ಮನಗೂಳಿಯಲ್ಲಿ ಹನುಮಾನ ಜಯಂತಿ ಆಚರಣೆ
ವಿಜಯಪುರ,ಏ.24:ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಶ್ರದ್ದಾ ಭಕ್ತಿಯಿಂದ ಶ್ರೀ ಹನುಮಾನ ಜಯಂತಿ ಆಚರಿಸಲಾಯಿತು.
ಪಟ್ಟಣದ ಐತಿಹಾಸಿಕ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ದೇವರಿಗೆ ವಿಶೇಷ ಪೂಜೆ ಅಭಿಷೇಕ ಮತ್ತು ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನೆರವೇರಿಸಲಾಯಿತು. ಮಕ್ಕಳು ಭಕ್ತಿ ಹಾಡುಗಳನ್ನು ಹಾಡಿದರು.
ಈ ಕಾರ್ಯಕ್ರಮದಲ್ಲಿ ಚನ್ನುಗೌಡ ಪಾಟೀಲ, ಬಸವರಾಜ ಕೋಟ್ಯಾಳ, ಶಿವಾಜಿ ಮೋರೆ, ಮಲ್ಲು ಲೇಸಪ್ಪಗೋಳ, ಪುಟ್ಟು ತೇಲಿ, ಲಕ್ಷ್ಮಣ ಹಡಪದ, ಸತ್ಯಪ್ಪ ಪೂಜಾರಿ, ಸುರೇಶ ಜಮಖಂಡಿ, ಸದಾಶಿವ ಮುತ್ತಪ್ಪನವರ ಮತ್ತಿತರರು ಉಪಸ್ಥಿತರಿದ್ದರು.