ವಿಶ್ವಕರ್ಮ ದಿನಾಚರಣೆ
ಲಕ್ಷ್ಮೇಶ್ವರ,ಸೆ.21:ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜ ಮತ್ತು ಬನಶಂಕರಿ ಕಟ್ಟಡ ಕಾರ್ಮಿಕರ ಸಂಘ ಹಾಗೂ ಶ್ರೀ ಗುರು ಬ್ರಹ್ಮಾನಂದ ಶಿಲ್ಪಕಲಾ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ದಿನಾಚರಣೆಯನ್ನು ಗ್ರಾಮದೇವಿ ದೇವಸ್ಥಾನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಶಶಿಧರ್ ಎಂ ಲೋಹಾರ್ ಅವರನ್ನು ಸನ್ಮಾನಿಸಲಾಯಿತು ಮತ್ತು ಕಾರ್ಮಿಕರಿಗೆ ನ್ಯೂಟ್ರಿಷಿಯನ್ ಕಿಟ್ ವಿತರಣೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಸುರಣಿಗೆಯ ಭಾಸ್ಕರ್ ಸ್ವಾಮೀಜಿ ವಹಿಸಿದ್ದರು ಕಾರ್ಯಕ್ರಮದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಈರಣ್ಣ ಬಡಿಗೇರ ಮನೋಹರ್ ಪತ್ತಾರ ಭಾಸ್ಕರ ಸೊರಟೂರ ದ್ಯಾಮಣ್ಣ ಬಡಿಗೇರ ಮಹಾಂತೇಶ್ ಬಡಿಗೇರ ರಾಮಣ್ಣ ಬಡಿಗೇರ ರವಿ ಕುಸನೂರ ಚಂದ್ರು ಬಡಿಗೇರ ದೇವೇಂದ್ರಪ್ಪ ಸಂಕಲಿಪುರ ಈರಣ್ಣ ಬಡಿಗೇರ ಮಾನಪ್ಪ ಬಡಿಗೇರ ಈಶ್ವರ ಮೇಲ್ಮಾಳಗಿ ಎಲ್ಲಮ್ಮ ಹುಲ್ಲೂರ ಸೇರಿದಂತೆ ಸಮಾಜದ ಮುಖಂಡರು ಗ್ರಾಮಸ್ಥರು ಇದ್ದರು.