ಹನುಮನ ನೆನೆದರೆ ಹಾರಿ ಹೋಗುವುದು ಪಾಪ
ಕಲಬುರಗಿ:ಏ.24: ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿಯನ್ನು ಮಂಗಳವಾರ ವೈಭವದಿಂದ ಆಚರಿಸಲಾಯಿತು. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸೂರ್ಯೋದಯ ಕಾಲಕ್ಕೆ ಶ್ರೀ ಹನುಮಂತ ದೇವರ ಜನ್ಮೋತ್ಸವ ತೊಟ್ಟಿಲ ಸೇವೆ ನೆರವೇರಿತು. ನಂತರ ಅರ್ಚಕರಾದ ಗುಂಡಾಚಾರ್ಯ ಜೋಶಿ ಅವರ ನೇತೃತ್ವದಲ್ಲಿ ಪವಮಾನ ಹೋಮ. ಸತ್ಯನಾರಾಯಣ ಪೂಜೆ ನೆರವೇರಿತು. ನಂತರ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರಿಂದ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು. ನಂತರ ಪಂ ವೆಂಕಣ್ಣಾಚಾರ್ಯ ಮಳಖೇಡ ಅವರಿಂದ ಸುಂದರಕಾಂಡ ಪ್ರವಚನ.
ನಂತರ ನೈವ್ಯದ್ಯ ಮಹಾಮಂಗಳಾರತಿ ನೆರವೇರಿತು. ಹಿಂಗುಲಾಂಬಿಕ ಆಯುರ್ವೇದ ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಗುಂಡಾಚಾರ್ಯ ಜೋಶಿ ಅವರು ಮಾತನಾಡುತ್ತ. ಸಕಲ ಕಷ್ಟಗಳನ್ನು ದುಃಖಗಳು ನಿವಾರಣೆ ಆಗಬೇಕಾದರೆ ಹನುಮಂತ ದೇವರ ಸೇವೆ ಮಾಡಬೇಕು. ಜೀವೋತ್ತಮರಾದ ಹನುಮಂತ ದೇವರ ದರ್ಶನ ಮಾಡಿದರೆ ಸಕಲ ಪಾಪಗಳು ಹಾರಿಹೋಗುತ್ತವೆ ಎಂದರು. ಶ್ರೀ ರಾಮ ದೇವರ ಸೇವೆಯನ್ನು ನಿರಂತರ ಮಾಡಿ ಭಕ್ತಿ ಹೇಗೆ ಮಾಡಬೇಕೆಂದು ಎಲ್ಲರಿಗೂ ತಿಳಿಸಿದ ಮಾಹಾಮಹಿಮರು ಹನುಮಂತ ಎಂದರು.
ಡಿ ವಿ ಕುಲಕರ್ಣಿ, ಶಾಮರಾವ ಕುಲಕರ್ಣಿ, ಗೋಪಾರಾವ, ಮೋತಿರಾಮ್ ಪವಾರ್, ಭಿಮಾಚಾರ್ಯ ಜೋಶಿ, ಗುರುರಾಜ್ ಕುಲಕರ್ಣಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.