ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸಾವು
ವಿಜಯಪುರ,ಏ.24: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ- ನಾಲತವಾಡ ರಸ್ತೆಯ ಹಿರೇಮುರಾಳ ಗ್ರಾಮದ ಹತ್ತಿರ ಅಡವಿ ಸೋಮನಾಳ ಕ್ರಾಸ್ ನಲ್ಲಿ ನಡೆದಿದೆ.
ಮೃತನನ್ನು ತಾಳಿಕೋಟೆ ತಾಲೂಕು ಮೂಕಿಹಾಳ ಗ್ರಾಮದ ರಾಜು ಮೂಕಿಹಾಳ (23) ಎಂದು ಗುರುತಿಸಲಾಗಿದೆ.
ರಾಜು ಮೂಕಿಹಾಳ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಯಾವುದೋ ವಾಹನವೇ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮುದ್ದೇಬಿಹಾಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.