ಕಲೋತ್ಸವ ಕಾರ್ಯಕ್ರಮ
ಲಕ್ಷ್ಮೇಶ್ವರ,ಸೆ.21:ಪಟ್ಟಣದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಲಕ್ಷ್ಮೇಶ್ವರ ದಕ್ಷಿಣ ಮತ್ತು ಉರ್ದು ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‍ಎನ್ ನಾಯಕ ಅವರು ಮಕ್ಕಳಲ್ಲಿ ಸೂಕ್ತವಾಗಿರುವ ಪ್ರತಿಭೆಯನ್ನು ಗುರುತಿಸಲು ಇಂತಹ ವೇದಿಕೆಗಳು ಅವಶ್ಯಕ ಎಂದರು.
ಇಂದು ಮಕ್ಕಳಿಗೆ ಪಠ್ಯಕ್ರಮಕ್ಕಿಂತಲೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ ನೀತಿಗಳು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ . ಇಂದಿನ ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಿದ್ದು ಅದರ ಬದಲಾಗಿ ಮಕ್ಕಳಲ್ಲಿ ಆದರ್ಶತ್ವ ಸಹೋದರತೆ ಬ್ರಾತೃತ್ವ ಬೆಳಸುವ ಸಮಾಜ ಸುಧಾರಕರನ್ನು ನಿರ್ಮಿಸುವ ನಿಟ್ಟಿನಲ್ಲಿ ಶಿಕ್ಷಣದಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.
ಅನೇಕ ಮಕ್ಕಳು ಕಲೆ ಹೊಂದಿದ್ದರು ಅವುಗಳನ್ನು ಹೊರಹೊಮ್ಮಲು ಅವಕಾಶಗಳಿರಲಿಲ್ಲ ಈಗ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗ್ರಾಮಮಟ್ಟದಿಂದ ರಾಜ್ಯಮಟ್ಟದ ವರೆಗೆ ಪ್ರತಿಭೆಗಳನ್ನು ಗುರುತಿಸಲು ಸಂಘಟಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್‍ಎಸ್ ರಾಮನಗೌಡರ ಬಿಎಸ್ ಭಜಂತ್ರಿ ಮಾತನಾಡಿದರು. 9 ಕ್ಲಸ್ಟರ್ನ ಪ್ರತಿಭಾ ಕಾರಂಜಿ ವಿಜೇತ ವಿದ್ಯಾರ್ಥಿಗಳಿಗೆ ಬಿ ಆರ್ ಪಿ ಈಶ್ವರ ಮೆಡ್ಲೇರಿ ಮತ್ತು ಬಿಎಂ ಯರಗುಪ್ಪಿ ಬಹುಮಾನ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಚಿದಾನಂದ ಬೇವಿನ ಮರದ ವಹಿಸಿದ್ದರು ವೇದಿಕೆಯಲ್ಲಿ ಎಸ್ ಡಿ ಲಮಾಣಿ ಪ್ರಗತಿ ತಾವರೆ ಎಸ್ ಕೆ ಹವಾಲ್ದಾರ್ ಇದ್ದರು.
ಸಿ ಆರ್ ಪಿ ಸತೀಶ್ ಬೊಮಲೆ ಕಾವ್ಯ ಬಚಲಾಪುರ ಸರೋಜಾ ಬಲೂಚಿಗಿ ನಂದ ಪಶುಪತಿಹಾಳ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಮೇಶ್ ನೇಕಾರ ಎನ್. ಎ ಮುಲ್ಲಾ ಜ್ಯೋತಿ ಗಾಯಕ್ವಾಡ ಜಿಬಿ ಸುಗಜಾನರ ಜಿಎನ್ ಮೆಳ್ಳ ಳ್ಳಿ ಎಂಎಸ್ ಹುಣಸಿ ಮರದ ಮತ್ತಿತರರು ಇದ್ದರು.