ಕಳ್ಳಭಟ್ಟಿ ಸರಾಯಿ ವಶ
ಯಾದಗಿರಿ,ಏ.24: ಜಿಲ್ಲೆಯ ಯರಗೋಳ ಗ್ರಾಮ ಹಾಗೂ ಗುಡ್ಡ ಪ್ರದೇಶದಲ್ಲಿ ನಡೆದ ಅಬಕಾರಿ ದಾಳಿಯಲ್ಲಿ 2 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ ಸರಾಯಿಯ ವಾಸನೆಯುಳ್ಳ 4 ಸ್ಟೀಲ್ ಗ್ಲಾಸ್‍ಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಯರಗೋಳ ಗ್ರಾಮದ ನಿವಾಸಿ ಆರೋಪಿ ಸಾಬಮ್ಮ ಮರೆಪ್ಪ ಚಡಬಾ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿ ಸಮಯದಲ್ಲಿ ಆರೋಪಿಯು ಪರಾರಿಯಾಗಿದ್ದು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.ಅಬಕಾರಿ ನಿರೀಕ್ಷಕ ಸಿದ್ರಾಮಪ್ಪ ತಾಳಿಕೋಟಿ,ಉಪ ನಿರೀಕ್ಷಕ ರೇಣುಕಮ್ಮ ಅಬಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿದರು.