ಹನುಮ ಜಯಂತಿ: ‘ಶ್ರೀ ಶೂನ್ಯ ಶಂಕರಲಿಂಗ ಶರಣರ ವಚನಗಳು’ ಗ್ರಂಥ ಬಿಡುಗಡೆ
ವಿಜಯಪುರ,ಏ.24: ನಗರದ ಆಶ್ರಮ ರಸ್ತೆಯಲ್ಲಿರುವ ಶ್ರೀ ಜ್ಞಾನಯೋಗ ಆಶ್ರಮದ ಹತ್ತಿರ ಐಶ್ವರ್ಯ ನಗರದ ಶ್ರೀವರದಂಜನೇಯ ದೇವಾಲಯದಲ್ಲಿ ಹನುಮ ಜಯಂತಿಯ ಪ್ರಯುಕ್ತ ಜಂಬಗಿ ( ಆ)ಗ್ರಾಮದ ನಿವೃತ್ತ ಶಿಕ್ಷಕ ಸಾಹಿತಿ ಶಿವಶಂಕರ ದಿಂಡವಾರ ಅವರು ಬರೆದ ಶ್ರೀ ಶೂನ್ಯ ಶಂಕರಲಿಂಗ ಶರಣರ ವಚನಗಳು ಎಂಬ ಗ್ರಂಥ ಬಿಡುಗಡೆ ನೆರವೇರಿತು.
ಲೇಖಕ ಶಿವಶಂಕರ ದಿಂಡವಾರ ಅವರು ಈ ಪುಸ್ತಕದಲ್ಲಿ ಅಷ್ಟಾವರಣ, ಪಂಚಾಚಾರ, ಷಟಸ್ಥಳ, ಬೆಡಗು ವಚನಗಳು. ಸರಳವಾಗಿ ತಿಳಿದುಕೊಳ್ಳಲು ಒಳ್ಳೆಯ ಉಪಯುಕ್ತವಾದ ಗ್ರಂಥವಾಗಿದೆ ದುಡಿಮೆಯ ಮಧ್ಯದ ನಡುವೆ ಶರಣರು ನುಡಿದ ಮಾತುಗಳು ಓದಿ ತಿಳಿದುಕೊಳ್ಳಲು ಕೊಂಡು ಮನಸ್ಸು ಹಗರು ಮಾಡಿಕೊಳ್ಳಬೇಕೆಂದು ಹೇಳಿದರು.
ನಮ್ಮ ಜೀವನದಲ್ಲಿ ದುಡಿಮೆಯ ಜೊತೆ ಪುಣ್ಯಕ್ಷೇತ್ರಗಳ ದರ್ಶನ ನಮ್ಮ ನಾಡಿನಲ್ಲಿ ಅನೇಕ ಶತಮಾನಗಳ ಹಿಂದೆ ಶರಣರ ನುಡಿಗಳು.ನಮಗೆ ಸ್ಪೂರ್ತಿದಾಯಕವಾಗಿವೆ. ನಮಗೆ ಓದುವ ಅಭಿರುಚಿ ಇರದಿದ್ದರೂ ಪುರಾಣ, ಪ್ರವಚನಗಳಲ್ಲಿ ಹೇಳಿಯಾದರೂ ವಿಷಯಗಳನ್ನು ತಿಳಿದುಕೊಂಡು ಭಗವಂತನ ಸ್ಮರಣೆ ಮಾಡಬೇಕು ಎಂದು ಬಡಾವಣೆಗೆ ಹಿರಿಯರು ಪ್ರಥಮ ದರ್ಜೆಯ ಗುತ್ತಿಗೆದಾರ ಹಾಗೂ ಶರಣ ಬಬಲೇಶ್ವರದ ಬಿ.ಎಸ್. ಬಿರಾದಾರ.ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿ ಮಲ್ಲಿಕಾರ್ಜುನ ಮೇತ್ರಿ ಅವರು ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಶಿವಶಂಕರ ದಿಂಡವಾರ ಅವರು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿ ಬಂದ ಹಣದಿಂದ ಶ್ರೀ ಕೊಡೆಕಲ್ ಬಸವೇಶ್ವರ ದೇವಾಲಯ ನಿರ್ಮಿಸಿದ್ದಾರೆ. ಈಗಾಗಲೇ ಮಹಾಶರಣಿ ಶ್ರೀ ಗುಡ್ಡಾಪುರದ ವರದಾನಿ ಶ್ರೀ ದಾನಮ್ಮನ ಹಾಗೂ ಮುಕ್ತಕಮಾಲೆ.ಗುರು ಭ್ರಮೆ. ವಚನ ಸಾಹಿತ್ಯ. ಲೋಕ ಸಂಗ್ರಹ. ವ್ಯಾಕರಣ ಶಾಸ್ತ್ರ ಪ್ರಭೆ. ಶ್ರೀ ಬಯಲು ಬಸವೇಶ್ವರ ಚರಿತ್ರೆ. ವಿಚಾರ ವೇದಿಕೆ. ಇಹ- ಪರ (ಕವನ ಸಂಕಲನ) ಸಮಾಜದ ಮುಖಿಗಳು, ಬಸವ ಸಂದೇಶ ಇವರು ಅನೇಕ ಗ್ರಂಥ ಪುಸ್ತಕಗಳನ್ನು ಒಳ್ಳೆಯ ರೀತಿ ಇಳಿ ವಯಸ್ಸಿನಲ್ಲಿ ಚಟುವಟಿಕೆಯಿಂದ ಬರೆದಿದ್ದಾರೆ ಎಂದು ಹೇಳಿದರು.
ರಾಜುಗೌಡ ಪಾಟೀಲ. ಹನುಮಂತ ಚಿಂಚಲಿ, ಸಿದ್ದು ಅಂಗಡಿ, ಮಲ್ಲಯ್ಯ ಮಠಪತಿ, ಬಿ.ಎನ್. ಬಿರಾದಾರ, ಸಿದ್ದಣ್ಣ ಜೋಗುರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿವೇಕ ಹುಂಡೆಕಾರ, ಅರವಿಂದ ಗೊಬ್ಬರ, ರಾಜು ಜಕ್ಕುಂಡಿ, ಮಧು ಕಲಾದಗಿ, ಜಯಪ್ರಕಾಶ್ ಸೊಡ್ಡಗಿ, ಎಂ.ಎನ್. ಕೋರಿ, ಶಾಂತಕುಮಾರ ಪಾಟೀಲ, ಜಿ.ಕೆ. ಪಟ್ಟಣದ. ನಾನಾಗೌಡ ಪಾಟೀಲ, ಎಸ್.ಕೆ. ಬಿರಾದಾರ, ಎಂ.ಎಸ್.ಕಿಣಗಿ, ಆ.ಎಸ್. ಹುಲಸೂರ, ಎಸ್.ಬಿ. ಬೆಲ್ಲದ, ರಾಮಗೊಂಡ ಗುದ್ದಿ, ಮಲ್ಲಯ್ಯ ಹಿರೇಮಠ.ಇದ್ದರು.
ಪಂಚಾಕ್ಷರಿ ದಿಂಡವಾರ ಸ್ವಾಗತಿಸಿದರು. ಅಶೋಕ ತಿಮಶೆಟ್ಟಿ ನಿರೂಪಿಸಿ, ವಂದಿಸಿದರು.