ಈಜಲು ಹೋದ ಮೂವರು ಬಾಲಕರ ದುರ್ಮರಣ
ಕೆಂಭಾವಿ :ಏ.24: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ಮಂಗಳವಾರ ಕೆಂಭಾವಿ ಪೆÇಲೀಸ್ ಠಾಣೆ ವ್ಯಾಪ್ತಿಯ ನಗನೂರ ಗ್ರಾಮದಲ್ಲಿ ನಡೆದಿದೆ.
ಹೈಯಾಳಪ್ಪ (11),ಶರಣಬಸವ (10) ಹಾಗೂ ಅನೀಲ (10) ಮೃತ ದುರ್ದೈವಿಗಳಾಗಿದ್ದಾರೆ.
ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮೂವರು ಸ್ನೇಹಿತರು ಈಜಾಡಲು ನಗನೂರ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ತೆರಳಿದ ವೇಳೆ ನೀರು ಪಾಲಾಗಿದ್ದಾರೆ. ಬಾಲಕರ ಶವಗಳನ್ನು ಸ್ಥಳೀಯರು ಹೊರತೆಗಿದಿದ್ದು , ಶಹಾಪುರ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಸಂಗೀತಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆಂಭಾವಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.