ಅಕ್ಕಮಹಾದೇವಿ ಜಯಂತಿ
ವಿಜಯಪುರ,ಏ.24:ತಾಲೂಕಿನ ಬುರಣಾಪೂರದ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ವೈರಾಗ್ಯನಿಧಿ ಶ್ರೀ ಅಕ್ಕಮಹಾದೇವಿ ಜಯಂತಿಯ ನಿಮಿತ್ತವಾಗಿ ಧರ್ಮದರ್ಶಿ ಪರಮಪೂಜ್ಯ ಲಕ್ಷ್ಮಣ ಶಿವಶರಣರ ನೇತೃತ್ವದಲ್ಲಿ ಶ್ರೀ ಅಕ್ಕಮಹಾದೇವಿ ಭಾವಚಿತ್ರಕ್ಕೆ ಸಹಸ್ರನಾಮಾವಳಿಯ ಮಹಾಶಿವಪೂಜೆ ನಡೆದು ವಿಶ್ವಶಾಂತಿಗಾಗಿ ಸಾಮೂಹಿಕ ಶಿವಪಂಚಾಕ್ಷರಿ ಮಹಾಮಂತ್ರ ಜಪಯಜ್ಞ ನೆರವೇರಿತು.
ಶಿವಭಕ್ತರಿಂದ ಶಿವಭಜನೆ, ಶಿವಚಿಂತನೆ ನಡೆದು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಿವಾಯಿತು.
ಇದೇ ಸಂದರ್ಭದಲ್ಲಿ ಹನಮಂತ ಪುಟ್ಟಿ, ಗುರುರಾಜ ನುಚ್ಚಿ, ಶ್ರೀಶೈಲ ಅಲಿಯಾಬಾದ, ಅಡಿವೆಪ್ಪ ಸಿಂಗೆ, ವಿಠ್ಠಲ ಮಾದರ, ಸಂಗವ್ವ ನುಚ್ಚಿ, ದೇವಕ್ಕಿ ದಳವಾಯಿ ಮುಂತಾದವರು ಉಪಸ್ಥಿತರಿದ್ದರು.