಿಯಾ
ಮಂಗಲಸೂತ್ರಅಥವಾಒಡವೆಎನ್ನುವುದುಒಂದು ಭಾವನಾತ್ಮಕ ವಿಚಾರವಾಗಿದ್ದು, ಸೋನಿಯಾಗಾಂಧಿ ಈ ದೇಶಕ್ಕಾಗಿತಮ್ಮ ಮಂಗಲಸೂತ್ರ ಕಳೆದುಕೊಂಡಿದ್ದಾರೆ ಎಂದು ಸಚಿವ ಪ್ರಿಯಾಂಕ್‍ಖರ್ಗೆ ನುಡಿದರು.
ಮತ್ತೊಂದೆಡೆ, ರಾಜ್ಯದಜನರುನಿರುದ್ಯೋಗ ಸಮಸ್ಯೆಎದುರಿಸುತ್ತಿದ್ದಾಗ, ಕೊರೊನಾ ಸಂದರ್ಭದಲ್ಲಿಅವೈಜ್ಞಾನಿಕ ಲಾಕ್‍ಡೌನ್‍ಜಾರಿಯಾದಾಗ, ಚಿಕಿತ್ಸೆಗೆ ಹಣಇಲ್ಲದಿದ್ದಾಗ, ಪಿಎಸ್‍ಐ ಹಗರಣದಲ್ಲಿ ನೌಕರಿ ಪಡೆದುಕೊಳ್ಳಲು ಹಣ ಹೊಂದಿಸಲು ರಾಜ್ಯದಜನರುಒಡವೆ ಮಾರಿಕೊಂಡಿದ್ದಾರೆ.ಆಗ ಅಧಿಕಾರಲ್ಲಿದ್ದ ಬಿಜೆಪಿರಾಜ್ಯದಲ್ಲಿಅಂತಹ ಸ್ಥಿತಿ ನಿರ್ಮಿಸಿತ್ತು ಎಂದರು.